ಸೌಂದರ್ಯ 
ಸಿನಿಮಾ ಸುದ್ದಿ

ನಟಿ ಸೌಂದರ್ಯ ದುರಂತ ಸಾವಿಗೆ 15 ವರ್ಷ: ಅಕಾಲಕ್ಕೆ ಕಣ್ಮರೆಯಾದ ಅದ್ಭುತ ಪ್ರತಿಭೆ

ಕನ್ನಡ ಸೇರಿದಂತೆ ದಕ್ಷಿಣ ಬಾರತೀಯ ಭಾಷೆಗಳ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದ ನಟಿ ಸೌಂದರ್ಯ ನಮ್ಮನ್ನಗಲಿ ಇಂದಿಗೆ (ಏ. 17) ಹದಿನೈದು ವರ್ಷಗಳಾದವು.

ಕನ್ನಡ ಸೇರಿದಂತೆ ದಕ್ಷಿಣ ಬಾರತೀಯ ಭಾಷೆಗಳ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದ ನಟಿ ಸೌಂದರ್ಯ ನಮ್ಮನ್ನಗಲಿ ಇಂದಿಗೆ (ಏ. 17) ಹದಿನೈದು ವರ್ಷಗಳಾದವು. ಚಿತ್ರನಟಿ, ನಿರ್ಮಾಪಕಿಯಾಗಿಯೂ ಬೆಳೆದು ಸಾಧನೆ ಶಿಖರವೇರಿದ್ದ ನಟಿ ತಮ್ಮ ಸರಳತೆಗೆ ಸಹ ಸಹೆಸರಾಗಿದ್ದರು. ಇಂತಹಾ ಮೇರು ನಟಿ ವಿಮಾನ ದುರಂತದಲ್ಲಿ ಅಕಾಲ ಮೃತ್ಯುವಿಗೀಡಾದದ್ದು ಮಾತ್ರ ಅವರ  ಅಭಿಮಾನಿಗಳಿಗೆ ಮರೆಯಲಾಗದ ನೋವನ್ನುಂಟುಮಾಡಿದೆ.
ಸೌಂದರ್ಯ ಹೆಸರಿಗೆ ತಕ್ಕಂತೆ ಸುಂದರವಾಗಿದ್ದವರು. ಜುಲೈ 18, 1972ಲ್ಲಿ ಹುಟ್ಟಿದ ಸೌಂದರ್ಯ ವೈದ್ಯೆಯಾಗಬೇಕೆಂದಿದ್ದವರು ಆಕಸ್ಮಿಕವಾಗಿ ಚಲನಚಿತ್ರರಂಗ ಪ್ರವೇಶಿಸಿದ್ದರು. ‘ಸೌಮ್ಯ'ಈಕೆಯ ಮೂಲ ಹೆಸರಾಗಿದ್ದು ತಮ್ಮ ಮೊದಲ ಕೆಲವು ಚಿತ್ರಗಳಲ್ಲಿ ಸಹ ಇದೇ ಹೆಸರನ್ನು ಬಳಸಿಕೊಂಡಿದ್ದುಂಟು. 
ತೂಗುವೆ ಕೃಷ್ಣನ, ಸಿಪಾಯಿ, ನಾನು ನನ್ನ ಹೆಂಡ್ತೀರು, ಶ್ರೀ ಮಂಜುನಾಥ, ಆರ್ಯಭಟ, ದೋಣಿಸಾಗಲಿ, ಆಪ್ತಮಿತ್ರ ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ತೆಲುಗು, ತಮಿಳು, ಮಲಯಾಳಗಳಲ್ಲಿ ಸಹ ಬಹು ಬೇಡಿಕೆಯ ನಟಿಯಾಗಿದ್ದರು.
ಗಿರೀಶ್ ಕಾಸರವಳ್ಳಿಯವರ ‘ದ್ವೀಪ’ ಚಿತ್ರದ ಮುಖೇನ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದ ಸೌಂದರ್ಯ ಅವರ ಮೊದಲ ನಿರ್ಮಾಣದ ಚಿತ್ರಕ್ಕೇ ಕೇಂದ್ರ ಸರ್ಕಾರದ ‘ಸ್ವರ್ಣಕಮಲ’ ಪ್ರಶಸ್ತಿ ಲಭಿಸಿತ್ತು.ರ್ನಾಟಕ ರಾಜ್ಯ ಸರ್ಕಾರದ ಉತ್ತಮ ಚಿತ್ರ ಪ್ರಶಸ್ತಿ ಮತ್ತು ಉತ್ತಮ ನಟಿ ಪ್ರಶಸ್ತಿ ಕೂಡಾ ಸೌಂದರ್ಯ ಅವರಿಗೆ ಸಂದಿತು. ದೋಣಿ ಸಾಗಲಿ ಚಿತ್ರಕ್ಕೆ ಸಹಾ ಅವರಿಗೆ ರಾಜ್ಯ ಸರ್ಕಾರದ ಶ್ರೇಷ್ಠ ನಟಿ ಪ್ರಶಸ್ತಿ ಸಂದಿತ್ತು.
ಇನ್ನು ಸೌಂದರ್ಯ  ಡಾ. ಎಸ್. ಎಲ್. ಭೈರಪ್ಪನವರ ಶ್ರೇಷ್ಠ ಕಾದಂಬರಿ  ‘ಗೃಹಭಂಗ’ ವನ್ನು ಕಿರುತೆರೆಯಲ್ಲಿ ಧಾರಾವಾಹಿಯಾಗಿ ಮೂಡಿಸಿದ್ದರು. ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ  ಈ ಧಾರಾವಾಹಿ ದೂರದರ್ಶನದಲ್ಲಿ ಮೂಡಿಬಂದ ಮಹತ್ವದ ಧಾರಾವಾಹಿಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ.
