ಅಂಕಿತಾ ನಾಯಕ್, ಪ್ರೇಮ್ ಹಾಗೂ ಡಿಒಪಿ ಮಹೇಂದ್ರ ಸಿಂಹ 
ಸಿನಿಮಾ ಸುದ್ದಿ

'ಏಕ್ ಲವ್ ಯಾ' ಸೆಟ್ ಗೆ ಅಂಕಿತಾ ನಾಯಕ್ ಎಂಟ್ರಿ

ನಟ ರಾಣಾ ಅಭಿನಯದ ನಿರ್ದೇಶಕ ಪ್ರೇಮ್ ಮುಂದಿನ ಚಿತ್ರ "ಏಕ್ ಲವ್ ಯಾ" ಚಿತ್ರೀಕರಣವು ಬಿರುಸಿನಿಂದ ನಡೆದಿದೆ.

ನಟ ರಾಣಾ ಅಭಿನಯದ ನಿರ್ದೇಶಕ ಪ್ರೇಮ್ ಮುಂದಿನ ಚಿತ್ರ "ಏಕ್ ಲವ್ ಯಾ" ಚಿತ್ರೀಕರಣವು ಬಿರುಸಿನಿಂದ ನಡೆದಿದೆ. ರೀಷ್ಮಾ ನಾಣಯ್ಯ ಹಾಗೂ ರಚಿತಾ ರಾಮ್ ಪ್ರಮುಖ ನಾಯಕಿಯರಾಗಿರುವ ಈ ಶುಟಿಂಗ್ ಸೆಟ್ ಗೆ ಈಗ ಹೊಸಮುಖವೊಂದರ ಆಗಮನವಾಗಿದೆ.
ಮಾಡೆಲ್ ಆಗಿದ್ದು ಈಗ ನಟಿಯಾಗಿರುವ ಅಂಕಿತಾ ನಾಯಕ್ "ಏಕ್ ಲವ್ ಯಾ" ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಇದು ಅಂಕಿತಾ ಅವರ ಮೊದಲ ಚಿತ್ರವಾಗಿರಲಿದೆ.ಇದಾಗಲೇ ಅವರು ಎರಡು ದಿನಗಳ ಶೂಟಿಂಗ್ ಮುಗಿಸಿದ್ದಾರೆ ಎಂದು ಮಾಹಿತಿ ಇದೆ.
ರಕ್ಷಿತಾ ಫಿಲ್ಮ್ ಫ್ಯಾಕ್ಟರಿ  ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಲಾಗುತ್ತಿದ್ದು ಬೆಂಗಳೂರಿನಲ್ಲಿ ಕಳೆದ 22 ದಿನಗಳಿಂದ ಚಿತ್ರೀಕರಣ ನಡೆಸುತ್ತಿರುವ ಪ್ರೇಮ್, ಫೈಟ್ ಸೀಕ್ವೆನ್ಸ್‌ ನೊಡನೆ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.ಮುಂದಿನ ಹಂತದಲ್ಲಿ ಮೈಸೂರಿನಲ್ಲಿ ಶೂಟಿಂಗ್ ನಡೆಯಲಿದ್ದು ಅಲ್ಲಿ ಚಿತ್ರದ ಹಲವು ಪ್ರಮುಖ ಭಾಗಗಳ ಚಿತ್ರೀಕರಣ ಇದೆ. ಈ ಚಿತ್ರದಲ್ಲಿ ಪ್ರೇಮ್ ತಮ್ಮ ಅಳಿಯ ರಾಣಾ  ಅವರನ್ನು ಮೊದಲ ಬಾರಿಗೆ ತೆರೆ ಮೇಲೆ ತರಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್