ಮುನಿರತ್ನ ಕುರುಕ್ಷೇತ್ರದ ಒಂದು ದೃಶ್ಯ
ಬಹುನಿರೀಕ್ಷಿತ ಪೌರಾಣಿಕ ಕಥಾನಕ ಮುನಿರತ್ನ ಕುರುಕ್ಷೇತ್ರ ಆಗಸ್ಟ್‌ನಲ್ಲಿ ಚಿತ್ರಮಂದಿರಗಗಳಿಗೆ ಬರುವ ನಿರೀಕ್ಷೆ ಇದೆ. ಎಂದರೆ ಈ ಮುನ್ನ ಹೇಳಿದ ದಿನಕ್ಕಿಂತಲೂ ಒಂದು ವಾರ ಮುನ್ನವೇ ತೆರೆ ಕಾಣಲಿದೆ ಎಂದು ಮೂಲಗಳು ಹೇಳಿದೆ.ಆರಂಭದಲ್ಲಿ ಚಿತ್ರವು ವರಮಹಾಲಕ್ಷ್ಮಿ ಹಬ್ಬದಂದು ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಆಗಸ್ಟ್ 2ಕ್ಕೇ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.ಚಿತ್ರತಂಡದ ಮೂಲಗಳ ಪ್ರಕಾರ ಒಂದು ವಾರದ ಮುನ್ನ ಚಿತ್ರ ಬಿಡುಗಡೆಯಾಗುವ ಬಗೆಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಅದಿನ್ನೂ 50:50 ಸಾಧ್ಯತೆಯನ್ನು ಹೊಂದಿದೆ.
ಬಿಡುಗಡೆಯ ದಿನಾಂಕವನ್ನು ಬದಲಾಯಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು, ಹಾಗಿದ್ದಲ್ಲಿ, ಒಂದು ಅಥವಾ ಎರಡು ದಿನಗಳಲ್ಲಿ ಚಿತ್ರತಂಡ ಈ ಸಂಬಂಧ ಅಧಿಕೃತ ಘೋಷಣೆ ಂಆಡಲಿದೆ.ಎಂದು ಮೂಲವೊಂದು ತಿಳಿಸಿದೆ. ಈ ಬಹುಕೋಟಿ ವೆಚ್ಚದ ಚಿತ್ರ ಕನ್ನಡದಲ್ಲಿ ಕೆಜಿಎಫ್ ನಂತರಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಚಿತ್ರವಾಗಿದೆ.
ಏತನ್ಮಧ್ಯೆ ಚಿತ್ರದ ಆಡಿಯೋವನ್ನು ಜುಲೈ 7 ರಂದು ಅದ್ದೂರಿಯಾಗಿ ಬಿಡುಗಡೆ ಮಾಡಲು ತಂಡ ಸಿದ್ದವಾಗಿದೆ.ಇದೊಂದು ಸಾರ್ವಜನಿಕ ಕಾರ್ಯಕ್ರಮವಾಗಿರಲಿದ್ದು ಮುನಿರತ್ನ ಕುರುಕ್ಷೇತ್ರದ ಆಡಿಯೊ ಹಕ್ಕುಗಳನ್ನು ಲಹರಿ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ವಿ ಹರಿರಿಕೃಷ್ಣ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಹಾಡುಗಳು ಮೂಡಿಬಂದಿದೆ.
ಮುನಿರತ್ನ ಕುರುಕ್ಷೇತ್ರವನ್ನು ವಿಶ್ವದಾದ್ಯಂತ 5 ಭಾಷೆಗಳಲ್ಲಿ ಬಿಡುಗಡೆ ಂಆಡಲು ರಾಕ್‌ಲೈನ್ ವೆಂಕಟೇಶ್ ಸಿದ್ದವಾಗ್ಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರ ಇದಾಗಿದ್ದು ಕನ್ನಡದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಏಕಕಾಲದಲ್ಲಿಡಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಬಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ.
ಇನ್ನು ದರ್ಶನ್ ಮಾತ್ರವಲ್ಲದೆ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ವಿ ರವಿಚಂದ್ರನ್, ಅರ್ಜುನ್ ಸರ್ಜಾ, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಶಿಕುಮಾರ್, ನಿಖಿಲ್ ಕುಮಾರ್ ಡ್ಯಾನಿಶ್ ಅಕ್ತರ್ ಸೈಫಿ, ಸೋನು ಸೂದ್, ಯಶಾಸ್, ಪಿ ರವಿಶಂಕರ್, ಸ್ನೇಹ, ಮೇಘ ಹರಿಪ್ರಿಯಾ ಇನ್ನೂ ಹಲವು ನಾಯಕ ನಾಯಕಿಯರು ಇದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos