ಸಾರಾ ಹರೀಶ್, ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ 
ಸಿನಿಮಾ ಸುದ್ದಿ

ತಮ್ಮದೇ ಚಿತ್ರಕ್ಕೆ ಮಂಜು ಮಾಂಡವ್ಯ ನಾಯಕ!

ಶ್ರೀ ಭರತ ಬಾಹುಬಲಿ ಚಿತ್ರಕ್ಕಾಗಿ ಮಂಜು ಮಾಂಡವ್ಯ ತುಂಬಾ ಶ್ರಮ ಹಾಕುತ್ತಿದ್ದಾರೆ. ಅವರ ನಿರ್ದೇಶನ...

ಶ್ರೀ ಭರತ ಬಾಹುಬಲಿ ಚಿತ್ರಕ್ಕಾಗಿ ಮಂಜು ಮಾಂಡವ್ಯ ತುಂಬಾ ಶ್ರಮ ಹಾಕುತ್ತಿದ್ದಾರೆ. ಅವರ ನಿರ್ದೇಶನದಲ್ಲಿಯೇ ಮೂಡಿಬರುತ್ತಿರುವ ಚಿತ್ರದಲ್ಲಿ ನಟನೆ ನಿರ್ದೇಶನ ಮತ್ತು ಕಾರ್ಯಕಾರಿ ನಿರ್ಮಾಪಕರಾಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್ ನಲ್ಲಿ ಚಿತ್ರ ತಯಾರಾಗುತ್ತಿದೆ.

ಚಿತ್ರದ ಮೊದಲ ಭಾಗದ ಚಿತ್ರೀಕರಣ ಮುಗಿದಿದ್ದು ಜುಲೈ 2ನೇ ವಾರದಲ್ಲಿ ಮುಂದಿನ ಭಾಗದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಮಂಜು ಮಾಂಡವ್ಯ ಜೊತೆಗೆ ಚಿಕ್ಕಣ್ಣ ಕೂಡ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಸಾರಾ ಹರೀಶ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

45 ದಿನಗಳ ಚಿತ್ರೀಕರಣಕ್ಕೆ ನಾವು ಯೋಜನೆ ಹಾಕಿಕೊಂಡಿದ್ದು 12 ದಿನಗಳ ಶೂಟಿಂಗ್ ಮುಗಿದಿದೆ ಎನ್ನುವ ಮಂಜು ಮಾಂಡವ್ಯ ತಾವೇ ಏಕೆ ಚಿತ್ರದ ಹೀರೋ ಆದರು ಎಂಬುದಕ್ಕೆ ಈ ರೀತಿ ವಿವರಣೆ ನೀಡುತ್ತಾರೆ.  ರಾಜಾ ಹುಲಿಯಲ್ಲಿ ನನ್ನ ನಟನೆ ನೋಡಿ ಜನ ಗುರುತಿಸಿದರು.

ಯಶ್ ನಾಯಕನಾಗಿ ಅಭಿನಯಿಸಿರುವ ರಾಜಾಹುಲಿಯಲ್ಲಿ ನನ್ನ ನಟನೆಯನ್ನು ಗುರುತಿಸುವ ಅವಕಾಶ ಸಿಕ್ಕಿತು. ನಾನು ಕ್ಯಾಮರಾ ಮುಂದೆ ನಿಂತರೆ ಸುಂದರವಾಗಿ ಕಾಣುತ್ತೇನೆ ಮತ್ತು ಗ್ರಾಮೀಣ ಸೊಗಡು ಇರುವ ಪಾತ್ರವನ್ನು ಮಾಡಬೇಕು ಎಂದು ಸ್ನೇಹಿತರು ಮತ್ತು ಅಭಿಮಾನಿಗಳು ಹೇಳುತ್ತಿದ್ದರು. ಆಗ ಶ್ರೀ ಭರತ ಬಾಹುಬಲಿಯಂಥ ಕಥೆ ಸಿಕ್ಕಿತು. ಇದರಲ್ಲಿನ ಕಥೆಯ ಸಾರ ಹಾಸ್ಯಾಸ್ಪದವಾಗಿದೆ. ಇದನ್ನು ಚಿಕ್ಕಣ್ಣ ಜೊತೆ ಚರ್ಚೆ ನಡೆಸಿದೆ. ಅವರು ಕೂಡ ಒಪ್ಪಿಕೊಂಡರು. ಚಿತ್ರಕಥೆ ಬರೆಯುತ್ತಾ ಹೋದಂತೆ ನನಗೆ ಈ ಪಾತ್ರ ಹೊಂದಿಕೆಯಾಗುತ್ತದೆ ಎನಿಸಿತು. ಹೀಗಾಗಿ ಚಿತ್ರ ತಯಾರಿಸಲು ಆರಂಭಿಸಿದೆ ಎನ್ನುತ್ತಾರೆ.

ಚಿತ್ರದಲ್ಲಿ ನಾಯಕನನ್ನು ವೈಭವೀಕರಿಸುವ ವಿಷಯವಿಲ್ಲ ಹೀಗಾಗಿ ಯಾವುದೇ ಸ್ಟಾರ್ ನಟರನ್ನು ಕೇಳಲಿಲ್ಲ. ವ್ಯಾಪಾರದ ದೃಷ್ಟಿಯಿಂದ ನಾನು ಮತ್ತು ಚಿಕ್ಕಣ್ಣ ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದೇವೆ ಹೀಗಾಗಿ ನಾವು ಆ ಪಾತ್ರಕ್ಕೆ ಸೂಕ್ತವಾಗುತ್ತೇವೆ ಎನಿಸಿತು ಎನ್ನುತ್ತಾರೆ ಮಂಜು ಮಾಂಡವ್ಯ.

ರಂಗಭೂಮಿ ಹಿನ್ನಲೆಯಿಂದ ಬಂದವರಾಗಿರುವುದರಿಂದ ಮಂಜು ಮಾಂಡವ್ಯಗೆ ಹಲವು ಕೆಲಸಗಳನ್ನು ನಿಭಾಯಿಸುವುದು ಕಷ್ಟವೆಂದು ಅನಿಸಲಿಲ್ಲವಂತೆ. ಮಾಸ್ಟರ್ ಪೀಸ್ ನಂತಹ ಚಿತ್ರಗಳನ್ನು ನಿರ್ದೇಶಿಸಿದ ಅವರು 30ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ ಬರೆದಿದ್ದಾರೆ.

ಶ್ರೀ ಭರತ ಬಾಹುಬಲಿಯಲ್ಲಿ ಸ್ಟಾನ್ ಎಂಬ ವಿದೇಶಿಗ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ನಟ ರಿಶಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬೈಯ ಪ್ರವೀಣ್ ಎಂಬುವವರ ಛಾಯಾಗ್ರಹಣ ಮತ್ತು ಮಣಿಕಾಂತ್ ಕದ್ರಿಯವರ ಸಂಗೀತ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT