ಸಿನಿಮಾ ಸುದ್ದಿ

ರವಿತೇಜ 'ಡಿಸ್ಕೋ ರಾಜ' ಚಿತ್ರದಲ್ಲಿ ವಿಜ್ಞಾನಿಯಾದ ತಾನ್ಯಾ ಹೋಪ್

Raghavendra Adiga
ಕನ್ನಡ ಚಿತ್ರ "ಖಾಕಿ"ಯಲ್ಲಿ ಅಭಿನಯಿಸುತ್ತಿರುವ ನಟಿ ತಾನ್ಯಾ ಹೋಪ್ ತಾವು ಮತ್ತೆ ಟಾಲಿವುಡ್ ನಲ್ಲಿ ಕಮಾಲ್ ಮಾಡಲು ಉತ್ಸುಕರಾಗಿದ್ದಾರೆ. ಆನಂದ್ ವಿಐ ನಿರ್ದೇಶನದ ಚಿತ್ರ "ಡಿಸ್ಕೋರಾಜ" ದಲ್ಲಿ ತಾನ್ಯಾ ರವಿತೇಜ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
"ನಾನು ತೆಲುಗು ಚಿತ್ರರಂಗಕ್ಕೆ ಮರಳಿದ್ದೇನೆ. ರವಿತೇಜ ನಟನೆಯ ಚಿತ್ರದಲ್ಲಿ ಕೆಲಸ ಮಾಡುವುದು ಸಂತಸದ ಸಂಗತಿ" ತಾನ್ಯಾ ಹೇಳಿದ್ದಾರೆ. ಆಕೆ ಚಿತ್ರದಲ್ಲಿ ತನ್ನ ಪಾತ್ರದ ಕುರಿತು ಹೆಚ್ಚು ವಿವರ ನೀಡದೆ ಹೋದರೂ ತಾವು ವಿಜ್ಞಾನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
"ನೇನು ಸೈಲಜಾ", " ಅಪ್ಪಟ್ಲೋ", "ಒಅಕದುಂಡೇವದುಆಂಡ್ ಪಟೇಲ್ ಸರ್" ಬಳಿಕ ತಾನ್ಯಾ ಪಾಲಿಗಿದು ನಾಲ್ಕನೇ ತೆಲುಗು ಚಿತ್ರವಾಗಿದೆ. ಈ ಚಿತ್ರವನ್ನು ರಾಮ್ ತಲ್ಲುರಿ ನಿರ್ಮಿಸಿದ್ದು, ಎಸ್.ಎಸ್.ತಮನ್ ಸಂಗೀತ ನೀಡಿದ್ದಾರೆ.
ನಟಿ ತಾನ್ಯಾ ಮಂಗಳವಾರ ಶೂಟಿಂಗ್ ಸೆಟ್ ಗೆ ಸೇರಿಕೊಳ್ಲಲಿದ್ದಾರೆ. ವಿಶೇಷವೆಂದರೆ ಇದೇ ಚಿತ್ರದಲ್ಲಿ "ವಜ್ರಕಾಯ"ದ ಪಟಾಕಾ ಹುಡುಗಿ ನಭಾ ನಟೇಶ್ ಸಹ ಅಭಿನಯಿಸಿದ್ದಾರೆ.
SCROLL FOR NEXT