ಬೆಂಗಳೂರು: ಸಿನಿಮಾ ಕ್ಷೇತ್ರದಲ್ಲಿ ಲೈಂಗಿಕ ಕಿರುಕುಳ ಮತ್ತು ಕಾಸ್ಟಿಂಗ್ ಕೌಚ್ ಗೆ ಸಂಬಂಧಿಸಿದ ದೂರುಗಳನ್ನು ನೀಡಿದರೆ ಬಗೆಹರಿಸಲು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವೆಲಿಟಿ(ಫೈರ್) ರಚಿಸಿರುವ ಆಂತರಿಕ ದೂರು ಸಮಿತಿ(ಐಸಿಸಿ) ತನ್ನ 11 ಸದಸ್ಯರನ್ನು ಘೋಷಿಸಿದೆ.
ಕಳೆದ ವರ್ಷ ಮಾರ್ಚ್ ನಲ್ಲಿ ಈ ಸಮಿತಿಯನ್ನು ರಚಿಸಲಾಗಿದ್ದರೂ ಕೂಡ ಆಂತರಿಕ ದೂರು ಸಮಿತಿ ಇತ್ತೀಚೆಗಷ್ಟೆ ಅಸ್ತಿತ್ವಕ್ಕೆ ಬಂದಿತ್ತು ಮತ್ತು ಅದರ ಸದಸ್ಯರನ್ನು ನಿನ್ನೆ ಅಧಿಕೃತವಾಗಿ ಘೋಷಿಸಲಾಯಿತು.
ಕರ್ನಾಟಕದ ಸಿನಿಮಾ ಉದ್ಯಮ ಕ್ಷೇತ್ರದಲ್ಲಿ ಹಕ್ಕು ಮತ್ತು ಸಮಾನತೆ (ಫೈರ್) ಒಂದು ಲಾಭೇತರ ಸಂಘಟನೆಯಾಗಿದ್ದು ಸೊಸೈಟಿ ಕಾಯ್ದೆಯಡಿ ಅದನ್ನು ರಚಿಸಲಾಗಿದೆ. ಇದಕ್ಕೆ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಅಧ್ಯಕ್ಷೆ. ಐಸಿಸಿಯ 11 ಮಂದಿ ಸದಸ್ಯರಲ್ಲಿ 9 ಮಹಿಳೆಯರು ಮತ್ತು ಇಬ್ಬರು ಕಾನೂನು ತಜ್ಞರು ಇದ್ದಾರೆ. ನಟ ಚೇತನ್ ಸಂಘಟನೆಯ ಕಾರ್ಯದರ್ಶಿಯಾಗಿದ್ದು, ನಟಿ ರೇಖಾ ರಾಣಿ ಖಜಾಂಚಿಯಾಗಿದ್ದಾರೆ.
11 ಸದಸ್ಯರಲ್ಲಿ ಕವಿತಾ ಲಂಕೇಶ್, ಕಾನೂನು ತಜ್ಞರಾಜ ಜಯಣ್ಣ ಕೊಟಹ್ರಿ ಮತ್ತು ಮಾರುತಿ ಜಡೆಯರ್, ರೇಖಾ ರಾಣಿ, ನಟಿ ಪಂಚಮಿ, ವಿಜಯಲಕ್ಷ್ಮಿ ಪಾಟೀಲ್, ವಿಜಯಮ್ಮ, ವೀಣಾ ಸುಂದರ್, ರೂಪಾ ಅಯ್ಯರ್, ನಟಿ ಶೃತಿ ಹರಿಹರನ್, ನಟ ಚೇತನ್ ಒಳಗೊಂಡಿದ್ದಾರೆ.
ಫೈರ್ ಸಂಘಟನೆಯಡಿ ಲಿಂಗ ಸೂಕ್ಷ್ಮತೆ ಕಾರ್ಯಾಗಾರಗಳು, ಆತ್ಮರಕ್ಷಣೆ ಮತ್ತು ಚಿತ್ರಗಳನ್ನು ಪ್ರೋತ್ಸಾಹಿಸುವ ಸೆಮಿನಾರ್ ಗಳನ್ನು ನಡೆಸಲು ತಂಡ ನಿರ್ಧರಿಸಿದೆ. ಚಿತ್ರೋದ್ಯಮಕ್ಕೆ ಸಂಬಂಧಪಟ್ಟ ಯಾರೇ ಆದರೂ ಅದು ತಂತ್ರಜ್ಞರಾಗಲಿ, ಮೇಕಪ್ ಕಲಾವಿದರು, ಸ್ಟೈಲಿಶ್, ಪೋಷಕ ನಟರು, ಡ್ಯಾನ್ಸರ್ ಗಳಿಗೆ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರುಗಳಿದ್ದರೆ ಸಂಸ್ಥೆ ಗಮನಕ್ಕೆ ತರಬಹುದು ಎಂದು ಕವಿತಾ ಲಂಕೇಶ್ ಹೇಳಿದರು.
ಚಿತ್ರೋದ್ಯಮದಲ್ಲಿ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ನಡುವೆ ಗೊಂದಲ ಏರ್ಪಡಾಗಬಾರದು. ಚಿತ್ರಗಳಲ್ಲಿ ಪ್ರಣಯ ದೃಶ್ಯಗಳಿದ್ದರೆ ಅದನ್ನು ಮಾಡುವ ಮುನ್ನ ನಟ, ನಟಿಯರಿಂದ ಅನುಮತಿ ಪಡೆದುಕೊಳ್ಳಬೇಕು ಮತ್ತು ಅದನ್ನು ಚಿತ್ರದ ಶೂಟಿಂಗ್ ಆರಂಭಕ್ಕೆ ಮುನ್ನ ಕರಾರಿನಲ್ಲಿ ಸೇರಿಸಬೇಕು ಎಂದು ಹೇಳಿದರು.
ದೂರುಗಳನ್ನು ಸಂಬಂಧಪಟ್ಟವರು contact@fire-film.com ನಲ್ಲಿ ದಾಖಲಿಸಬಹುದು.