‘ಗೂಳಿಹಟ್ಟಿ’ ಪವನ್ ಶೌರ್ಯ ನಾಯಕನಾಗಿ ನಟಿಸಿರುವ, ವಿಭಿನ್ನ ಹಾಡು, ಫೈಟ್ ಮೂಲಕ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿರುವ, ಶಿವರಾಜ್ ನಿರ್ದೇಶನದ ಮೊದಲ ಚಿತ್ರ “ಉಡುಂಬಾ” ಇದೇ 23 ರಂದು ತೆರೆಗೆ ಬರುತ್ತಿದೆ ವಿಶಿಷ್ಟ ಕಥೆಯನ್ನೊಳಗೊಂಡಿರುವ ಚಿತ್ರ, ಅಂದೇ ಬಿಡುಗಡೆಯಾಗುತ್ತಿರುವ ಸಾಲು ಸಾಲು ಚಿತ್ರಗಳ ಸವಾಲು ಎದುರಿಸಬೇಕಿದೆ
ಶ್ರೀ ಚಂದ್ರ ಪ್ರೊಡಕ್ಷನ್ಸ್ ಅಡಿಯಲ್ಲಿ. ನಿರ್ಮಾಪಕರಾದ ಹನುಮಂತ ರಾವ್, ವೆಂಕಟ ರೆಡ್ಡಿ ಬಂಡವಾಳ ಹೂಡಿದ್ದು, ಸಹ ನಿರ್ಮಾಪಕ ಮಾನಸ ಮಹೇಶ್ ಕೈ ಜೋಡಿಸಿದ್ದಾರೆ ಸಾಕಷ್ಟು ಶ್ರಮಪಟ್ಟು ಮಾಡಿರುವ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ನಟಿ ಸಂಜನಾ “ಪ್ರಚಾರಕ್ಕೆ ಬಂದೇ ಬರುತ್ತೇನೆ” ಎಂದು ಮಾತು ನೀಡಿದ್ದ ಮಾತು ಮರೆತು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರಂತೆ