ನಟ ಅಜಯ್ ರಾವ್ ಮನೇಲಿದ್ದಾನೆ ಪುಟಾಣಿ ಬಸವಣ್ಣ! 
ಸಿನಿಮಾ ಸುದ್ದಿ

ನಟ ಅಜಯ್ ರಾವ್ ಮನೇಲಿದ್ದಾನೆ ಪುಟಾಣಿ ಬಸವಣ್ಣ!

ಸ್ಯಾಂಡಲ್ ವುಡ್ ನಲ್ಲಿ ಕೃಷ್ಣ ಅಜಯ್ ರಾವ್ ಎಂದೇ ಖ್ಯಾತನಾದ ನಟ ಅಜಯ್ ರಾವ್ ಅವರ ಮನೆಯಲ್ಲಿ ಪುಟಾಣಿ ಬಸವಣ್ಣನಿದ್ದಾನೆ!

ಸ್ಯಾಂಡಲ್ ವುಡ್ ನಲ್ಲಿ ಕೃಷ್ಣ ಅಜಯ್ ರಾವ್ ಎಂದೇ ಖ್ಯಾತನಾದ ನಟ ಅಜಯ್ ರಾವ್ ಅವರ ಮನೆಯಲ್ಲಿ ಪುಟಾಣಿ ಬಸವಣ್ಣನಿದ್ದಾನೆ! ಹೌದು ಅಜಯ್ ರಾವ್ ಪತ್ನಿ ಸ್ವಪ್ನಾ ರಾವ್ ತಮ್ಮ ಸಾಮಾಜಿಕ ತಾಣ ಖಾತೆಯಲ್ಲಿ ಹಂಚಿಕೊಂಡ ಫೋಟೋ ಒಂದು ಇದೀಗ ಭಾರೀ ವೈರಲ್ ಆಗಿದೆ.
ಸ್ವಪ್ನಾ ರಾವ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ  ತಮ್ಮ ಪುತ್ರಿ ಚರಿಷ್ಮಾಳ ಫೋಟೋ ಹಾಕಿಕೊಂಡಿದ್ದು ಇದರ ಜತೆಯಲ್ಲೇ "ನಮ್ಮನೆಯ ಪುಟ್ಟ ಬಸವಣ್ಣ" ಎಂದು ಬರೆದುಕೊಂಡಿದ್ದಾರೆ.
ಸ್ವಪ್ನಾ ಅವರ ಈ ಫೋಟೋಗೆ ಅವರ ಅಭಿಮಾನಿಗಳು ಫಿದಾ ಆಗಿದ್ದು ಕ್ಯೂಟ್ ಬೇಬಿಯ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವೆಂಬರ್ 23, 2018ರಂದು ಅಜಯ್ ರಾವ್-ಸ್ವಪ್ನಾ ದಂಪತಿಗೆ ಚರಿಷ್ಮಾ ಜನಿಸಿದ್ದಳು.  ಡಿಸೆಂಬರ್ 2ರಂದು ಮಗುವಿನ ನಾಮಕರಣ ಸಮಾರಂಭ ಏರ್ಪಡಾಗಿತ್ತು.ಈ ವೇಳೆ ನಟ ತಮ್ಮ ಪತ್ನಿ ಹಾಗೂ ಪುಟ್ಟ ಮಗಳೊಡನೆ ತೆಗೆಸಿಕೊಂಡ ಫೋಟೋ ವೈರ;ಲ್ ಆಗಿತ್ತು.
ಸಧ್ಯ ಅಜಯ್ ರಾವ್ ತಮ್ಮ ಕುಟುಂಬ, ಪರಿವಾರದವರೊಡನೆ ಸಮಯ ಕಳೆಯುತ್ತಿದ್ದು ಆಗಾಗ ಮಗಳ ಜತೆಗಿನ ತ್ಂಟಾಟದ ಫೋಟೋಗಳನ್ನು ತಮ್ಮ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