ಮಾರ್ಚ್ 31ಕ್ಕೆ ಮುಂದಿನ ಚಿತ್ರದ ಘೋಷಣೆ, ರಕ್ಷಿತಾ ಸೋದರನೇ ನಾಯಕ: ನಿರ್ದೇಶಕ ಪ್ರೇಮ್ 
ಸಿನಿಮಾ ಸುದ್ದಿ

ಮಾರ್ಚ್ 31ಕ್ಕೆ ಮುಂದಿನ ಚಿತ್ರದ ಘೋಷಣೆ, ರಕ್ಷಿತಾ ಸೋದರನೇ ನಾಯಕ: ನಿರ್ದೇಶಕ ಪ್ರೇಮ್

ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಜೋಡಿಯನ್ನು "ದಿ ವಿಲನ್" ಎಂಬ ಒಂದೇ ಚಿತ್ರದಲ್ಲಿ ತೆರೆ ಮೇಲೆ ತಂದು ಭರ್ಜರಿ ಹೆಸರುಗಳಿಸಿದ್ದ ನಿರ್ದೇಶಕ ಪ್ರೇಮ್ ಈಗ ಮುಂದಿನ ಚಿತ್ರದ ತಯಾರಿಯಲ್ಲಿದ್ದಾರೆ.

ಬೆಂಗಳೂರು: ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಜೋಡಿಯನ್ನು "ದಿ ವಿಲನ್" ಎಂಬ ಒಂದೇ ಚಿತ್ರದಲ್ಲಿ ತೆರೆ ಮೇಲೆ ತಂದು ಭರ್ಜರಿ ಹೆಸರುಗಳಿಸಿದ್ದ ನಿರ್ದೇಶಕ ಪ್ರೇಮ್ ಈಗ ಮುಂದಿನ ಚಿತ್ರದ ತಯಾರಿಯಲ್ಲಿದ್ದಾರೆ. ಈ ಬಾರಿ ಅವರು ತಮ್ಮ ಪತ್ನಿ, ನಟಿ ರಕ್ಷಿತಾ ಸೋದರ  ಅಭಿಷೇಕ್ ರಾವ್ ಅವರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲು ಮುಂದಾಗಿದ್ದಾರೆ.
ಸೋಮವಾರ, ಮಹಾಶಿವರಾತ್ರಿ ದಿನ ಶುಬಾಶಯ ಹೇಳುವ ನೆಪದಲ್ಲಿ ಟ್ವಿಟ್ಟರ್ ನಲ್ಲಿ ತಮ್ಮ ಮುಂದಿನ ಚಿತ್ರದ ಕುರಿತ ಮಾಹಿತಿಯನ್ನು ಪ್ರೇಮ್ ಬಹಿರಂಗಪಡಿಸಿದ್ದಾರೆ. 
"ನಮಸ್ಕಾರ...
"ಇದೇ ತಿಂಗಳ‌ 31ರಂದು,‌ರಕ್ಷಿತಾ ಹುಟ್ಟುಹಬ್ಬದ ದಿನ ನಮ್ಮ ಮನೆಯ ಮತ್ತೊಂದು ‌ಪ್ರತಿಭೆಯನ್ನ ಕನ್ನಡ ಕಲಾಭಿಮಾನಿಗಳಿಗೆ  ಪರಿಚಯಿಸುತ್ತಿದ್ದೇವೆ. ನಮ್ಮಿಬ್ಬರನ್ನು ಹರಸಿದಂತೆ ನಮ್ಮನೆಯ ಈ ಕುಡಿಯನ್ನು ನಿಮ್ಮ ಮಡಿಲಲ್ಲಿಟ್ಟಿಕೊಂಡು ಹರಸಿ, ಆಶೀರ್ವಾದಿಸುತ್ತೀರಿ‌ ಅನ್ನೋ‌ ನಿರೀಕ್ಷೆಯಲ್ಲಿ... " ಪ್ರೇಮ್ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT