ಬೆಂಗಳೂರು: ಟ್ರೈಲರ್ ಬಿಡುಗಡೆಯಿಂದ ದೇಶಾದ್ಯಂತ ಹೊಸ ಹವಾ ಕ್ರಿಯೇಟ್ ಮಾಡಿರುವ ಕೆಜಿಎಫ್ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.
ದಾಖಲೆ ಮೊತ್ತಕ್ಕೆ ಕೆಜಿಎಫ್ ಆಡಿಯೋ ಹಕ್ಕು ಮಾರಾಟವಾಗಿದೆ. ಲಹರಿ ಆಡಿಯೋ ಸಂಸ್ಥೆ ಬರೋಬ್ಬರಿ 3 ಕೋಟಿ 60 ಲಕ್ಷ ರೂ ಬೃಹತ್ ಮೊತ್ತಕ್ಕೆ ಕೆಜಿಎಫ್ ಆಡಿಯೋ ರೈಟ್ ಖರೀದಿಸಿದೆ.ಲಹರಿ ಸಂಸ್ಥೆ ಇದೇ ಮೊದಲ ಬಾರಿಗೆ ಇಷ್ಟೊಂದು ಹಣ ಕೊಟ್ಟು ಆಡಿಯೋ ರೈಟ್ಸ್ ಪಡೆದುಕೊಂಡಿದೆಯಂತೆ.