ಸಿನಿಮಾ ಸುದ್ದಿ

'ಕಿರು ಮಿಣ್ಕಣಜ' ಚಿತ್ರದ ಶೀರ್ಷಿಕೆಯ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ ನಿರ್ದೇಶಕ ಮಂಜು

Raghavendra Adiga
ನಿರ್ದೇಶಕ ಎಂ. ಮಂಜು ತಮ್ಮ ಹೊಸ ಚಿತ್ರ "ಕಿರು ಮಿಣ್ಕಣಜ" ಬಗೆಗೆ ಹೆಚ್ಚು ವಿವರಿಸಲು ಸಿದ್ದರಿಲ್ಲ. "ಚಿತ್ರದ ಶೀರ್ಷಿಕೆಯ ಪದಪುಂಜವು ನಾವು ದಿನನಿತ್ಯ ಬಳಕೆ ಮಾಡುವ ಪ್ರಮುಖ ನುಡಿಗಟ್ಟಾಗಿದೆ. ಆದರೆ ಬಹಳಷ್ಟು ಜನ ಇದರ ಇಂಗ್ಲಿಷ್ ಭಾಷಾಂತರ ಪದ ಬಳಕೆ ಮಾಡುವ ಕಾರಣ ಕನ್ನಡ ಪದದ ಬಗೆಗೆ ತಿಳಿದಿಲ್ಲ. ಈ ಶೀರ್ಷಿಕೆಯ ಅರ್ಥ ಹೇಳಿದ್ದಾದರೆ ಇಡೀ ಚಿತ್ರದ ಕಥೆ ಹೇಳಬೇಕಾಗುತ್ತದೆ. ಹಾಗಾಗಿ ಇದೊಂದು ವಸ್ತುವಿನ ಹೆಸರು. ಚಿತ್ರದುದ್ದಕ್ಕೆ ಈ ವಸ್ತುವಿನ ಉಪಸ್ಥಿತಿ ಇರಲಿದೆ. ಅಂತಿಮ ಕ್ಷಣದವರೆಗೆ ನಾನು ಪ್ರೇಕ್ಷಕರ ಕುತೂಹಲವನ್ನು ಹಾಗೆಯೇ ಉಳಿಸಿಕೊಳ್ಳಲು ಇಚ್ಚಿಸುತ್ತಿರುವ ಕಾರಣ ಈಗಲೇ ಈ ಶೀರ್ಷಿಕೆಯ ಅರ್ಥ ಹೇಳಲಾರೆ" ಅವರು ಹೇಳಿದರು.
ಚಿತ್ರದ ಮೊದಲ ಟೀಸರ್ ಮತ್ತು ದ್ವನಿಮುದ್ರಿತ ವೀಡಿಯೋಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.ಸಸ್ಪೆನ್ಸ್ ಥ್ರಿಲ್ಲರ್ ಎಂದು ಹೇಳಲಾಗುವ ಈ ಚಿತ್ರದ ಕಥೆ ಪ್ರೇಮಕಥೆಯ ಹಿನ್ನೆಲೆಯನ್ನು ಹೊಂದಿದೆ. ಇನ್ನು ಸೆನ್ಸಾರ್ ಬೋರ್ಡ್ ಮುಂದೆ ಚಿತ್ರವನ್ನು ಸದ್ಯದಲ್ಲೇ ಪ್ರದರ್ಶಿಸಿ ಪ್ರಮಾಣಪತ್ರ ಪಡೆಯಲಾಗುತ್ತದೆ.
ವೈಶಾಲಿ ಕಸವರಹಳ್ಳಿಗೆ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮಂಜು 12 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಮಂಜು ಐದು ವರ್ಷಗಳ ಕಾಲ ರಂಗಭೂಮಿಯಲ್ಲಿಯೂ ಸಕ್ರಿಯರಾಗಿದ್ದರು. "ಕಿರು ಮಿಂಕಣಜ" ಮಂಜು ಅವರ ಚೊಚ್ಚಲ ನಿರ್ದೇಶನದ ಚಿತ್ರ.. "ಧಾರಾವಾಹಿ ನಿರ್ದೇಶಕರಾದ ದರ್ಶಿತ್ ಭಟ್ ಅವರನ್ನು ನನ್ನ ಮಾರ್ಗದರ್ಶಕರನ್ನಾಗಿ ಭಾವಿಸಿದ್ದೇನೆ.ಅವರು ನಿರ್ದೇಶಕರಾಗಲು ನನಗೆ ಮಾರ್ಗದರ್ಶನ ನೀಡಿದ್ದಾರೆ" ಎಂದು ಮಂಜು ಹೇಳಿದರು. ಜನಾರ್ದನ್ ಆರ್ದೌಡಿ ನಿರ್ಮಿಸಿದ ಈ ಚಿತ್ರದಲ್ಲಿ ಹೊಸ ಮುಖಗಳು ಹೆಚ್ಚಿನ ಸಂಖ್ಯೆಯಲ್ಲಿದೆ.ಅವರಲ್ಲಿ  ರವಿಚಂದ್ರ ವಿ ಮತ್ತು ಅರ್ಜುನ್ ರಮೇಶ್ (ಧಾರಾವಾಹಿ ಶನಿ ಮತ್ತು ಮಹಾಕಾಳಿ ಖ್ಯಾತಿಯ), ಮತ್ತು ವರ್ಷಿಕಾ ನಾಯಕ್ ಪ್ರಮುಖರಾಗಿದ್ದಾರೆ.
SCROLL FOR NEXT