ಸಿನಿಮಾ ಸುದ್ದಿ

'ನಟ ಸಾರ್ವಭೌಮ' ಚಿತ್ರೀಕರಣ ವೇಳೆ ಪ್ರತಿಯೊಬ್ಬರೂ ಅತ್ಯುತ್ಸಾಹದಿಂದ ಕೆಲಸ: ಪವನ್ ಒಡೆಯರ್

Nagaraja AB

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಅವರೊಂದಿಗೆ ಕೆಲಸ ಮಾಡುವುದೇ ಒಂದು ರೀತಿಯ ಖುಷಿಯಾಗುತ್ತಿರುತ್ತದೆ ಎಂದು ನಟಸಾರ್ವಭೌಮ ಚಿತ್ರ ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ.

ರಣವಿಕ್ರಮದಂತಹ ಹಿಟ್ ಚಿತ್ರ ನೀಡಿದ ಪವನ್ ಒಡೆಯರ್ ಹಾಗೂ ಪುನೀತ್ ಕಾಂಬಿನೇಷ್ ನಲ್ಲಿ ನಟ ಸಾರ್ವಭೌಮ ಇದೇ ತಿಂಗಳ 7 ರಂದು ತೆರೆಗೆ ಬರುತ್ತಿದ್ದು, ಈ  ಚಿತ್ರದಲ್ಲಿ ಸೆಂಟಿಮೆಂಟ್ಸ್, ದ್ವೇಷ, ಹಾಸ್ಯ, ಪ್ರೀತಿ ಹಾಗೂ ಭಾವನೆ ಎಲ್ಲವೂ ಮಿತವಾಗಿ ಸಂಮ್ಮಿಳಿತವಾಗಿದೆ ಎಂದು ಪವನ್  ಒಡೆಯರ್ ತಿಳಿಸಿದ್ದಾರೆ.

ಆದಾಗ್ಯೂ, ಚಿತ್ರಕಥೆ, ಸಂಭಾಷಣೆ, ನಿರೂಪಣೆ, ತಾರಾಗಣ ಪ್ರತಿಯೊಂದು ಸಿನಿಮಾದಲ್ಲೂ ಬೇರೆ ಬೇರೆಯಾಗಿರುತ್ತದೆ ಎಂಬುದನ್ನು ಅವರು ನಂಬಿದ್ದಾರೆ.

ಗೂಗ್ಲಿ- ಯಶ್, ರಣವಿಕ್ರಮ- ಪುನೀತ್, ಗೋವಿಂದಾಯ ನಮಃ- ಕೋಮಲ್, ಜೆಸ್ಸಿ- ಧನಂಜಯ್ ಮತ್ತು ನಟರಾಜ ಸರ್ವೀಸ್ ಸಿನಿಮಾದಲ್ಲಿ ಶರಣ್ ಅವರನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸಲಾಗಿದೆ. ಈಗ ಮತ್ತೊಂದು ಚಿತ್ರದಲ್ಲಿ ಪುನೀತ್ ಅವರನ್ನು ವಿಭಿನ್ನ ರೀತಿಯಲ್ಲಿ ತೋರಿಸಲಾಗುತ್ತಿದೆ ಎನ್ನುತ್ತಾರೆ.

 ಜನಾರ್ಧನ್ ಮಹರ್ಷಿ ಧೀರ್ಘ ಕಾಲದಿಂದ ರಚಿಸಿದ  ಕಥೆಗೆ ಕೆಲ ಬದಲಾವಣೆ ಮಾಡಿ ಚಿತ್ರಕಥೆ ಸೃಷ್ಟಿಸಿದ್ದು, ಹೊಸ ಕಥೆ, ಪಾತ್ರ ವಿಶೇಷವಾಗಿ ಪುನೀತ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಪವನ್ ಒಡೆಯರ್ ಹೇಳಿದ್ದಾರೆ.

ಪುನೀತ್ ರಾಜ್ ಕುಮಾರ್ ನಿರಂತರವಾಗಿ ಮಾಸ್ ಹಿರೋ ಅಲ್ಲ.  ಅವರೊಬ್ಬ ಸಂಪೂರ್ಣ ಪ್ಯಾಕೇಜ್ ಇದ್ದ ಹಾಗೆ. ತೆರೆಯ ಮೇಲೆ ಚೆನ್ನಾಗಿ ಹೊಡೆಯಬಲ್ಲರೂ, ಅದೇ ರೀತಿಯಲ್ಲಿ ಚೆನ್ನಾಗಿ ನೃತ್ಯ ಮಾಡಬಲ್ಲರು, ಈ ಚಿತ್ರದಲ್ಲಿ ಅವರು ಪೋಟೋಜರ್ನಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ.  ಅವರ ಅತ್ಸುತ್ಸಾಹ ಮತ್ತೊಂದು ಪೂರಕ ಅಂಶವಾಗಿದೆ ಎಂದಿದ್ದಾರೆ.

ನಟ ಸಾರ್ವಭೌಮ ಚಿತ್ರೀಕರಣ ವೇಳೆಯಲ್ಲಿ ಪ್ರತಿಯೊಬ್ಬರು ಅತ್ಯುತ್ಸಾಹದಿಂದ ಕೆಲಸ ಮಾಡಿದರು. ಎಲ್ಲ ತಂತ್ರಜ್ಞರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್ ಬ್ಯಾನರ್ ಅಡಿಯಲ್ಲಿ ಅನುಪಮ ಪರಮೇಶ್ವರನ್ ಮತ್ತು ರಚಿತಾರಾಮ್ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡಿದ್ದಾಗಿ ಪವನ್ ಒಡೆಯರ್ ಹೇಳಿದ್ದಾರೆ.

SCROLL FOR NEXT