ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ "ಮೀಟೂ" ಆರೋಪಕ್ಕೂ ನನಗೂ ಯಾವ ಸಂಬಂಧವಿಲ್ಲ ಎಂದು ನಟ ಚೇತನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಡನೆ ಮಾತನಾಡಿದ ನಟ ಚೇತನ್ "ಮೀಟೂ ಪ್ರಕರಣದಲ್ಲಿ ವಿನಾ ಕಾರಣ ನನ್ನ ಹೆಸರು ಸೇರಿಸಿಕೊಳ್ಳಲಾಗಿದೆ. ಇದು ನೋವಿನ ಸಂಗತಿಯಾಗಿದ್ದು ನಾನು ಯಾವ ತಪ್ಪೂ ಮಾಡಿಲ್ಲ.ನನ್ನ ಮೇಲಿನ ಎಲ್ಲಾ ಆರೋಪಗಳೂ ನಿರಾಧಾರವಾಗಿದೆ" ಎಂದರು.
ಚಿತ್ರರಂಗದ ನಟ ನಟಿಯರು ತಾಂತ್ರಿಕ ಸಿಬ್ಬಂದಿ ಸೇರಿದಂತೆ ಹಲವರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಸೇರಿ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ "ಪೈರ್" ಸಂಸ್ಥೆ ಸ್ಥಾಪನೆಯಾಗಿದೆ.ಇತ್ತೀಚೆಗೆ ಸಂಸ್ಥೆಯ ಧ್ಯೇಯೋದ್ದೇಶ ಹೇಳಿಕೊಳ್ಳುವುದಕ್ಕಾಗಿ ಕರೆದಿದ್ದ ಸಭೆಯಲ್ಲಿ ನಟಿ ಶ್ರುತಿ ಹರಿಹರನ್ ಭಾಗವಹಿಸಿ ಮೀಟೂ ಆರೋಪವನ್ನು ಮಾಡಿದ್ದರು. ಆ ಕಾರಣಕ್ಕಾಗಿ ನಾನೂ ಸಹ ಅವರ ಆರೋಪದಲ್ಲಿ ಪಾತ್ರವಹಿಸಿದ್ದೇನೆ ಎಂದು ಬಿಂಬಿಸುವುದು ತಪ್ಪು ಎಂದು ಅವರು ಹೇಳಿದ್ದಾರೆ.
ಶ್ರುತಿ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಸಂಬಂಧ "ಫೈರ್" ಸಂಸ್ಥೆಗೆ ಯಾವ ದೂರು ನೀಡಿರಲಿಲ್ಲ. ಕಳೆದ ಎರಡು ವರ್ಷಗಳ ಹಿಂದಿನ ಪ್ರಕರಣವಾಗಿದ್ದ ಕಾರಣ ನಾವೂ ಈ ಕುರಿತು ದೂರು ಸ್ವೀಕರಿಸಿರಲಿಲ್ಲ ಎನ್ನುವುದಾಗಿ ಹೇಳಿರುವ ಚೇತನ್ ಅಂದಿನ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ನಟಿ ಮಾಡಿದ ಆರೋಪದ ಹೊಂದೆ ನನ್ನ ಕೈವಾಡವಿದೆ ಎನ್ನುವ ಆರೋಪ ಕೇಳಿಬಂದಿದ್ದದ್ದು ನನಗೆ ತೀವ್ರ ನೋವು ಉಂಟು ಮಾಡಿದೆ ಎಂದರು.
ನಟಿ ಶ್ರುತಿ ಮೇಲೆ ಮಹಿಳಾ ಆಯೋಗ ಮುನಿಸು!
ನಟ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದ ಶ್ರುತಿಯ ಬಗ್ಗೆ ಮಹಿಳಾ ಆಯೋಗ ಮುನಿಸಿಕೊಂಡಿದೆ.ಈ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಆತೋಗದ ಅಧ್ಯಕ್ಷೆ ನಾಗಲಕ್ಷ್ಮಿ ಶ್ರುತಿಗೆ ಕರೆಮಾಡಿ ಲಿಖಿತ ಹಾಗೂ ಮೌಖಿಕ ಹೇಳಿಕೆ ದಾಖಲಿಸಿಕೊಡುವಂತೆ ಕೇಳಿದ್ದಾರೆ. ಆದರೆ ಇದ್ಯ್ವರೆಗೂ ಶ್ರುತಿ ಈ ಬಗ್ಗೆ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ.
ಶ್ರುತಿ ಪರವಾಗಿ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರೂ ಶ್ರುತಿ ಆಯೋಗದ ಫೋನ್ ಕರೆ ಅಥವಾ ಮೆಮೋಗೆ ಸರಿಯಾಗಿ ಪ್ರತಿಕ್ರಯಿಸದೆ ಇರುವುದ್ ಶ್ರುತಿ ಬಗ್ಗೆ ಆಯೋಗ ಮುನಿಸಿಕೊಳ್ಳುವಂತೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಶ್ರುತಿಗೆ ಸೋಮವಾರದೊಳಗೆ ಹೇಳಿಕೆ ನಿಡಬೇಕೆಂದು ಖಡಕ್ ಸಂದೇಶ ರವಾನಿಸಿದ್ದಾರೆ. ಇದು ಆಯೋಗವು ನಟಿಗೆ ನೀಡುವ ಕಡೆಯ ಅವಕಾಶವಾಗಿದೆ ಎಂದು ಅವರು ಹೇಳಿದ್ದಾರೆ.