ಸಿನಿಮಾ ಸುದ್ದಿ

ಚಲನಚಿತ್ರದ ಪೋಷಕ ಕಲಾವಿದರಿಗೆ ಆಲೆಯನ್ಸ್ ವಿವಿಯಿಂದ ಆರ್ಥಿಕ ನೆರವು : ಡಿಸಿಎಂ ಅಶ್ವತ್ಥ್ ನಾರಾಯಣ್

Raghavendra Adiga

ಕೋವಿಡ್-19 ಕಾರಣದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಕನ್ನಡ ಚಿತ್ರ ರಂಗದ 40 ಪೋಷಕ ಕಲಾವಿದರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಅಲಿಯನ್ಸ್ ವಿಶ್ವವಿದ್ಯಾಲಯ ವತಿಯಿಂದ ಆರ್ಥಿಕ ನೆರವು ಕೊಡಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸಿನಿಮಾ ಹಾಗೂ ಕಿರುತೆರೆಯ ಸುಮಾರು 40 ಕಲಾವಿದರಿಗೆ ಅಲಿಯನ್ಸ್ ವಿಶ್ವವಿದ್ಯಾ ಲಯ ನೀಡಿದ ಹಣಕಾಸು ನೆರವಿನ ಜತೆಗೆ ಪ್ರಶಂಸನಾ ಪತ್ರವನ್ನು ನೀಡಿದರಲ್ಲದೆ, ತಮ್ಮ ನಟನೆಯ ಮೂಲಕ ಚಿತ್ರ ರಂಗದ ಹಿರಿಮೆಗೆ ಕಾರಣರಾದ ಕಲಾವಿದರಿಗೆ ನೆರವಾಗುತ್ತಿರುವ ವಿವಿಯನ್ನು ಅಭಿನಂದಿಸಿದರು.

60 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರು ಕೂಡ ಚಿತ್ರೀಕರಣದಲ್ಲಿ ಭಾಗವಹಿಸಿ ಜೀವನ ಸಾಗಿಸಲು ಅನುವು ಮಾಡಿಕೊ ಡುವಂತೆ ಇದೇ ವೇಳೆ ಕಲಾವಿದರು ಡಿಸಿಎಂ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿ ಎಂ,ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

ಕನ್ನಡ ಚಿತ್ರರಂಗಕ್ಕೆ ಅಮೋಘ ಕೊಡುಗೆಗಳನ್ನು ನೀಡುತ್ತಿರುವ ಪೋಷಕ ಕಲಾವಿದರಿಗೆ ಅಲಯನ್ಸ್ ವಿಶ್ವವಿದ್ಯಾಲಯದ ವತಿಯಿಂದ 'ಪ್ರಶಂಸಾ ಪ್ರಮಾಣಪತ್ರ' ನೀಡಿ ಕಲಾವಿದರಿಗೆ ಪ್ರೋತ್ಸಾಹಿಸಿದ್ದಲ್ಲದೆ ಕೋವಿಡ್ ಸಂಕಷ್ಟಗಳನ್ನು ಪರಿಹರಿಸಲು ಸಹಾಯ ಕೋರಿದ್ದಾಗ ಅವರಿಗೆ ಬೇಕಾದ ಬೆಂಬಲ ನೀಡಿ ಅವರ ಪ್ರತಿಭೆ ಹಾಗೂ ಕೊಡುಗೆಗಳನ್ನು ಗುರುತಿಸಿ ಗೌರವಿಸಿದ್ದಾರೆ. 

ಶಿವರಾಜ್​​ಕುಮಾರ್ ಭೇಟಿ

ಇದಕ್ಕೆ ಮುನ್ನ ಕೊರೋನಾವೈರಸ್ ಲಾಕ್ ಡೌನ್ ನಿಂದಾಗಿ  ಚಿತ್ರರಂಗಕ್ಕೆ ಸಾಕಷ್ಟು ನಷ್ಟವಾಗಿರುವ ಹಿನ್ನೆಲೆ ಚಿತ್ರರಂಗದ ಸಮಸ್ಯೆಗಳ ಬಗೆಗೆ ಗಮನಹರಿಸಿ ಬಗೆಹರಿಸಬೇಕೆಂದು ಮನವಿ ಮಾಡಲು ಉಪ ಮುಖ್ಯಮಂತ್ರಿ ಅಶ್ವತ್ಥ್​​​​​​​​​ ನಾರಾಯಣ ಅವರನ್ನು ಹ್ಯಾಟ್ರಿಕ್ ಹೀರೋ  ಶಿವರಾಜ್ ಕುಮಾರ್ ಭೇಟಿಯಾಗಿದ್ದರು.

ಕನ್ನಡ ಚಿತ್ರರಂಗದ ಸಾರಥ್ಯ ವಹಿಸಿಕೊಂಡ ನಂತರ ಇದು ಮೊದಲ ಬಾರಿಗೆ ಶಿವಣ್ಣ ಉಪಮುಖ್ಯಮಂತ್ರಿ ಅಶ್ವತ್ಥ್​​​​​​​​​ ನಾರಾಯಣ ಅವರನ್ನು ಭೇಟಿ ಮಾಡಿದ್ದಾರೆ. 

ಡಿಸಿಎಂ ನಂತರ ಮಾದ್ಯಮದೊಡನೆ ಮಾತನಾಡಿದ ಶಿವರಾಜ್ ಕುಮಾರ್ "ಇಂದು ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಚಿತ್ರರಂಗದ ಕಲಾವಿದರು, ನಿರ್ಮಾಪಕರು, ವಿತರಕರು, ಥಿಯೇಟರ್ ಮಾಲೀಕರು, ಸಿನಿ ಕಾರ್ಮಿಕರು ಹಾಗೂ ಕಿರುತೆರೆ ಕಲಾವಿದರು ಸೇರಿ ಎಲ್ಲರಿಗೆ ಸಮಸ್ಯೆಯಾಗಿದೆ, ಈ ಹಿನ್ನೆಲೆ ಅವರ ಸಮಸ್ಯೆ ಪರಿಹಾರಕ್ಕೆ ಹಾಗೂ ಚಿತ್ರರಂಗದ ಅಭಿವೃದ್ಧಿಗೆ  ಏನಾದರೂ ಯೋಜನೆ ಹಾಕಬೇಕೆಂದು ನಾನು ಇಂದು ಉಪ  ಮುಖ್ಯಮಂತ್ರಿಯೊಡನೆ ಚರ್ಚಿಸಿದ್ದೇನೆ. ಇದಕ್ಕೆ ಡಿಸಿಎಂ ಅವರು ಉತ್ತಮ ಸ್ಪಂದನೆ ನೀಡೀದ್ದಾರೆ ಎಂದು ಹೇಳಿದ್ದಾರೆ.

SCROLL FOR NEXT