ಆಯುಷ್ಮಾನ್ ಭವದಲ್ಲಿ ಶಿವಣ್ಣನ ಜತೆ ರಚಿತಾ ರಾಮ್ 
ಸಿನಿಮಾ ಸುದ್ದಿ

ಕಥೆ, ಪಾತ್ರಗಳೇ ನನ್ನನ್ನು ಅರಸಿ ಬರುತ್ತದೆ: ರಚಿತಾ ರಾಮ್

ಶಿವರಾಜ್‌ಕುಮಾರ್ ಅವರ ಆಯುಷ್ಮಾನ್ ಭವ ಬಿಡುಗಡೆಗೂ ಮೊದಲೇ ಸೆಂಚುರಿ ಸ್ಟಾರ್ ಜತೆಗೆ ನಟಿಸಿದ ರಚಿತಾ ರಾಮ್ ಅವರಿಗೆ ಪ್ರಶಂಸೆಯ ಸುರಿಮಳೆಯಾಗಿದೆ. .

ಶಿವರಾಜ್‌ಕುಮಾರ್ ಅವರ ಆಯುಷ್ಮಾನ್ ಭವ ಬಿಡುಗಡೆಗೂ ಮೊದಲೇ ಸೆಂಚುರಿ ಸ್ಟಾರ್ ಜತೆಗೆ ನಟಿಸಿದ ರಚಿತಾ ರಾಮ್ ಅವರಿಗೆ ಪ್ರಶಂಸೆಯ ಸುರಿಮಳೆಯಾಗಿದೆ. . ನಿರ್ದೇಶಕ ಪಿ ವಾಸು ಮಾತ್ರವಲ್ಲದೆ ಉದ್ಯಮದ ಒಳಗೆ ಸಹ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲ ಬಾರಿಗೆ ದ್ವಾರಕೀಶ್ ಚಿತ್ರದಡಿಯಲ್ಲಿ ತಯಾರಿಸಿದ ಆಯುಷ್ಮಾನ್ ಭವದಲ್ಲಿ  ಹಿರಿಯ ನಟ ಅನಂತ್ ನಾಗ್ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಸಂಗೀತ ನಿರ್ದೇಶಕ ಗುರುಕಿರಣ್ ಪಾಲಿಗಿದು ನೂರನೇ ಚಿತ್ರವಾಗಿರುವುದು ಇನ್ನೊಂದು ವಿಶೇಷ. 

ಉಪೇಂದ್ರ ಅಭಿನಯದ ಐ ಲವ್ ಯು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದ ನಂತರ ರಚಿತಾ ರಾಮ್ ಈಗ ನವೆಂಬರ್ 15 ರಂದು ಬಿಡುಗಡೆಯಾಗುವ ಆಯುಷ್ಮಾನ್ ಭವಕ್ಕಾಗಿ ಎದುರು ನೋಡುತ್ತಿದ್ದಾರೆ. ಮ್ಯೂಸಿಕಲ್ ಥ್ರಿಲ್ಲರ್ ಜಗೆತೆ ದೊಡ್ಡ ದೊಡ್ದ ಕಲಾವಿದರೊಡನೆ ಕೆಲಸ ಮಾಡುವುದು ಕುರಿತ ಅನುಭವವನ್ನು ರಚಿತಾ ಹಂಚಿಕೊಂಡಿದ್ದಾರೆ.

"ರಾಜ್‌ಕುಮಾರ್, ವಿಷ್ಣುವರ್ಧನ್, ರಜನಿಕಾಂತ್ ಮತ್ತು ಬಾಲಕೃಷ್ಣ ಸೇರಿ ಹಲವರ ಚಿತ್ರಗಳ ನಿರ್ದೇಶನ ಮಾಡಿದ್ದ ಪಿ ವಾಸು ಅವರ ಅಡಿಯಲ್ಲಿ ಕೆಲಸ ಮಾಡುವುದು ನನಗೆ ಒಂದು ಹೆಮ್ಮೆಯಾಗಿದೆ. ನಾನು ಯಾವಾಗಲೂ ಶಿವಣ್ಣನೊಂದಿಗೆ ಕೆಲಸ ಮಾಡಲು ಬಯಸುತ್ತೇನೆ, ಆದರೆ ಸಾಮಾನ್ಯ ಚಿತ್ರಗಳಲ್ಲಿ ಅಲ್ಲ, ಆದರೆ ವಿಶೇಷ ಚಿತ್ರದಲ್ಲಿ. ಶಿವಣ್ಣ ಚಿತ್ರವೊಂದರಲ್ಲಿ ಎರಡು ಹಾಡುಗಳಿಗೆ ನೃತ್ಯ ಮಾಡಿರುವುದು, ದ್ವಾರಕೀಶ್ ಚಿತ್ರದ ಬ್ಯಾನರ್ ನಡಿ ಕೆಲಸ ಮಾಡಿದ್ದು ಈ ಎಲ್ಲಾ ಅಂಶಗಳು ಒಂದೇ ಚಿತ್ರದಲ್ಲಿ ಒಟ್ಟಿಗೆ ಸಿಕ್ಕಿದ್ದು ನನ್ನ ಅದೃಷ್ಟ ನನ್ನ ಕನಸೊಂದು ಈ ಮೂಲಕ ಸಾಕಾರವಾಗಿದೆ."

