ಸಾಮಾಜಿಕ ಜಾಲತಾಣದಲ್ಲಿ ನಟಿ ಕಾವ್ಯ ಮದುವೆ ಚಿತ್ರಗಳು 
ಸಿನಿಮಾ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಚರಣದಾಸಿ' ಖ್ಯಾತಿಯ ಕನ್ನಡ ಕಿರುತೆರೆ ನಟಿ ಕಾವ್ಯಾ

ಚರಣದಾಸಿ ಮತ್ತು ನಾ ನಿನ್ನ ಬಿಡಲಾರೆ ಖ್ಯಾತಿಯ ಕಿರುತೆರೆ ನಟಿ ಕಾವ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹು ದಿನಗಳ ಗೆಳೆಯ ಮಹದೇವ್ ಅವರನ್ನು ಇತ್ತೀಚೆಗೆ ವಿವಾಹವಾಗಿದ್ದಾರೆ.

ಬೆಂಗಳೂರು: ಚರಣದಾಸಿ ಮತ್ತು ನಾ ನಿನ್ನ ಬಿಡಲಾರೆ ಖ್ಯಾತಿಯ ಕಿರುತೆರೆ ನಟಿ ಕಾವ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹು ದಿನಗಳ ಗೆಳೆಯ ಮಹದೇವ್ ಅವರನ್ನು ಇತ್ತೀಚೆಗೆ ವಿವಾಹವಾಗಿದ್ದಾರೆ.
ಕನ್ನಡ ಕಿರುತೆರೆ ನಟಿ ಕಾವ್ಯ ಕೆಲ ದಿನಗಳ ಹಿಂದೆ ತಮ್ಮ ಗೆಳೆಯ ಮಹದೇವ್ ಅವರ ಜೊತೆ ಸಪ್ತಪದಿ ತುಳಿದಿದ್ದು, ತಮ್ಮ ಮದುವೆ ಫೋಟೋಗಳನ್ನು ತನ್ನ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. 
ಕಾವ್ಯ ಮತ್ತು ಮಹದೇವ್ ಏಳು ವರ್ಷದಿಂದ ಸ್ನೇಹಿತರಾಗಿದ್ದು, ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯ ಬಗ್ಗೆ ಇಬ್ಬರ ಮನೆಯಲ್ಲಿ ತಿಳಿಸಿದ್ದಾರೆ. ಎರಡು ಕುಟುಂಬದವರು ಒಪ್ಪಿ ಆಗಸ್ಟ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿದ್ದರು. ಇದೀಗ ಗುರು ಹಿರಿಯರು ನಿಶ್ಚಯದಂತೆ ಈ ಜೋಡಿ ದಾಪಂತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದೆ.
ಈ ಬಗ್ಗೆ ನಟಿ ಕಾವ್ಯ ಅವರು ಫೋಟೋವನ್ನು ಹಾಕಿ 'ಏಳು ವರ್ಷದ ಸ್ನೇಹ, ಪ್ರೀತಿಗೆ ಬಾಂದವ್ಯ ಈಗ ಇನ್ನಷ್ಟು ಬಲಶಾಲಿಯಾಗಿದ್ದು, ಮುಂದುವರಿಯುತ್ತಿದೆ' ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಕಾವ್ಯ ಅವರು ಫೋಟೋ ಪೋಸ್ಟ್ ಮಾಡಿದ ಬಳಿಕ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಕಾವ್ಯ ಖಾಸಗಿ ವಾಹಿಯಲ್ಲಿ ಪ್ರಸಾರ ಆಗುತ್ತಿದ್ದ 'ಚರಣದಾಸಿ' ಧಾರಾವಾಹಿಯಲ್ಲಿ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದರು. ಬಳಿಕ 'ನಾ ನಿನ್ನ ಬಿಡಲಾರೆ' ಧಾರಾವಾಹಿನಿಯಲ್ಲೂ ಅಭಿನಯಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಭೀಕರ ಪ್ರತಿಕಾರದ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ..!

ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್: ಸಿದ್ದು-ಡಿಕೆಶಿ, ಹರಿಪ್ರಸಾದ್'ಗೆ 'ಕೈ' ಕಮಾಂಡ್ ಬುಲಾವ್, ದೆಹಲಿಯಲ್ಲಿ ನಿರ್ಣಾಯಕ ಸಭೆ..!

ಸಾರಿಗೆ ಸಚಿವ byrati suresh ದಿಢೀರ್ ಸಿಟಿ ರೌಂಡ್ಸ್, ರಾತ್ರೋರಾತ್ರಿ BMTC ಚಾಲಕ, ನಿರ್ವಾಹಕರಿಗೆ ಅಮಾನತು ಶಾಕ್, Video

'ತಪ್ಪು ನಿರ್ಧಾರ ತೆಗೆದುಕೊಂಡಿದ್ದೀರಿ, ಅದರ ಬೆಲೆ ತೆರಬೇಕಾಗುತ್ತದೆ': Hormuz ಬಂದ್ ಮಾಡಿದ ಇರಾನ್, ಅಮೆರಿಕ ಮತ್ತೊಂದು ವೈಮಾನಿಕ ದಾಳಿ

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!