ಬೆಂಗಳೂರು: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಆತ್ಮೀಯ ಗೆಳೆಯ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟರು.
ಅಂಬರೀಶ್ ನನ್ನು ಆತ್ಮೀಯ ಗೆಳೆಯ ಅವನ ಅಗಲಿಕೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ರಜನಿಕಾಂತ್ ದುಃಖವನ್ನು ಹೊರಹಾಕಿದರು. ನಾನು ಯಾವಾಗ ಬೆಂಗಳೂರಿಗೆ ಬಂದರೂ ಅಂಬಿ ಮನೆಯಲ್ಲೇ ಊಟ ಮಾಡಿಯೇ ಹೋಗುತ್ತಿದ್ದೆ. ಇತ್ತೀಚೆಗೆ ನಾಲ್ಕೈದು ಬಾರಿ ಬೆಂಗಳೂರಿಗೆ ಬಂದಾಗ ಅವನ ಮನೆಗೆ ಹೋಗಲು ಆಗಿರಲಿಲ್ಲ ಎಂದು ತಿಳಿಸಿದರು.
ಒಂದು ವಾರದ ಹಿಂದೆ ನನ್ನ ಅಣ್ಣನ ಮಗಳ ಮದುವೆಗೆ ಬೆಂಗಳೂರಿಗೆ ಬಂದಿದ್ದೆ. ಆಗ ಅಂಬರೀಶ್ ಫೋನ್ ಮಾಡಿದಾಗ ಈ ಬಾರಿ ನಿನ್ನ ಮನೆಗೆ ಬರಲು ಆಗೋದಿಲ್ಲ ಮತ್ತೊಮ್ಮೆ ಬಂದಾಗ ಬರುತ್ತೇನೆ ಎಂದು ಹೇಳಿದ್ದಕ್ಕೆ ಮತ್ತೆ ಬಂದಾಗ ಮನೆಗೆ ಬರಲಿಲ್ಲ ಅಂದ್ರೆ ಸಾಯಿಸಿ ಬಿಡ್ತೀನಿ ಅಂತಾ ಹೇಳಿದ್ದರೂ ಎಂದು ತಿಳಿಸಿದ್ದಾರೆ.