"ಆಯುಷ್ಮಾನ್ ಭವದಂತಹಾ ಕಥೆ ಸ್ಯಾಂಡಲ್ ವುಡ್ ನಲ್ಲಿ ಹೊಸದಾಗಿದೆ ಎನ್ನುವ ರಚಿತಾ “ಮೊದಲನೆಯದಾಗಿ, ಇದು ಅನಿರೀಕ್ಷಿತ ಪಾತ್ರ. ವಾಸು ಸರ್ ಅವರಿಂದ ನನಗೆ ಕರೆ ಬಂದಾಗ, ನಾಗವಲ್ಲಿಯಂತೆಯೇ  ಭಯಾನಕ ಪ್ರಕಾರದ ಭಾಗವಾಗಬೇಕೆಂದು ನಾನು ನಿರೀಕ್ಷಿಸಿದೆ. ಆದರೆ ಅವರು ನಿರೂಪಿಸಿದ ಸ್ಕ್ರಿಪ್ಟ್ ನನ್ನನ್ನು ಬೇರೆ ಸನ್ನಿವೇಶಕ್ಕೆ ಕರೆದೊಯ್ಯಿತು. ನಾನು ಈ ಪಾತ್ರವನ್ನು ನಿರ್ವಹಿಸಬಹುದೇ ಎಂಬ ಹಿಂಜರಿಕೆ ಸಹ ಇತ್ತು.  ಅದನ್ನು ನಾನು ನಿರ್ಮಾಪಕ ಯೋಗಿಯೊಂದಿಗೆ ಸಹ ಚರ್ಚಿಸಿದ್ದೆ. ಆದರೆ ಅವರು ನನಗೆ ವಾಸು ಅವರ ಆಯ್ಕೆ ಬಗೆಗೆ ಮನವರಿಕೆ ಮಾಡಿಕೊಟ್ಟರು. ಇಡೀ ಪಾತ್ರವು ನನಗೆ ಹೊಸದು, ಹಾಗೆಯೇ ನಾನು ನೋಡಿದ ರೀತಿ. ನೈಸರ್ಗಿಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವಾಗ ನಾವು ಅಪಾಯಗಳನ್ನು ಎದುರಿಸಿದ ಸಂದರ್ಭಗಳೂ ಇದೆ.

"ನಾನು ಪ್ರತಿದಿನ ಖಾಲಿ ಮನಸ್ಸಿನಿಂದ ಹೋಗಲು ನಿರ್ಧರಿಸಿದ್ದೆ, ಮತ್ತು ಅಂತಿಮವಾಗಿ ನಾನು ನಿರ್ದೇಶಕ ನಟಿಯಾಗಿ ಕೆಲಸ ಮಾಡಿದ್ದೇನೆ.ಚಿತ್ರದಲ್ಲಿ ನನ್ನ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸುವ ಅವಕಾಶ ಲಭಿಸಿದೆ. ಉದ್ಯಮದಲ್ಲಿ ಇದುವರೆಗಿನ ನನ್ನ ಪಾತ್ರಗಳ ಬಗೆಗೆ ಹೇಳಿದಂತೆ ನಾನು ಪಕ್ಕಾ ಕಮರ್ಷಿಯಲ್ ಹೀರೋಯಿನ್ ಆಗಿದ್ದೆ. ಬಬ್ಲಿ ಪಾತ್ರಗಳು ಅಥವಾ ಬ್ನೆರೆಮನೆಯ ಹುಡುಗಿಯ ಪಾತ್ರವನ್ನು ಮಾತ್ರ ನಿರ್ವಹಿಸಲು ಯೋಗ್ಯ ಎಂದು ಭಾವಿಸಿದ್ದರು.  ಆದರೆ ಈ ಚಿತ್ರದ ಮುಖಾಂತರ ಹೊಸ ಪ್ರಯತ್ನವೊಂದನ್ನು ಮಾಡಿದ್ದೇನೆ. "

