ಅದ್ದೂರಿ ವಿವಾಹದ ಬಳಿಕ ಭಾರತಕ್ಕೆ ಬಂದಿಳಿದ ದೀಪಿಕಾ-ರಣವೀರ್ 
ಸಿನಿಮಾ ಸುದ್ದಿ

ಅದ್ದೂರಿ ವಿವಾಹದ ಬಳಿಕ ತವರಿಗೆ ಬಂದಿಳಿದ ದೀಪಿಕಾ-ರಣವೀರ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ಬಾಲಿವುಡ್ ಕ್ಯೂಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಭಾರತಕ್ಕೆ ಆಗಮಿಸಿದ್ದಾರೆ...

ಮುಂಬೈ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ಬಾಲಿವುಡ್ ಕ್ಯೂಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಭಾರತಕ್ಕೆ ಆಗಮಿಸಿದ್ದಾರೆ. 
ಮುಂಬೈನ ತಮ್ಮ ನಿವಾಸದ ಬಳಿ ಕಾಣಿಸಿಕೊಂಡ ದಂಪತಿಗಳು, ಸಂತಸದಲ್ಲಿ ಎಲ್ಲರಿಗೂ ನಮಸ್ಕರಿಸಿದರು. 
ಪ್ರೀತಿಯ ಪತ್ನಿಯನ್ನು ರಣವೀರ್ ಕೈ ಹಿಡಿದು ಹೊರಗೆ ಕರೆತಂದರು. ಇಬ್ಬರು ಹೊಸ ಜೀವನದ ಖುಷಿಯಲ್ಲಿದ್ದರು. ಹೊರಗೆ ಬಂದ ಬಳಿಕ ದಂಪತಿಗಳಿಬ್ಬರೂ ಮಾಧ್ಯಮಗಳತ್ತ ಕೈಬೀಸಿ, ನಮಸ್ಕಾರ ತಿಳಿಸಿ ಒಳ ನಡೆದರು.
ಕೆಲ ದಿನಗಳ ಹಿಂದಷ್ಟೇ ಇಟಲಿಯ ಲ್ಯಾಂಬಾರ್ಡಿಯಲ್ಲಿ ಕೊಂಕಣಿ ಹಾಗೂ ಸಿಂಧಿ ಶೈಲಿಯಲ್ಲಿ ಸಪ್ತಪದಿ ತುಳಿದಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಇದೀಗ ಭಾರತಕ್ಕೆ ಆಗಮಿಸಿದ್ದಾರೆ. 
ಇನ್ನು ಬೆಂಗಳೂರು ಹಾಗೂ ಮುಂಬೈನಲ್ಲಿ ಚಿತ್ರರಂಗದ ಗಣ್ಯರು ಹಾಗೂ ಆತ್ಮೀಯರಿಗಾಗಿ ಈ ಜೋಡಿ ಆರತಕ್ಷತೆ ಸಮಾರಂಭವನ್ನು ಆಯೋಜಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್