ಸಿನಿಮಾ ಸುದ್ದಿ

'ಕಾಣೆಯಾದವರ ಬಗ್ಗೆ ಪ್ರಕಟಣೆ': ಇದು ನಿರ್ದೇಶಕ ಅನಿಲ್ ಕುಮಾರ್ ಮುಂದಿನ ಚಿತ್ರ!

Raghavendra Adiga
ನಿರ್ದೇಶಕ ಅನಿಲ್ ಕುಮಾರ್  ಇದಾಗಲೇ ಧೀರನ್ ರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರ "ದಾರಿ ತಪ್ಪಿದ ಮಗ" ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರವು ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಏತನ್ಮಧ್ಯೆ, ನಿರ್ದೇಶಕರು ತಮ್ಮ ಮುಂದಿನ ಯೋಜನೆಯನ್ನು  ಕುರಿತು ಆಲೋಚಿಸಿದ್ದಾರೆ.  ‘ಕಾಣೆಯಾದ ಜನರನ್ನು’ ಉಲ್ಲೇಖಿಸುವ "ಕಾಣೆಯಾದವರ ಬಗ್ಗೆ ಪ್ರಕಟಣೆ" ಎಂಬ ಶೀರ್ಷಿಕೆಯ ಈ ಚಿತ್ರದಲ್ಲಿ ಹಿರಿಯ ಕಲಾವಿದರನ್ನು ತೆರೆ ಮೇಲೆ ತರುವ ಪ್ರಯತ್ನದಲ್ಲಿದ್ದಾರೆ.
ಈ ಚಿತ್ರದಲ್ಲಿ ರಂಗಾಯಣ ರಘು, ರವಿಶಂಕರ್ ಮತ್ತು ತಬಲಾ ನಾಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅವರು 65 ವರ್ಷಕ್ಕಿಂತ ಮೇಲ್ಪಟ್ಟವರ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಅಲ್ಲದೆ ಚಿತ್ರದ ಆಕರ್ಷಣೆ ಹೆಚ್ಚಿಸುವುದಕ್ಕಾಗಿ ಚಿಕ್ಕಣ್ಣವನ್ನು ಸಹ ಕರೆತರುತ್ತಿದ್ದಾರೆ. “ಸಾಮಾನ್ಯವಾಗಿ, ನಮ್ಮ ಚಲನಚಿತ್ರಗಳು ಯುವಕರನ್ನು ಕುರಿತಾಗಿರಲಿದೆ.ಹಾಗೆಯೇ ನಾವಿದನ್ನು ಕುಟುಂಬಾಧಾರಿತ ಎಂದು ಕರೆಯುತ್ತೇವೆ. ಆದರೆ ಈ ಚಿತ್ರದ ಮೂಲಕ, ನಾನು ಮಕ್ಕಳಿಂದ ವೃದ್ಧರವರೆಗೆ ಎಲ್ಲ ರೀತಿಯ ಪ್ರೇಕ್ಷಕರನ್ನು ರಂಜಿಸಲು ಬಯಸುತ್ತೇನೆ. ಆಗಸ್ಟ್ 6 ರಿಂದ ಶೂಟಿಂಗ್ ಪ್ರಾರಂಭಿಸಲಿರುವ  ಈ ಚಿತ್ರ ಮಾನವೀಯ ಮೌಲ್ಯಗಳ ಬಗ್ಗೆ ಇರುತ್ತದೆ, ”ಎಂದು ಅನಿಲ್ ಕುಮಾರ್ ಹೇಳುತ್ತಾರೆ. 
ಮೊದಲ ಹಂತದಲ್ಲಿ  ಬ್ಯಾಂಕಾಕ್ ಮತ್ತು ಪಟ್ಟಾಯದಲ್ಲಿ 20 ದಿನಗಳಲ್ಲಿ ಶುಟಿಂಗ್ ನಡೆಸಲು ಉದ್ದೇಶಿಸಲಾಗಿದೆ.“ಈ ಚಿತ್ರವು 50 ರ ದಶಕದಿಂದ ಪ್ರಾರಂಭವಾಗಿ ಇಂದಿನ ತಲೆಮಾರಿನವರೆಗೆ ಸಾಗಲಿದೆ"
 ನವೀನ್ ಕುಮಾರ್ ನಿರ್ಮಾಣದ ಅರ್ಜುನ್ ಜನ್ಯ ಸಂಗೀತ  ಕೆ.ಎಂ.ಪ್ರಕಾಶ್ ಸಂಕಲನಕಾರರಾಗಿ ಕೆಲಸ ಮಾಡಲಿದ್ದಾರೆ.ಇನ್ನು "ದಾರಿ ತಪ್ಪಿದ ಮಗ" ಛಾಯಾಗ್ರಾಹಕರಾದ ಶಿವಕುವಾರ್ ಬಿ ಕೆ ಸಹ ಈ ಚಿತ್ರತಂಡದಲ್ಲಿದ್ದಾರೆ.
SCROLL FOR NEXT