ನಿರ್ದೇಶಕ ಹಾಗೂ ನಟ ಪ್ರೇಮ್ 
ಸಿನಿಮಾ ಸುದ್ದಿ

'ದಿ ವಿಲನ್' ಟೀಕಾಕಾರರ ವಿರುದ್ಧ ಪೊಲೀಸರಿಗೆ ನಿರ್ದೇಶಕ ಪ್ರೇಮ್ ದೂರು

ತಮ್ಮ ನಿರ್ದೇಶನದ ಬಹು ನಿರೀಕ್ಷಿತ 'ದಿ ವಿಲನ್' ಚಲನಚಿತ್ರ ಬಿಡುಗಡೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆ ಮೀರಿದ ಟೀಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ನಿರ್ದೇಶಕ ಹಾಗೂ ನಟ ಪ್ರೇಮ್ ಅವರು...

ಬೆಂಗಳೂರು: ತಮ್ಮ ನಿರ್ದೇಶನದ ಬಹು ನಿರೀಕ್ಷಿತ 'ದಿ ವಿಲನ್' ಚಲನಚಿತ್ರ ಬಿಡುಗಡೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆ ಮೀರಿದ ಟೀಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ನಿರ್ದೇಶಕ ಹಾಗೂ ನಟ ಪ್ರೇಮ್ ಅವರು, ವೈಯಕ್ತಿಕವಾಗಿ ಕೀಳುಮಟ್ಟದಲ್ಲಿ ನಿಂದಿಸಿದವರ ವಿರುದ್ಧ ಬುಧವಾರ ಪೊಲೀಸರಿದೆ ದೂರು ನೀಡಿದ್ದಾರೆ. 
ನಗರದ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ಅವರನ್ನು ಭೇಟಿ ಮಾಡಿದ ಪ್ರೇಮ್ ಅವರು, ದಿ ವಿಲನ್ ಸಿನಿಮಾವನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮತ್ತು ತಮ್ಮ ಕುಟುಂಬವನ್ನು ಅವಹೇಳನಕಾರಿಯಾಗಿ ಟೀಕಿಸಲಾಗುತ್ತಿದೆ. ಕಿಡಿಗೇಡಿಗಳ ವಿರದ್ಧ ಕ್ರಮ ಕೈಗೊಳ್ಳುವಂತೆ ಪ್ರೇಮ್ ಅವರು ಮನವಿ ಮಾಡಿಕೊಂಡಿದ್ದಾರೆ. 
ನಿರ್ದೇಶಕ ಪ್ರೇಮ್ ಅವರು ಹೇಳಿಕೆಯಂತೆ ದೂರು ದಾಖಲಿಸಿಕೊಳ್ಳಲಾಗಿದೆ ಅಗತ್ಯ ಬಿದ್ದರೆ, ಎಫ್ಐಆರ್ ದಾಖಲಿಸಿಕೊಳ್ಳಲಾಗುತ್ತದೆ ಎಂದು ರವಿ ಚನ್ನಣ್ಣನವರ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್