ಸಿನಿಮಾ ಸುದ್ದಿ

ಎಲ್ಲಾ ಪೀಳಿಗೆಯವರಿಗೆ ಇಷ್ಟವಾಗುವ ಚಿತ್ರ 'ಐ ಲವ್ ಯು': ಸೋನು ಗೌಡ

Raghavendra Adiga
ಸ್ಯಾಂಡಲ್ ವುಡ್ ನಟಿಯರೆಲ್ಲರಿಗಿಂತ ಸೋನು ಗೌಡ ಯಾವಾಗಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಇದೀಗ ಆರ್. ಚಂದ್ರು ನಿರ್ದೇಶನದ ಉಪೇಂದ್ರ ನಾಯಕನಾಗಿರುವ "ಐ ಲವ್ ಯು" ನಲ್ಲಿ ಸಹ ಸೋನು ಗೌಡ ಅವರಿಗೆ ಮತ್ತೊಮ್ಮೆ ವಿಶೇಷ ಪಾತ್ರದಲ್ಲಿ ಮಿಂಚಲು ಅವಕಾಶ ಲಭಿಸಿದೆ. "ಇದೊಂದು ಬಾವನಾತ್ಮಕ ಕಥೆ,ಹಾಗೆಯೇ ಪ್ರತಿಯೊಬ್ಬರ ಹೃದಯಕ್ಕೆ ತಟ್ಟುತ್ತದೆ" ನಟಿ ಸೋನು ಹೇಳಿದ್ದಾರೆ.
ಸೋನು ಚಿತ್ರದಲ್ಲಿ ತಾವೆಂತಹಾ ಪಾತ್ರ ಮಾಡಿದ್ದೇನೆನ್ನುವ ಗುಟ್ಟನ್ನು ಇನ್ನೂ ಬಿಟ್ಟುಕೊಟ್ಟಿಲ್ಲ.  "ಪ್ರೇಕ್ಷಕರು ನಾನು ಉಪ್ಪಿಯ ಪ್ರೇಯಸಿಯಾಗಿದ್ದೇನೆಯೇ ಅಥವಾ ಅವರ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆಯೆ ಎನ್ನುವ್ದನ್ನು ಚಿತ್ರ ಬಿಡುಗಡೆಯಾದ ಮೇಲೆಯೇ ತಿಳಿಯಲಿ, ಅಲ್ಲಿವರೆಗೆ ಅವರು ಈ ಬಗ್ಗೆ ನಾನಾ ಕಲ್ಪನೆಗಳನ್ನು ಮೂಡಿಸಿಕೊಳ್ಳುತ್ತಿರಬೇಕು" ಅವರು ಹೇಳೀದ್ದಾರೆ.
"ಐ ಲವ್ ಯು" ಎಲ್ಲಾ ಪೀಳಿಗೆಯ ಜನರೂ ಇಷ್ಟಪಡುವ ಚಿತ್ರವಾಗಿದೆ.ಆದಾಗ್ಯೂ, ಈ ಕಥೆಯನ್ನು ಉಪೇಂದ್ರ ಗಾಗಿ ಬರೆಯಲಾಗಿದೆ. ಹೇಗೆಂದರೆ ದಶಕಗಳ ಹಿಂದಿನ ಉಪ್ಪಿಯವರ "ಎ" ಹಾಗೂ "ಉಪೇಂದ್ರ" ಚಿತ್ರದಲ್ಲಿನ ಪಾತ್ರವೇ ಇಲ್ಲಿ ಹೊಸ ಕಾಲಘಟ್ಟದಲ್ಲಿ ಪ್ರೀತಿ, ಪ್ರೇಮದ ಕುರಿತು ಹೇಗೆ ಪ್ರತಿಕ್ರಯಿಸಲಿದೆ ಎನ್ನುವುದನ್ನು ಆರ್. ಚ್ವಂದ್ರು ಅವರು ಕಟ್ಟಿಕೊಡಲು ಬಯಸಿದ್ದಾರೆ."ಸೋನು ಹೇಳಿದ್ದಾರೆ. ವಿಶೇಷವೆಂದರೆ ಸೋನು 8 ವರ್ಷದವರಿದ್ದಾಗ "ಎ" ಹಾಗೂ "ಉಪೇಂದ್ರ" ಚಿತ್ರಗಳು ತೆರೆಕಂಡಿದ್ದವು. ಆಗ ಸೋನು ಅವರಿಗೆ ಪ್ರೀತಿ ಎಂಬುದರ ನಿರ್ದಿಷ್ಟ ಅರ್ಥವೇ ಗೊತ್ತಿರಲಿಲ್ಲ.
"ಈಗಿನ ಯುವಜನತೆ ಐ ಲವ್ ಯು ಚಿತ್ರ ವೀಕ್ಷಿಸಿದರೆ ಅವರು ಉಪ್ಪಿಯ ಕಳೆದೆರಡು ಚಿತ್ರಗಳೊಡನೆ ಸಂಪರ್ಕಿಸಲು ಬಯಸುತ್ತಾರೆ. ಸೋನು ವಿವರಿಸಿದ್ದಾರೆ. ಉಪ್ಪಿ ಈ ಚಿತ್ರದಲ್ಲಿ ರಚಿತಾ ರಾಮ್ ಹಾಗೂ ಸೋನು ಗೌಡ ಅವರೊಡನೆ ತೆರೆ ಹಂಚಿಕೊಂಡಿದ್ದಾರೆ."ಚಿತ್ರ ವೀಕ್ಷಿಸಿ ಹೊರಬಂದಾಗ ಪ್ರೇಕ್ಷಕರು ನನ್ನ ಪಾತ್ರದ ಬಗೆಗೆ ಮಾತನಾಡಿದ್ದಾದರೆ ನಾನೊಬ್ಬ ನಟಿಯಾಗಿ ಗೆಲುವು ಸಾಧಿಸಿದ್ದೇನೆ ಎಂದು ನಾನು ಭಾವಿಸುವೆ" ಸೋನು ಹೇಳಿದರು.
SCROLL FOR NEXT