ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ವಾಸು ನನ್ನ ಅಡ್ಡ ಹೆಸರು: 'ವಾಸು ನಾನು ಪಕ್ಕ ಕಮರ್ಷಿಯಲ್ ' ನಿರ್ದೇಶಕ ಅಜಿತ್ ವಾಸನ್ ಉಗ್ಗಿನ್

ಅನಿಸ್ ತೇಜಸ್ವರ್ ಅಭಿನಯದ ' ವಾಸು ನಾನು ಪಕ್ಕ ಕಮರ್ಷಿಯಲ್ ' ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಇದರ ಹಿಂದಿನ ಕುತೂಹಲಭರಿತ ಕಥೆಯನ್ನು ನಿರ್ದೇಶಕ ಅಜಿತ್ ವಾಸನ್ ಉಗ್ಗಿನಾ ಹೇಳಿದ್ದಾರೆ.

ಅನಿಸ್ ತೇಜಸ್ವರ್ ಅಭಿನಯದ  ' ವಾಸು ನಾನು ಪಕ್ಕ ಕಮರ್ಷಿಯಲ್  '  ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ.  ಇದರ ಹಿಂದಿನ ಕುತೂಹಲಭರಿತ ಕಥೆಯನ್ನು ನಿರ್ದೇಶಕ ಅಜಿತ್ ವಾಸನ್ ಉಗ್ಗಿನಾ ಹೇಳಿದ್ದಾರೆ.

ನಿಜ ಜೀವನದಲ್ಲಿ  ವಾಸು ನನ್ನ ಅಡ್ಡ ಹೆಸರು, ನಾನು ಚಿತ್ರದ ಕಥೆ ಬರೆಯಲು ಆರಂಭಿಸಿದಾಗ  ನನ್ನ ಸ್ವಂತ ಹೆಸರನ್ನೇ ಚಿತ್ರಕ್ಕೀಡಲು ತೀರ್ಮಾನಿಸಿದ್ದಾಗಿ  ಅಜಿತ್ ವಾಸನ್ ಹೇಳುತ್ತಾರೆ.

ಈ ಹೆಸರು ಚಿತ್ರದ ನಾಯಕನಿಗೆ ಸಂಬಂಧಪಟ್ಟಿದ್ದಲ್ಲ. ಆದರೆ, ನಾಯಕಿ ಪಾತ್ರಕ್ಕೆ ಸಂಬಂಧಿಸಿದ್ದು,  ಪಕ್ಕ ಕಮರ್ಷಿಯಲ್  ಟೈಟಲ್ ನಿಂದಲೇ ಸಲಹೆ ನೀಡುತ್ತದೆ ಎಂದರು.

ಅಕಿರಾ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ವಾಸು ಕಥೆಯನ್ನು ಅನಿಸ್ ಗೆ ಹೇಳಿದ್ದೆ. ಅಕಿರಾ ನಿರ್ದೇಶಕ ನವೀನ್ ರೆಡ್ಡಿ ನಮ್ಮಗೆ ಹತ್ತಿರದ ಸ್ನೇಹಿತರಾಗಿದ್ದು, ಅವರ ಮೊದಲ ಚಿತ್ರದಲ್ಲಿ  ಕೆಲಸ ಮಾಡಿದ್ದೇವು. ಆ ಸಂದರ್ಭದಲ್ಲಿ ಚಿತ್ರ ಕಥೆ ಬಗ್ಗೆ ವಿವರಿಸಿದ್ದೆ. ಆದರೆ. ತದನಂತರ  ಬಿಲ್ಲಿಂಗಲ್ ತಮಿಳು- ತೆಲುಗು ಚಿತ್ರದ ಚಿತ್ರೀಕರಣಕ್ಕಾಗಿ ಅಮೆರಿಕಾಕ್ಕೆ ತೆರಳಿದ್ದರಿಂದ ಕೆಲಸ ಇನ್ನೂ ಮುಂದುವರೆದಿದೆ.  ನಂತರ ಅನಿಸ್ ಈ ವಿಷಯದ ಬಗ್ಗೆ ಚಿತ್ರ ಮಾಡುವಂತೆ ಕೇಳಿಕೊಂಡರು ನಂತರ  ಚಿತ್ರ ಕೈಗೆತ್ತಿಕೊಂಡಿದ್ದಾಗಿ ಅಜಿತ್ ಹಿಂದಿನ ಕಥೆ ವಿವರಿಸಿದರು.

ಅನಿಸ್ ಚಿತ್ರ ನಿರ್ಮಾ ಮಾಡುತ್ತಿದ್ದು, ಹೇಗೆ ಸಿನಿಮಾ ಸ್ವೀಕರಿಸಲ್ಪಡುತ್ತದೆ ಎಂಬುದು ಕೂತೂಹಲ ಮೂಡಿಸಿದೆ .ಅಕಿರಾ ಸಂದರ್ಭದಲ್ಲಿ ಅನಿಸ್ ಜೊತೆಗಿನ ಒಡನಾಟದಿಂದಾಗಿ ಅವರೊಟ್ಟಿಗೆ ಕೆಲಸ ಮಾಡುವುದು ಸುಲಭವೆನಿಸಿ ಈ ಚಿತ್ರ ಕೈಗೆತ್ತಿಕೊಂಡಿದ್ದು, ಉತ್ತಮ ಕೆಲಸ ಮಾಡಿರುವುದಾಗಿ ಎಂದು  ಅಜಿತ್ ಹೇಳುತ್ತಾರೆ.

ಅನಿಸ್ ಉತ್ತಮ ನೃತ್ಯಪಟ್ಟು, ಅವರ ಡೈಲಾಗ್ ಡೆಲಿವರಿಯಲ್ಲಿ ಗಟ್ಟಿತನವಿದೆ. 10 ಪುಟಗಳಷ್ಟು ಡೈಲಾಗ್ ನನ್ನು ಪಟಪಟನೇ ಹೇಳುತ್ತಾರೆ. ನನ್ನ ಚಿತ್ರದಿಂದ ಅವರಿಗೆ ನಾಯಕನ ಪಾತ್ರಕ್ಕೆ ಮಹತ್ವದ ಸಿಗಲಿದೆ. ಇದು ಅವರಿಗೆ ಉತ್ತಮ ಹೆಸರು ತಂದುಕೊಡಲಿದೆ  ಎಂಬ ಭರವಸೆ ಇಟ್ಟುಕೊಂಡಿರುವುದಾಗಿ ಅಜಿತ್ ಹೇಳಿದರು.

ವಾಸು ನಾನು ಪಕ್ಕ ಕಮರ್ಷಿಯಲ್ ಚಿತ್ರವನ್ನು ಅನಿಸ್ ತೇಜಸ್ವರ್ ನಿರ್ಮಿಸುತ್ತಿದ್ದು, ಅಜನೀಶ್ ಬಿ ಲೊಕಾನಾಥ್  ಸಂಗೀತ ಸಂಯೋಜಿಸಿದ್ದಾರೆ. ದಿಲಿಪ್ ಚಕ್ರವರ್ತಿ ಅವರ ಕ್ಯಾಮರಾ ಕೆಲಸವಿದ್ದು, ಶ್ರೀಕಾಂತ್  ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT