ಬೆಂಗಳೂರು: ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಅಂತ್ಯ ಸಂಸ್ಕಾರಕ್ಕೆ ಬಾರದ ನಟಿ, ಮಾಜಿ ಸಂಸದೆ ರಮ್ಯಾರಿಗೆ ನವರಸ ನಾಯಕ ಜಗ್ಗೇಶ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಜಗ್ಗೇಶ್ ಅವರಿಗೆ ಅಭಿಮಾನಿಯೊಬ್ಬರು ತಮ್ಮ ಟ್ವೀಟ್ ಅನ್ನು ಟ್ಯಾಗ್ ಮಾಡಿ, ಕಡೆಯಾಗ ನೋಡಿದೋಳೋನಾ ಕಡೆಗಣಿಸೋದೆ ತಕ್ಕ ಉತ್ತರ.. ಹತ್ತದ ಏಣಿನಾ ಮರೆಯೋ ಇಂಥೋರಾನ್ನಾ ನೆನಿಲುಬಾರದು... ಡ್ರಾಮಾ ಕ್ವೀನ್_ಖಾಲಿಡಬ್ಬ ಎಂದು ಬರೆದಿದ್ದರು.
ಅಭಿಮಾನಿಯ ಟ್ವೀಟ್ ಗೆ ಪ್ರತಿಕ್ರಿಯಿಸಿದ ಜಗ್ಗೇಶ್ ಸಾವಿನಲ್ಲಿ ಗೌರವಿಸದವರು ಮನುರೂಪದ ರಾಕ್ಷಸ ಗುಣದವರು..! ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು.! ದೇವನೊಬ್ಬ ಇರುವ ಅವ ಎಲ್ಲ ನೋಡುತಿರುವ! ದೋಸೆ ಮೊಗಚಿ ತಳಸೀಯುತ್ತದೆ ತಪ್ಪದೆ ಒಂದು ದಿನ! ಯತಃಮನಃತಥಃಜೀವನ! ಎಂದು ಟ್ವೀಟಿಸಿದ್ದಾರೆ.