ವಿಶಾಲ್ ಮತ್ತು ಅನಿಶಾ ರೆಡ್ಡಿ 
ಸಿನಿಮಾ ಸುದ್ದಿ

ಮುರಿದು ಬಿತ್ತಾ ತಮಿಳು ನಟ ವಿಶಾಲ್ -ನಟಿ ಅನಿಶಾ ರೆಡ್ಡಿ ಮದುವೆ ?

ತಮಿಳು ನಟ ವಿಶಾಲ್ ಕಳೆದ ಮಾರ್ಚ್ ತಿಂಗಳಲ್ಲಿ ಎಂಗೇಜ್ ಅಗಿದ್ದರು. ನಟಿ ಅನಿಶಾ ಅಲ್ಲ ರೆಡ್ಡಿ ಜೊತೆ ವೈವಾಹಿಕ ಬದುಕು ಆರಂಭಿಸುವುದಾಗಿ ವಿಶಾಲ್ ಅಧಿಕೃತವಾಗಿ ಘೋಷಿಸಿದ್ದರು. 

ತಮಿಳು ನಟ ವಿಶಾಲ್ ಕಳೆದ ಮಾರ್ಚ್ ತಿಂಗಳಲ್ಲಿ ಎಂಗೇಜ್ ಅಗಿದ್ದರು. ನಟಿ ಅನಿಶಾ ಅಲ್ಲ ರೆಡ್ಡಿ ಜೊತೆ ವೈವಾಹಿಕ ಬದುಕು ಆರಂಭಿಸುವುದಾಗಿ ವಿಶಾಲ್ ಅಧಿಕೃತವಾಗಿ ಘೋಷಿಸಿದ್ದರು. 

ಕೆಜಿಎಫ್ ಚಾಪ್ಟರ್ 1 ತಮಿಳು ಆವೃತ್ತಿಯ ವಿತರಕ, ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ಕಾಲಿವುಡ್ ಹೀರೋ ವಿಶಾಲ್ ಇದೇ ಮಾರ್ಚ್ ತಿಂಗಳ 10ರಂದು ಹೈದರಾಬಾದ್ ಮೂಲದ ಅನಿಷಾ ಅಲ್ಲಾ ರೆಡ್ಡಿ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರ ನಿಶ್ಚಿತಾರ್ಥ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತ್ತು. ಅಂದಿನಿಂದ ಅನಿಷಾ ಸಾಮಜಿಕ ಮಾಧ್ಯಮಗಳಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.

ಆದರೆ ಇದೀಗ ಆ ಫೋಟೋಗಳನ್ನೆಲ್ಲಾ ಅನಿಷಾ ಡಿಲೀಟ್ ಮಾಡಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಜೋಡಿ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿವೆ ಎಂಬ ಸುದ್ದಿ  ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

ಹಾಗಾಗಿಯೇ ಇವರ ಮದುವೆ ನಿಶ್ಚಿತಾರ್ಥಕ್ಕೇ ನಿಂತು ಹೋಗಿದೆ ಎಂಬ ಮಾತುಗಳು ಕಾಲಿವುಡ್ ವಲಯದಲ್ಲಿ ಕೇಳಿಬರುತ್ತಿವೆ. 
ಮಾರ್ಚ್‌ನಲ್ಲಿ ನಡೆದ ನಿಶ್ಚಿತಾರ್ಥ ಸಂದರ್ಭದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದರು. ಬಳಿಕ ಟರ್ಕಿಗೂ ಈ ಜೋಡಿ ಹೋಗಿಬಂದಿತ್ತು. 

ವಿಶಾಲ್ ಮತ್ತು ತಮನ್ನಾ ತಾರಾಗಣದ ಚಿತ್ರದ ಶೂಟಿಂಗ್ ಟರ್ಕಿಯಲ್ಲಿ ನಡೆಯುತ್ತಿದ್ದಾಗ ಅನಿಷಾರನ್ನೂ ವಿಶಾಲ್ ಅಲ್ಲಿಗೆ ಕರೆದೊಯ್ದಿದ್ದರು. ಇದೀಗ ಈ ಜೋಡಿ ದೂರವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದು ಈ ಬಗ್ಗೆ ವಿಶಾಲ್ ಆಗಲಿ ಅನಿಶಾ ಆಗಲಿ ಪ್ರತಿಕ್ರಿಯಿಸಿಲ್ಲ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!