ವಿಜಯಲಕ್ಷ್ಮಿ ಸಿಂಗ್ ಅವರ "ಯಾನ" ಬಿಡುಗಡೆಗೆ ಮುನ್ನವೇ ಸಾಕಷ್ಟು ಕುತೂಹಲ ಕೆರಳಿಸಿದೆ. ಸಾಮಾಜಿಕ ತಾಣಗಳಲ್ಲಿ "ಯಾನ" ಚಿತ್ರದ ಟ್ರೇಲರ್ ಸಾಕಷ್ಟು ಸೌಂಡ್ ಮಾಡಿದ್ದು ಇದೀಗ ಮಾಲಿವುಡ್ ದಿಗ್ಗಜರನ್ನೂ ತನ್ನತ್ತ ಸೆಳೆದುಕೊಂಡಿದೆ. ಈ ತಿಂಗಳಾಂತ್ಯಕ್ಕೆ "ಯಾನ" ಮಲಯಾಳಂ ಡಬ್ ಆವೃತ್ತಿಯನ್ನು ಕೇರಳ ರಾಜ್ಯಾದ್ಯಂತ ಬಿಡುಗಡೆ ಮಾಡಲು ಅಲ್ಲಿನ ನಿರ್ಮಾಪಕರು ಉತ್ಸುಕರಾಗಿದ್ದಾರೆ.
"ಯಾನ ಚಿತ್ರದ ಟ್ರೈಲರ್ ಕೆಲವು ಮಲಯಾಳಂ ಚಲನಚಿತ್ರ ನಿರ್ಮಾಪಕರ ಗಮನ ಸೆಳೆದಿದೆ. ಯಾನದಲ್ಲಿ ಕೆಲಸ ಮಾಡುವ ಕೆಲವು ತಂತ್ರಜ್ಞರು ಈ ಚಿತ್ರವನ್ನು ಕೇರಳದಲ್ಲಿ ತೆರೆಗೆ ತರಲು ಆಸಕ್ತಿ ತೋರಿಸಿದರು, ಇದು ಅಲ್ಲಿನ ಸೆಟ್ಟಿಂಗ್ ಗೆ ಸರಿಹೊಂದುತ್ತದೆ ಎಂದು ಭಾವಿಸಿದ್ದಾರೆ. ಅವರು ನನ್ನನ್ನು ಸಂಪರ್ಕಿಸಿದರು, ಮತ್ತು ನಾನು ಸಹ ಒಪ್ಪಿದ್ದೇನೆ ಮಲಯಾಳಂನಲ್ಲಿ ಕೆಜಿಎಫ್ ಚಿತ್ರವನ್ನು ಡಬ್ ಮಾಡಿದ್ದ ತಂಡವೇ ಯಾನ ಚಿತ್ರದ ಬಿಡುಗಡೆಗೆ ಆಸಕ್ತಿ ತೋರಿದೆ. ದಾಗ್ಯೂ, ನಾನು ಡಬ್ಬಿಂಗ್ ಹಕ್ಕುಗಳನ್ನು ನೀಡಿಲ್ಲ, ಮತ್ತು ನಮ್ಮ ತಂಡದ ತಂತ್ರಜ್ಞರು ಅದನ್ನು ಅಲ್ಲಿ ಬಿಡುಗಡೆ ಮಾಡುವ ಉಸ್ತುವಾರಿ ವಹಿಸಿದ್ದಾರೆ" ಎಂದು ವಿಜಯಲಕ್ಷ್ಮಿ ಹೇಳುತ್ತಾರೆ.
ಇದೇ ವೇಳೆ ಯಾನವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಲು ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.
"ಕನ್ನಡ ಚಿತ್ರವು ಇನ್ನೂ ಎರಡು-ಮೂರು ದಿನಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ, ಫಲಿತಾಂಶಕ್ಕಾಗಿ ಕಾಯಲು ನಾನು ಬಯಸುತ್ತೇನೆ, ಇಲ್ಲಿನ ಜನರ ಪ್ರತಿಕ್ರಿಯೆ ನೋಡಿದ ನಂತರ ಮುಂದಿನ ಯೋಜನೆಯನ್ನು ರೂಪಿಸುತ್ತೇನೆ" ಎಂದು ನಿರ್ದೇಶಕರು ಹೇಳುತ್ತಾರೆ, ಬಿಡುಗಡೆಯ ಮೊದಲು ಈ ರೀತಿಯ ಪ್ರತಿಕ್ರಿಯೆ ದೊರೆತಿರುವುದು ಸಂತೋಷವಾಗಿದೆ ಎಂದು ಅವರು ನುಡಿದರು.
“ನನ್ನ ಚಿತ್ರವು ಇನ್ನೊಂದು ಭಾಷೆಯಲ್ಲಿ ಪ್ರಾರಂಭದಲ್ಲೇ ತೆರೆಕಾಣಲಿದೆ ಎಂದು ನಾನೆಂದೂ ಊಹಿಸಿರಲಿಲ್ಲ. . ಡಿಜಿಟಲ್ ಪ್ರಪಂಚವು ತುಂಬಾ ವೇಗವಾಗಿದೆ, ಮತ್ತು ಇದು ಇಂಡಸ್ಟ್ರಿಯನ್ನು ಹತ್ತಿರಕ್ಕೆ ತಂದಿದೆ. ಎಂದು ನಾನು ಭಾವಿಸುತ್ತೇನೆ, ಇದರಲ್ಲಿ ಚಲನಚಿತ್ರ ನಿರ್ಮಾಪಕರು ಇತರ ಭಾಷೆಗಳಲ್ಲಿ ಯಾವ ರೀತಿಯ ಚಲನಚಿತ್ರ ಬರುತ್ತಿವೆ ಎಂದೂ ಗಮನಿಸುತ್ತಾರೆ.ಮೊದಲು ಈ ರೀತಿಯಾಗಿರಲಿಲ್ಲ. . ನನಗೆ, ಇದು ಖಂಡಿತವಾಗಿಯೂ ಹೊಸ ಅನುಭವ, ”ಎಂದು ಅವರು ಹೇಳುತ್ತಾರೆ.
"ಯಾನ" ಸಿಂಗ್ ಕುಟುಂಬದ ಮೂರನೇ ಪೀಳಿಗೆಯನ್ನು ಒಳಗೊಂಡಿದ್ದು ಇದು ವಿಜಯಲಕ್ಷ್ಮಿಯ ನಾಲ್ಕನೇ ಯೋಜನೆ. ಇನ್ನು ವಿಜಯಲಕ್ಷ್ಮಿ ಅವರ ಪತಿ, ನಟ ಜೈ ಜಗದೀಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ನಿರ್ಮಾಪಕ ಶಂಕರ್ ಸಿಂಗ್ ಮತ್ತು ನಟ ಪ್ರತಿಮಾ ದೇವಿ ಅವರ ಪುತ್ರಿ ವಿಜಯಲಕ್ಷ್ಮಿ ಸಿಂಗ್ ಜನಪ್ರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು.ಅವರ ಸೋದರಿಯಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos