ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಮೀಟೂ ಆರೋಪಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯಿಸಿದ್ದಾರೆ.
ಸ್ಯಾಂಡಲ್ ವುಡ್ ಮೀಟೂ ಅಭಿಯಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ದಕ್ಷಿಣ ಭಾರತದ ಖ್ಯಾತನಾಮ ನಟ-ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ಪ್ರತಿಕ್ರಿಯೆ ನೀಡಿದ್ದು, ಹಲವರು ಶೃತಿ ಪರ ನಿಂತರೆ ಮತ್ತೆ ಕೆಲವಲರು ಅರ್ಜುನ್ ಸರ್ಜಾ ಬೆನ್ನಿಗೆ ನಿಂತಿದ್ದಾರೆ. ಈ ಪಟ್ಟಿಗೆ ಇದೀಗ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸೇರ್ಪಡೆಯಾಗಿದ್ದು, ಹಿರಿಯ ನಟ ಅರ್ಜುನ್ ಸರ್ಜಾ ಪರ ದರ್ಶನ್ ಬ್ಯಾಟಿಂಗ್ ಮಾಡಿದ್ದಾರೆ.
ಮಾಧ್ಯಮವೊಂದರೊಂದಿಗೆ ಮಾತನಾಡಿರುವ ನಟ ದರ್ಶನ್, ನಾನು ಮೊದಲಿನಿಂದಲೂ ಅರ್ಜುನ್ ಸರ್ಜಾ ಅವರನ್ನು ಬಹಳಷ್ಟು ಹತ್ತಿರದಿಂದ ನೋಡಿದ್ದೇನೆ. ಇತ್ತೀಚೆಗೂ ಕೂಡ ಭೇಟಿಯಾಗಿದ್ದೆ.. ಕುರುಕ್ಷೇತ್ರ ಸಿನಿಮಾದಲ್ಲಿಯೂ ಒಟ್ಟಿಗೆ ನಾವು ಅಭಿನಯಿಸಿದ್ದೇವೆ.. ಅರ್ಜುನ್ ಸರ್ಜಾ ಅವರ ಆಲೋಚನೆಗಳೇ ಬೇರೆ.. ಅವರು ಇಂತಹ ಕೆಲಸಗಳ ಬಗ್ಗೆ ಯೋಚನೆ ಕೂಡ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ನಟಿ ಶೃತಿ ಹರಿಹರನ್ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ ತಾವು ದರ್ಶನ್, ಸುದೀಪ್ ರಂತಹ ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದು, ಯಾರೊಂದಿಗೂ ನನಗೆ ಕೆಟ್ಟ ಅನುಭವ ಆಗಿಲ್ಲ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics