ಸಿನಿಮಾ ಸುದ್ದಿ

ದರ್ಶನ್ 50ನೇ ಚಿತ್ರ 'ಕುರುಕ್ಷೇತ್ರ' ಹಿಂದಿ ಭಾಷೆ ತೆರೆಗೆ ವಿಳಂಬ

Sumana Upadhyaya
ಆಗಸ್ಟ್ 9ರಂದು ವರಮಹಾಲಕ್ಷ್ಮಿ ಹಬ್ಬದ ದಿನ ದರ್ಶನ್ ಅವರ 50ನೇ ಚಿತ್ರ 'ಮುನಿರತ್ನ ಕುರುಕ್ಷೇತ್ರ' ಬಿಡುಗಡೆಯಾಗುತ್ತಿದೆ. ದಕ್ಷಿಣ ಭಾರತದ ಎಲ್ಲಾ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಸೆನ್ಸಾರ್ ಮಂಡಳಿಯಿಂದ ಒಪ್ಪಿಗೆ ಸಿಕ್ಕಿದೆ. 
ಆದರೆ ಹಿಂದಿ ಭಾಷೆಯಲ್ಲಿ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗಬೇಕಿರುವುದರಿಂದ  ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆ ಕೆಲ ದಿನಗಳ ಮಟ್ಟಿಗೆ ಮುಂದೆ ಹೋಗಬಹುದು. 5 ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು ಯೋಚಿಸುತ್ತಿದ್ದರೂ ಕೂಡ ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲು ಅದಕ್ಕೆ ಸರಿಯಾದ ರೀತಿಯಲ್ಲಿ ವಿಶೇಷ ಪ್ರಚಾರ ಸಿಗಬೇಕು ಎಂದು ಭಾವಿಸುತ್ತಿದ್ದಾರೆ.
ಕುರುಕ್ಷೇತ್ರದ ಹಿಂದಿ ಅವತರಣಿಕೆ 1,300ರಿಂದ 1500 ಥಿಯೇಟರ್ ಗಳಲ್ಲಿ ಬಿಡುಗಡೆಯಾದರೂ ಕೂಡ ಚಿತ್ರಕ್ಕೆ ಸೂಕ್ತ ಪ್ರಚಾರ, ಮಾರುಕಟ್ಟೆ ಇನ್ನೂ ಸಿಗದಿರುವುದರಿಂದ ಮತ್ತೆ ಒಂದು ವಾರ ಮುಂದೂಡುವ ಸಾಧ್ಯತೆಯಿದೆ ಎಂದು ಕುರುಕ್ಷೇತ್ರ ಚಿತ್ರ ತಂಡದ ಮೂಲಗಳು ತಿಳಿಸಿವೆ.
ಕುರುಕ್ಷೇತ್ರ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಡಿ ಮುನಿರತ್ನ ನಿರ್ಮಿಸಿದ್ದಾರೆ. ತಮಿಳು ಭಾಷೆಯಲ್ಲಿ ಕಾಲ ಚಿತ್ರದ ನಿರ್ಮಾಪಕ ಕಲೈಪುಳ್ಳಿ ಎಸ್ ತಾನು, ತೆಲುಗಿನಲ್ಲಿ ಗೀತಾ ಆಟ್ಸ್ಸ್ ಅಂಡ್ ಏಷಿಯನ್ ಸಿನೆಮಾಸ್ ವಿತರಣೆ ಮಾಡುತ್ತಿದೆ.
ಮಲಯಾಳಂ ಭಾಷೆಯಲ್ಲಿ ವಿತರಕರು ಯಾರೆಂದು ಇನ್ನೆರಡು ದಿನಗಳಲ್ಲಿ ತೀರ್ಮಾನವಾಗಲಿದೆ. ಹಿಂದಿ ಭಾಷೆಯಲ್ಲಿ ವಿತರಣೆ ಮಾಡಲು ಇಬ್ಬರು, ಮೂವರು ವಿತರಕರಲ್ಲಿ ಮಾತುಕತೆ ನಡೆದಿದ್ದು ಸದ್ಯದಲ್ಲಿಯೇ ನಿರ್ಧಾರಕ್ಕೆ ಬರಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
SCROLL FOR NEXT