ಸಿನಿಮಾ ಸುದ್ದಿ

'ಕಿಸ್' ಚಿತ್ರಕ್ಕೆ ಭರದ ಚಿತ್ರೀಕರಣ

Sumana Upadhyaya

ಎಪಿ ಅರ್ಜುನ್ ಅವರ ಕಿಸ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಚಿತ್ರತಂಡ ಡಬ್ಬಿಂಗ್ ಸ್ಟುಡಿಯೊದಲ್ಲಿ ಕಾರ್ಯನಿರತವಾಗಿದೆ. ಚಿತ್ರದ ಇನ್ನೆರಡು ಹಾಡುಗಳ ಚಿತ್ರೀಕರಣ ಬಾಕಿಯಿದ್ದು ಇದೇ 25ರಿಂದ ಆರಂಭವಾಗಲಿದೆ. ಹೊಸಬರಾದ ವಿರಾಟ್ ಮತ್ತು ಶ್ರೀಲೀಲಾ ನಟಿಸುತ್ತಿದ್ದು ಬೆಂಗಳೂರಿನಲ್ಲಿ ನಡೆಯುವ ರೊಮ್ಯಾಂಟಿಕ್ ಸನ್ನಿವೇಶವೊಂದರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

ಚಿತ್ರದ ಕೊನೆಯ ಹಾಡನ್ನು ಆಸ್ಚ್ರೇಲಿಯಾದಲ್ಲಿ ಚಿತ್ರೀಕರಿಸುವ ಯೋಜನೆಯಲ್ಲಿ ಚಿತ್ರತಂಡವಿದೆ.

ಮೊದಲ ಹಾಡಿನ ಚಿತ್ರೀಕರಣವನ್ನು ಮೂರು ದಿನಗಳಲ್ಲಿ ಮುಗಿಸುವ ಯೋಜನೆಯಲ್ಲಿ ಚಿತ್ರತಂಡವಿದೆ. ಜೂನ್ 1ರಂದು ಆಸ್ಟ್ರೇಲಿಯಾಗೆ ಹೋಗಲಿದ್ದೇವೆ. ಜೂನ್ 10ರ ವೇಳೆಗೆ ಇಡೀ ಚಿತ್ರದ ಕೆಲಸ ಮುಗಿಸುವ ಯೋಜನೆಯಲ್ಲಿದ್ದೇವೆ ಎನ್ನುತ್ತಾರೆ ನಿರ್ದೇಶಕರು.
ರವಿ ಕುಮಾರ್ ನಿರ್ಮಾಣದಲ್ಲಿ ಚಿತ್ರ ತಯಾರಾಗುತ್ತಿದ್ದು,ವಿ.ಹರಿಕೃಷ್ಣ ಅವರ ಸಂಗೀತ ಮತ್ತು ಎಜೆ ಶೆಟ್ಟಿ ಕ್ಯಾಮರಾ ಕೈಚಳಕವಿದೆ.

SCROLL FOR NEXT