ಶ್ರೀನಿಧಿ ಶೆಟ್ಟಿ 
ಸಿನಿಮಾ ಸುದ್ದಿ

'ಕೆಜಿಎಫ್‌ 2'ಗೆ ಶ್ರೀನಿಧಿ ಶೆಟ್ಟಿ ಸಿದ್ಧ, ನಿಜವಾದ ಪರೀಕ್ಷೆ ಈಗ ಆರಂಭ!

ರಾಖಿ ಭಾಯ್ ಯಶ್ ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಬುಹು ನಿರೀಕ್ಷಿತ 'ಕೆಜಿಎಫ್‌ 2'ಚಿತ್ರಕ್ಕೆ ನಾಯಕಿ ಶ್ರೀನಿಧಿ ಶೆಟ್ಟಿ ಅವರು...

ರಾಖಿ ಭಾಯ್ ಯಶ್ ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಬುಹು ನಿರೀಕ್ಷಿತ 'ಕೆಜಿಎಫ್‌ 2'ಚಿತ್ರಕ್ಕೆ ನಾಯಕಿ ಶ್ರೀನಿಧಿ ಶೆಟ್ಟಿ ಅವರು ಸಿದ್ಧರಾಗಿದ್ದು, ಮೇ ಮೊದಲ ವಾರದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಕೆಜಿಎಫ್ 1ರಲ್ಲಿ ರೀನಾ ಪಾತ್ರದಲ್ಲಿ ಪರಿಚಿತರಾಗಿದ್ದ ಮಾಜಿ ಸುಪ್ರಾನ್ಯಾಷನಲ್‌ ಶ್ರೀನಿಧಿ ಶೆಟ್ಟಿ ಅವರು ಈಗ ಕೆಜಿಎಫ್ ಭಾಗ ಒಂದರ ಅಂತ್ಯದಿಂದ ನನ್ನ ಪಾತ್ರ ಶುರುವಾಗಲಿದ್ದು, ಎರಡನೇ ಭಾಗದಲ್ಲಿ ನನ್ನ ರೋಲ್ ದೊಡ್ಡದಿದೆ. ನಿಜವಾದ ಪರೀಕ್ಷೆ ಈಗ ಆರಂಭವಾಗಿದೆ ಎಂದು ಹೇಳಿದ್ದಾರೆ.
ನಾನು ಕೆಜಿಎಫ್ ಮೇಲೆ ಹೆಚ್ಚು ಗಮನ ಹರಿಸುವುದಕ್ಕಾಗಿ ಇತರೆ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಕೆಜಿಎಫ್ ನನಗೆ ತಂಬಾ ಮುಖ್ಯವಾದ ಚಿತ್ರ. ಇದಾದ ನಂತರ ಬೇರೆ ಚಿತ್ರಗಳ ಕಡೆ ಗಮನ ನೀಡುತ್ತೇನೆ ಎಂದು ಶ್ರೀನಿಧಿ ತಿಳಿಸಿದ್ದಾರೆ.
ಕನಿಷ್ಠ ನಾಲ್ಕು ಕನ್ನಡ, ಮೂರು ತೆಲುಗು ಹಾಗೂ ಮೂರು ತಮಿಳು ಚಿತ್ರಗಳಿಂದ ನನದೆ ಆಫರ್‌ ಬಂದಿತ್ತು. ಆದರೆ ಕೆಲವು ಚಿತ್ರಗಳ ಸ್ಕ್ರಿಪ್ಟ್ ಇಷ್ಟವಾಗಲಿಲ್ಲ. ಇನ್ನು ಕೆಲವು ಚಿತ್ರಗಳ ಡೇಟ್ ಹೊಂದಾಣಿಕೆಯಾಗಲಿಲ್ಲ. ಆದಾಗ್ಯೂ ನಾನು ಅಕ್ಟೋಬರ್ ನಂತರವೇ ಬೇರೆ ಚಿತ್ರಗಳನ್ನು ಒಪ್ಪಿಕೊಳ್ಳುವುದಾಗಿ ಅವರಿಗೆ ತಿಳಿಸಿದ್ದೇನೆ. ಕೆಜಿಎಫ್ 2 ಗಾಗಿ ಮಾಡಬೇಕಿರುವುದು ಬಹಳಷ್ಟು ಇದೆ ಎಂದು ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

SCROLL FOR NEXT