ಶಿವಣ್ಣ ಅವರೊಂದಿಗೆ ಮೊದಲ ಬಾರಿಗೆ ಒಡನಾಟ ಹೊಂದಿರುವ ರಚಿತಾ ಅವರನ್ನು ‘ಕೊಹಿನೂರ್ ಡೈಮಂಡ್’ ಎಂದು ಉಲ್ಲೇಖಿಸುತ್ತಾರೆ. "ಅವರ ಸರಳತೆಯಿಂದ ನಾನು ಮಾರುಹೋಗಿದ್ದೇನೆ. ಅವರು ಅಂತಹ ಅದ್ಭುತ ಮನುಷ್ಯ. ಒಬ್ಬ ನಟನು ತನ್ನ ಸ್ಟಾರ್ಡಮ್ ಅನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಅವರೊಂದು  ಉತ್ತಮ ಉದಾಹರಣೆ. ಚಿತ್ರದ ಸಂಪೂರ್ಣ ಪ್ರಸ್ತುತಿಯನ್ನು ಪ್ರಬುದ್ಧವಾಗಿ ನಿರ್ವಹಿಸಲಾಗುತ್ತದೆ. ಈ ಚಿತ್ರದಲ್ಲಿ ನನ್ನ ಅಜ್ಜನ ಪಾತ್ರದಲ್ಲಿ ನಟಿಸಿರುವ ಅನಂತ್ ಸರ್ ಅವರೊಂದಿಗೆ ನೃತ್ಯ ಮಾಡುವ ಅವಕಾಶವೂ ನನಗೆ ಸಿಕ್ಕಿತು. ಇದು ಒಂದು ಗೌರವವಾಗಿತ್ತು, ಎಂದು ನಟಿ ವಿವರಿಸಿದ್ದಾರೆ.ಸ್ಯಾಂಡಲ್ ವುಡ್ ನ ಅಗ್ರ ತಾರೆಯರೊಂದಿಗೆ ಕೆಲಸ ಮಾಡುವಲ್ಲಿ ಯಶಸ್ವಿಯಾದ ಅವರು, ಪ್ರಜ್ವಾಲ್ ದೇವರಾಜ್, ರಿಷಿ, ರಾಣಾ ಮತ್ತು ಧನಂಜಯ್ ಸೇರಿದಂತೆ ಹೊಸ ನಟರ ಜೊತೆ ಸಹ ಕೆಲಸ ಮಾಡಿದ್ದಾರೆ.

“ಇಲ್ಲಿಯವರೆಗೆ, ನಾನು ಸ್ಕ್ರಿಪ್ಟ್ ಆಯ್ಕೆ ಮಾಡಲು ಹೊರಟಿಲ್ಲ. ಕಥೆ ಮತ್ತು ಪಾತ್ರವು ಯಾವಾಗಲೂ ನನ್ನನ್ನು ಆರಿಸಿಕೊಂಡಿದೆ ಎಂದು ರಚಿತಾ ಹೇಳುತ್ತಾರೆ, “ನಿರ್ದೇಶಕರು ಅವರು ಕಥೆಯನ್ನು ತಮ್ಮ ಮನಸ್ಸಿನಲ್ಲಿಟ್ಟುಕೊಂಡು ಸ್ಕ್ರಿಪ್ಟ್ ಮಾಡುತ್ತಾರೆ ಚಲನಚಿತ್ರ ನಿರ್ಮಾಪಕರು ತಮ್ಮ ವಿಷಯಗಳೊಂದಿಗೆ ನನ್ನನ್ನು ಸಂಪರ್ಕಿಸಿದ್ದಾರೆ. ಪ್ರಸ್ತುತ, ನಾನು ಕಥೆ, ನನ್ನ ಪಾತ್ರ ಮತ್ತು ತಂಡಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದೇನೆ. ಅದಕ್ಕೆ ಅನುಗುಣವಾಗಿ ನಾನು ಯೋಜನೆಗಳನ್ನು ಆರಿಸುವ ಮೂಲಕ ಒಪ್ಪಿಗೆ ಸೂಚಿಸಿ ಅಥವಾ ಬಿಟ್ಟುಕೊಡುತ್ತೇನೆ. ಎಂದು ರಚಿತಾ ತಮ್ಮ ತೀರ್ಮಾನವನ್ನು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT