ಸಾಮಾಜಿಕ ಜಾಲತಾಣಗಳಲ್ಲಿ ಸೋನಮ್ ಕಪೂರ್ ಮಂಗಳಸೂತ್ರದ ಬಗ್ಗೆ ಟ್ರೋಲ್
ಮುಂಬೈ: ಇತ್ತೀಚೆಗಷ್ಟೇ ವಿವಾಹವಾಗಿದ್ದ ಬಾಲಿವುಡ್ ನಟಿ ಸೋನಮ್ ಕಪೂರ್ ಮಂಗಳ ಸೂತ್ರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೊಳಗಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ವಿವಾಹಿತ ಮಹಿಳೆಯರು ಮಂಗಳ ಸೂತ್ರವನ್ನು ಕೊರಳಲ್ಲಿ ಧರಿಸುತ್ತಾರೆ. ಆದರೆ ಸೋನಮ್ ಕಪೂರ್ ಮಂಗಳಸೂತ್ರವನ್ನು ಬ್ರೇಸ್ ಲೆಟ್ ರೀತಿಯಲ್ಲಿ ಕೈಯ್ಯಲ್ಲಿ ಧರಿಸಿರುವುದು ವೆರೆ ಡಿ ವೆಡ್ಡಿಂಗ್ ಚಿತ್ರದ ಪ್ರಚಾರದ ವೇಳೆ ಬೆಳಕಿಗೆ ಬಂದಿದೆ.
ಸೋನಂ ಕಪೂರ್ ಮಂಗಳ ಸೂತ್ರವನ್ನು ಕೈಯಲ್ಲಿ ಧರಿಸಿರುವುದನ್ನು ಟ್ರೋಲ್ ಮಾಡಿರುವ ಜಾಲತಾಣಿಗರು ಸೋನಂ ಕಪೂರ್ ಭಾರತೀಯ ಸಂಸ್ಕೃತಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಅಸಮಾಧಾನಗೊಂಡಿದ್ದಾರೆ. ಇನ್ನೂ ಕೆಲವರು ಮಂಗಳ ಸೂತ್ರ ಧರಿಸದೇ ಇದ್ದರೆ, ಧಾರ್ಮಿಕತೆಯನ್ನು ಪಾಲಿಸದಿದ್ದರೆ ಬೇಡ, ಆದರೆ ಈ ರೀತಿ ಮಾಡುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಸಂಸ್ಕೃತಿಯನ್ನು ಪಾಲಿಸದಿದ್ದರೆ ಏನೂ ಸಮಸ್ಯೆ ಇಲ್ಲ ಆದರೆ ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ತಿರುಚುವುದು ತಪ್ಪು ಎಂದು ಮತ್ತೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ.