ಸಿನಿಮಾ ಸುದ್ದಿ

ವೇದಿಕೆ ಮೇಲೆ ನಟಿ ಕಾಜಲ್ ಅಗರ್‌ವಾಲ್‌ಗೆ ಬಲವಂತವಾಗಿ ಕಿಸ್ ಕೊಟ್ಟ 'ಛೋಟಾ', ವಿಡಿಯೋ ವೈರಲ್!

Vishwanath S
ಹೈದರಾಬಾದ್: ದೇಶದಲ್ಲಿ ಮೀಟೂ ವಿವಾದಗಳು ಸದ್ದು ಮಾಡುತ್ತಿದ್ದು ಇದರ ನಡುವೆ ವೇದಿಕೆ ಮೇಲೆ ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್‌ಗೆ ಛಾಯಾಗ್ರಾಹಕ ಛೋಟಾ ಕೆ ನಾಯ್ಡು ಬಲವಂತವಾಗಿ ಕಿಸ್ ಮಾಡಿ ವಿವಾದ ಸೃಷ್ಟಿಸಿದ್ದಾರೆ.
ತೆಲುಗಿನ ಕವಚಂ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದ ಕಾಜಲ್ ಅಗರ್‌ವಾಲ್‌ರನ್ನು ವೇದಿಕೆಯಲ್ಲೇ ತಬ್ಬಿಕೊಂಡು ಬಲವಂತವಾಗಿ ಕೆನ್ನೆಗೆ ಚುಂಬಿಸಿದ್ದಾರೆ. 
ಕಾಜಲ್ ಅಗರ್‌ವಾಲ್‌ ಇದರಿಂದ ಕೊಂಚ ವಿಚಲಿತರಾದರೂ, ಕೂಡಲೇ ಸುಧಾರಿಸಿಕೊಂಡು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರು. ಛೋಟಾ ನನ್ನು ಕುಟುಂಬದಲ್ಲೊಬ್ಬರು, ಇದೇನು ಪರವಾಗಿಲ್ಲ ಎಂದು ಹೇಳಿದ್ದಾರೆ. 
ಇನ್ನು ವೇದಿಕೆ ಮೇಲಿದ್ದ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸನ್ ಮತ್ತು ಮೆಹ್ರೀನ್ ಫಿರ್ಜಾದಾ ಕೂಡ ಛೋಟಾ ನಡೆಯಿಂದ ಶಾಕ್ ಆಗಿದ್ದಾರೆ. ವೇದಿಕೆ ಮೇಲೆ ತಮ್ಮ ಪ್ರೀತಿಯ ನಟಿಗೆ ಛೋಟಾ ಬಲವಂತವಾಗಿ ಕಿಸ್ ಮಾಡಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
SCROLL FOR NEXT