ಉಪೇಂದ್ರ 
ಸಿನಿಮಾ ಸುದ್ದಿ

ಪ್ರಭಾವಶಾಲೀ ಭ್ರಷ್ಟ ರೇಪಿಷ್ಟ್ ಗಳಿಗೆ ರತ್ನಗಂಬಳಿಯಾಗುವುದೇ? ಹತ್ಯಾಚಾರಿಗಳ ಎನ್ ಕೌಂಟರ್ ಕುರಿತು ಉಪೇಂದ್ರ ಹೀಗಂದ್ರು

 ಪಶುವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಅತ್ಯಾಚಾರಿಗಳನ್ನು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನ ತಂಡ ಎನ್ ಕೌಂಟರ್ ಮಾಡಿದ್ದು ದೇಶಾದ್ಯಂತ ಪೋಲೀಸ್ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಸ್ಯಾಂಡಲ್ ವುಡ್ ರಿಯಲ್ ಸ್ಟಾರ್, ಪ್ರಜಾಕೀಯ ನಾಯಕನಾಗಿರುವ ಉಪೇಂದ್ರ ಮಾತ್ರ ತಮ್ಮದೇ ರೀತಿಯ ಹೇಳಿಕೆ ನೀಡುವುದರೊಡನೆ ಎಲ್ಲರ ಹ

ಬೆಂಗಳೂರು: ಪಶುವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಅತ್ಯಾಚಾರಿಗಳನ್ನು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನ ತಂಡ ಎನ್ ಕೌಂಟರ್ ಮಾಡಿದ್ದು ದೇಶಾದ್ಯಂತ ಪೋಲೀಸ್ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಸ್ಯಾಂಡಲ್ ವುಡ್ ರಿಯಲ್ ಸ್ಟಾರ್, ಪ್ರಜಾಕೀಯ ನಾಯಕನಾಗಿರುವ ಉಪೇಂದ್ರ ಮಾತ್ರ ತಮ್ಮದೇ ರೀತಿಯ ಹೇಳಿಕೆ ನೀಡುವುದರೊಡನೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ..

ಅತ್ಯಾಚಾರ ನಡೆಸಿದ್ದ ಆರೋಪಿಗಳು ಹೈದರಾಬಾದ್ ನ ಚೆರ್ಲಪಲ್ಲಿ ಕೇಂದ್ರ ಕಾರಾಗೃಹದಲ್ಲಿದ್ದು ಘಟನಾ ಸ್ಥಳದ ಮೊಹಜರು ನಡೆಸಿದ್ದ ವೇಳೆ ಅವರು ಅನುಚಿತ ವರ್ತನೆ ತೋರಿದ್ದ ಕಾರಣ ಎನ್ ಕೌಂಟರ್ ನಡೆಸಲಾಗಿದೆ ಎಂದು ಪೋಲೀಸ್ ಮಾಹಿತಿ ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಉಪೇಂದ್ರ "ಈ ಎನ್ ಕೌಂಟರ್ ಪ್ರಭಾವಶಾಲೀ ಭ್ರಷ್ಟ ರೇಪಿಷ್ಟ್ ಗಳಿಗೆ ರತ್ನಗಂಬಳಿಯಾಗುವುದೇ?" ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಎನ್ ಕೌಂಟರ್ ಗೆ ಬಲಿಯಾದವರ ಹಿಂದೆ ಯಾರಿದ್ದರು ಎನ್ನುವುದು ತಿಳಿಯಬೇಕಿದೆ ಎಂದೂ ಹೇಳಿದ್ದಾರೆ.

"ಈ ನಾಲ್ಕು ಹುಡುಗರೇ ಆಕೆಯನ್ನು ರೇಪ್ ಮಾಡಿ ಸುಟ್ಟುಹಾಕಿದ್ದಾರೋ ಇಲ್ಲ ಇದರ ಹಿಂದೆ ಬೇರೆ ಯಾರೋ ಪ್ರಮುಖ ವ್ಯಕ್ತಿಗಳ ಕೈವಾಡವಿದೆಯೊ ? ಈ ರೀತಿಯ ಎನ್ಕೌಂಟರ್ರ್  ಪ್ರಮುಖ ವ್ಯಕ್ತಿಗಳ ಕೇಸ್ನಲ್ಲಿ ಯಾಕಾಗುವುದಿಲ್ಲ? ಕೋರ್ಟನಲ್ಲಿ ವಿಚಾರಣೆಗೂ ಮುನ್ನ ನಡೆದ ಈ ಎನ್ಕೌಂಟರ್ ಇನ್ನು ಮುಂದೆ ಪ್ರಭಾವಶಾಲೀ ಭ್ರಷ್ಟ ರೇಪಿಷ್ಟ್ ಗಳಿಗೆ ರತ್ನಗಂಬಳಿಯಾಗುವುದೇ?" ಉಪೇಂದ್ರ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಸ್ಯಾಂಡಲ್ ವುಡ್, ಟಾಲಿವುಡ್ ನಟ ನಟಿಯರು ಸೇರಿ ದೇಶದ ಜನತೆ ಪೋಲೀಸರ ಕಾರ್ಯವನ್ನು ಪ್ರಶಂಸುತ್ತಿದ್ದರೆ ಉಪೇಂದ್ರ ಂಆತ್ರ "ರಿಯಾಲಿಟಿ ಚೆಕ್" ಗೆ ಹೊರಟಿರುವುದು ಅವರ ಅಭಿಮಾನಿಗಳು ಹಾಗೂ ನೆಟ್ಟಿಗರಲ್ಲಿ ಅಚ್ಚರಿಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