ಸಿನಿಮಾ ಸುದ್ದಿ

ನಟಿ ಹರ್ಷಿಕಾ ಪೂಣಚ್ಚ ಕುತ್ತಿಗೆ ಮೇಲೆ ಹೆಬ್ಬಾವು! ವಿಡಿಯೋ 

Nagaraja AB

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೊಣಚ್ಚ ಕುತ್ತಿಗೆ ಮೇಲೆ ಹೆಬ್ಬಾವು ಇರುವ ವಿಡಿಯೋ ವೊಂದನ್ನು ಇಂದು ಅವರ ಟ್ವಿಟರ್ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇದು ಯಾವುದೋ ಶೂಟಿಂಗ್ ಸೆಟ್ ಅಲ್ಲ, ಬದಲಿಗೆ ನಿಜವಾದ ಹೆಬ್ಬಾವು. ಸದ್ಯ ವಿಯಟ್ನಾಂ ಪ್ರವಾಸದಲ್ಲಿರುವ ಹರ್ಷಿಕಾ ಪೊಣಚ್ಚ, ಭೀತಿಯಿಂದಲೇ  ಹೆಬ್ಬಾವನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಸಖತ್ ಎಂಜಯ್ ಮಾಡಿದ್ದಾರೆ. ಪ್ರವಾಸದ ವೇಳೆಯ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

ನನ್ನ ಬದುಕಿನ ಅತ್ಯಂತ ದೊಡ್ಡ ಭೀತಿಯನ್ನು ಗೆದ್ದು ಬಿಟ್ಟೆ. ನಾನು ಈ ಅನುಭವವನ್ನು ಜೀವನ ಪೂರ್ತಿ ನೆನಪಿನಲ್ಲಿಟ್ಟುಕೊಳ್ಳುವುದಾಗಿ ಅವರು ಬರೆದುಕೊಂಡಿದ್ದಾರೆ.

SCROLL FOR NEXT