ಸುಮಾರು 10 ವರ್ಷಗಳಿಂದಲೂ ಕನ್ನಡ ಚಿತ್ರೋದ್ಯಮದಲ್ಲಿರುವ ಶುಭಾ ಪೂಂಜಾ ಈಗಲೂ ಕೂಡಾ ತನ್ನ ಭವಿಷ್ಯಕ್ಕಾಗಿ ಉತ್ತಮ ಚಿತ್ರ ಮಾಡಬೇಕೆಂಬ ಕಡು ಬಯಕೆ ಹೊಂದಿದ್ದಾರೆ.
ನಾನಿನ್ನೂ ಪರದೆ ಹಿಂದೆ ಸರಿದಿಲ್ಲ. ನನ್ನಲ್ಲಿ ಸಾಮರ್ಥ್ಯವಿದೆ, ಧೀರ್ಘಕಾಲದಿಂದಲೂ ಪ್ರೇಕ್ಷಕರು ತಮ್ಮನ್ನು ಬೆಂಬಲಿಸಿದ್ದು, ಮನರಂಜನೆ ನೀಡುವುದನ್ನು ಮುಂದುವರೆಸುವುದಾಗಿ ಅವರು ಹೇಳಿದ್ದಾರೆ.
ಸಿಟಿ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಶುಭಾ ಪೂಂಜಾ, ಆಕೆಯ ಮುಂದಿನ ಚಿತ್ರ 'ಕೆಲವು ದಿನಗಳ ನಂತರ ' ಬಿಡುಗಡೆಗಾಗಿ ಕಾಯುತ್ತಿರುವುದಾಗಿ ತಿಳಿಸಿದರು. 10 ವರ್ಷಗಳ ನಂತರ ಆಕೆ ಹಿರೋಯಿನ್ ಆಗಿ ವೃತ್ತಿ ಬದುಕು ಆರಂಭಿಸಿದ್ದಾಗ ಸೀಮಿತ ಪಾತ್ರಗಳಿದ್ದವು. ಆದರೆ, ಈಗ ಚಿತ್ರೋದ್ಯಮ ಬದಲಾಗಿದೆ. ಇಂದು ಹಿರೋಯಿನ್ ಅನುಭವವನ್ನು ಪಕ್ಕಾ ತಳ್ಳಲಾಗುತ್ತದೆ. ಚೆನ್ನಾಗಿ ಅಭಿನಯಿಸಬೇಕಾಗುತ್ತದೆ ಎಂದು ಹೇಳಿದರು.
ತನ್ನ ವೃತ್ತಿ ಬದುಕಿನಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸುವುದಾಗಿ ಹೇಳುವ ಶುಭಾ ಪೂಂಜಾ, ಕೆಲವೇ ನಿರ್ದಿಷ್ಟ ಪಾತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳಾ ಕೇಂದ್ರಿತ ಚಿತ್ರಗಳಲ್ಲಿ ಭಾಗವಾಗಿರಲು ಇಷ್ಟ ಅಂತಾರೆ.
ಕೆಲ ಪ್ರೇಕ್ಷಕರು ಮೊಗ್ಗಿನ ಮನಸ್ಸು ಚಿತ್ರದಲ್ಲಿನ ಹುಡುಗಿಯಾಗಿ ನೋಡಲು ಇಷ್ಟಪಡುತ್ತಾರೆ. ಆದರೆ, ಬಬ್ಲಿ ಗರ್ಲ್ಸ್ ಪಾತ್ರದಲ್ಲಿ ನಟಿಸಿರುವುದಾಗಿ ಹೇಳುವ ಶುಂಭಾ, ಡಜನ್ ಗಟ್ಟಲೆ ವಾಣಿಜ್ಯತ್ಮಾಕ ಚಿತ್ರಗಳು ನನ್ನ ಮುಂದೆ ಬರುತ್ತಿವೆ . ಆದರೆ, ಒಳ್ಳೆಯ ಸಂದೇಶವಿರುವ ಚಿತ್ರಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು.
ಗ್ಲಾಮರಸ್ ಪಾತ್ರದಲ್ಲಿಯೇ ನಟಿಸುವಂತೆ ಹಲವು ಜನರು ಕೇಳುತ್ತಾರೆ. ಕೆಲವರು ಹಿರೋಹಿನ್ ಕೇಂದ್ರಿತ ಪಾತ್ರದಲ್ಲಿ ನಟಿಸುವಂತೆ ಸಲಹೆ ನೀಡುತ್ತಾರೆ. ಆದರೆ. ತೆರೆ ಮೇಲೆ ವಿವಿಧ ರೀತಿಯ ಪಾತ್ರಗಳಲ್ಲಿ ನಟಿಸಲು ಇಷ್ಟವಿರುವುದಾಗಿ ಶುಭಾ ಹೇಳುತ್ತಾರೆ.
ಶುಭಾ ಪೂಂಜಾ ಅಭಿನಯದ ಕೆಲವೇ ದಿನಗಳ ನಂತರ ಚಿತ್ರವನ್ನು ಶ್ರೀ ನಿ ನಿರ್ದೇಶಿಸುತ್ತಿದ್ದು, ಹಾಸ್ಯದೊಂದಿಗೆ ಹಾರರ್ ಚಿತ್ರವಾಗಿದ್ದು, ಯುವ ಜನಾಂಗಕ್ಕೆ ಒಳ್ಳೆಯ ಸಂದೇಶ ನೀಡಲಿದೆ ಎಂದರು.
ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಂಡಿರುವವರಿಗೆ ಆಗಿದ್ದು, ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪುವಂತೆ ನಿರ್ದೇಶಕರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವ ಯುವಜನಾಂಗದ ದೃಷ್ಟಿಕೋನವನ್ನು ಈ ಸಿನಿಮಾ ಬದಲಾವಣೆ ಮಾಡಲಿದೆ ಎಂಬ ವಿಶ್ವಾಸವಿರುವುದಾಗಿ ಶುಭಾ ಪೂಂಜಾ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics