ಸಿನಿಮಾ ಸುದ್ದಿ

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಆರ್ ಚಂದ್ರು ನಿರ್ದೇಶನದ 'ಐ ಲವ್ ಯು'

Sumana Upadhyaya

ಕನಕ ಚಿತ್ರದ ನಂತರ ನಿರ್ದೇಶಕ ಆರ್.ಚಂದ್ರು ದ್ವಿಭಾಷೆಯಲ್ಲಿ ಚಿತ್ರ ತಯಾರಿಸಲು ಮುಂದಾಗಿದ್ದಾರೆ.

ಐ ಲವ್ ಯು ಎಂಬ ಶೀರ್ಷಿಕೆಯಡಿ ಎರಡು ಹೃದಯಗಳ ಚಿತ್ರ ಹಾಕಿ ಟ್ಯಾಗ್ ಮಾಡಲಾಗಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ತಾಜ್ ಮಹಲ್ ಮತ್ತು ಚಾರ್ ಮಿನಾರ್ ನಂತರ ಪ್ರೀತಿ, ಪ್ರೇಮಕ್ಕೆ ಸಂಬಂಧಪಟ್ಟ ಚಿತ್ರವನ್ನು ಮಾಡುತ್ತಿದ್ದಾರೆ.

ಚಿತ್ರದ ಹಾಡಿನ ರೆಕಾರ್ಡಿಂಗ್ ಏಪ್ರಿಲ್ 1ರಂದು ಆರಂಭವಾಗಲಿದ್ದು ಏಪ್ರಿಲ್ 20ರಿಂದ ಶೂಟಿಂಗ್ ಆರಂಭವಾಗಲಿದೆ. ಚಿತ್ರದ ಕಲಾವಿದರು ಮತ್ತು ಹೆಚ್ಚಿನ ಮಾಹಿತಿಗಳನ್ನು ನಿರ್ದೇಶಕರು ಮುಂದಿನ ದಿನಗಳಲ್ಲಿ ಘೋಷಿಸಿದ್ದಾರೆ.

SCROLL FOR NEXT