ಆಪ್ತಮಿತ್ರ ಚಿತ್ರ ಸೌಂದರ್ಯ ಅವರ ಕಡೆಯ ಚಿತ್ರವಾಗಿದ್ದು ಅದರಲ್ಲಿನ "ನಾಗವಲ್ಲಿ" ಪಾತ್ರ ಎಂದೆಂದಿಗೂ ಮರೆಯಲಾಗದ್ದು.ಡಾ. ವಿಷ್ಣುವರ್ಧನ, ಸೌಂದರ್ಯ ಮತ್ತು ಅವಿನಾಶ್ ದ್ವಾರಕೀಶ್ ಮೊದಲಾದವರು ನಟಿಸಿದ್ದ ಈ ಚಿತ್ರದಲ್ಲಿ ಸೌಂದರ್ಯ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 16 ವರ್ಷದ ಸಿನಿ ಬದುಕಿನಲ್ಲಿ 102 ಚಿತ್ರಗಳಲ್ಲಿ ನಟಿಸಿದ ಸೌಂದರ್ಯ ಅವರು ರಘು ಎಂಬುವವರನ್ನು ಅಸಾವಿಗೆ ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.
ಸಾಮಾಜಿಕ ಕಾಳಜಿ ಹೊಂದಿದ್ದ ನಟಿ ಸೌಂದರ್ಯ ತಾವು ಹುಟ್ಟಿದ ಬಂಗಾರಪೇಟೆ ತಾಲೂಕಿನ ಗಂಜಿಗುಂಟೆ ಗ್ರಾಮದ ಶಾಲೆಗಾಗಿ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದರು. ಇಂದಿಗೂ ಆ ಶಾಲಾ ಕಟ್ಟಡದ ಮೇಲೆ ನಟಿ ಸೌಂದರ್ಯ ಹೆಸರು ಶಾಶ್ವತವಾಗಿ ಉಳಿದಿದೆ.
ಆದರೆ ಇಂತಹಾ ಸರಳ, ಅದ್ಭುತ ಪ್ರತಿಭೆ 2004ರ ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ಆಂಧ್ರ ಪ್ರದೇಶಕ್ಕೆ ಚುನಾವಣಾ ಪ್ರಚಾರ ಸಲುವಾಗಿ ಹೊರತಾಗ ವಿಒಮಾನ ಪತನವಾಗಿ ಸಜೀವ ದಹನವಾಗಿ ಹೋಗಿದ್ದು ವಿಧಿಯಾಟವಲ್ಲದೆ ಬೇರಲ್ಲ. ಈ ದುರಂತದ ವೇಳೆ ನಟಿ ಸೌಂದರ್ಯ ಹಾಗೂ ಅವರ ಅಣ್ಣ ಅಮರನಾಥ್ ಸಾವನ್ನಪ್ಪಿದ್ದರು. 
"ಬಡತನದ ಹಿನ್ನೆಲೆಯಿಂದ ಬಂದಿದ್ದ ಸೌಂದರ್ಯಹುಟ್ಟೂರಿಗೆ ಬಂದಾಗಲೆಲ್ಲಾ ಸಂಬಂಧಿಗಳ ಮನೆಗೆ ತೆರಳಿ ಕಷ್ಟ ಸುಖ ವಿಚಾರಿಸಿ ಸಹಾಯ ಮಾಡುತ್ತಿದ್ದಳು.  ಆಕೆಯಿಂದ ಸಹಾಯ ಪಡೆದವರು ಇಂದಿಗೂ ಆಕೆಯನ್ನು ನೆನೆಯುತ್ತಾರೆ. ಸಾಮಾಜಿಕ ಕಾಳಜಿ ಇದ್ದ ನಟಿಗೆ ತನ್ನೂರಲ್ಲಿ ಒಂದು ಆಸ್ಪತ್ರೆ ತೆರೆಯಬೇಕೆಂದು ಆಸೆ ಇತ್ತು, ಇದು ಈಡೇರದೆ ಹೋಗಿದೆ" ಎಂದು ಸೌಂದರ್ಯ ಅವರ ಸೋದರ ರವಿಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Vice President Election 2025: ಮತದಾನ ಪ್ರಕ್ರಿಯೆ ಆರಂಭ, ಪ್ರಧಾನಿ ಮೋದಿ-ದೇವೇಗೌಡ ಸೇರಿ ಹಲವು ಗಣ್ಯರಿಂದ ಮತದಾನ

ಇಂದು ಉಪರಾಷ್ಟ್ರಪತಿ ಚುನಾವಣೆ: ಮತದಾನದಿಂದ 12 ಸಂಸದರು ದೂರ; NDA ಅಭ್ಯರ್ಥಿ C.P ರಾಧಾಕೃಷ್ಣನ್‌ ಗೆಲುವು ಬಹತೇಕ ಖಚಿತ!

'ಇದ್ರೆ ನೆಮ್ದಿಯಾಗಿರ್ಬೇಕು': 'ನಂಗೆ ಒಂಚೂರು ವಿಷ ಬೇಕು'... ನಟ Darshan ಬೇಡಿಕೆಗೆ ಕೋರ್ಟ್ ಶಾಕ್! ಅಗಿದ್ದೇನು?

'porn siteಗಳಲ್ಲಿ ತನ್ನ ಚಿತ್ರಗಳ ಬಳಕೆ'; ಹೈಕೋರ್ಟ್ ಮೆಟ್ಟಿಲೇರಿದ Actress Aishwarya Rai

'ಹಿಂದೂ ವಿರೋಧಿ' ನಡೆ: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಕಮಲ ಪಾಳಯ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ

SCROLL FOR NEXT