ಶಿವರಾಜ್ ಕುಮಾರ್- ನಿರ್ದೇಶಕ ಹರ್ಷ 
ಸಿನಿಮಾ ಸುದ್ದಿ

ನಿರ್ದೇಶಕ ಹರ್ಷ ಜೊತೆ ಶಿವಣ್ಣ ಹೊಸ ಸಿನಿಮಾ: ಜನವರಿಯಲ್ಲಿ ಚಿತ್ರೀಕರಣಕ್ಕೆ ಭರ್ಜರಿ ತಯಾರಿ

ಲಾಕ್ ಡೌನ್ ಮುಕ್ತಾಯಗೊಂಡ ಬಳಿಕ ನಟ ಶಿವರಾಜ್ ಕುಮಾರ್ ಬಿಡುವಿಲ್ಲದಂತೆ ಶೂಟಿಂಗ್ ನಲ್ಲಿ ತೊಡಗಿದ್ದಾರೆ. 122 ಸಿನಿಮಾಗಳಲ್ಲಿ ಅಭಿನಯಿಸಿರುವ ಶಿವಣ್ಣ, ಭಜರಂಗಿ-2 ಸಿನಿಮಾದ ಬಾಕಿ ಉಳಿದಿದ್ದ ಭಾಗಗಳನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ವಿಜಯ್ ಮಿಲ್ಟನ್ ನ ಶಿವಪ್ಪ ಸಿನಿಮಾದಲ್ಲಿ ತೊಡಗಿದ್ದಾರೆ. 

ಲಾಕ್ ಡೌನ್ ಮುಕ್ತಾಯಗೊಂಡ ಬಳಿಕ ನಟ ಶಿವರಾಜ್ ಕುಮಾರ್ ಬಿಡುವಿಲ್ಲದಂತೆ ಶೂಟಿಂಗ್ ನಲ್ಲಿ ತೊಡಗಿದ್ದಾರೆ. 122 ಸಿನಿಮಾಗಳಲ್ಲಿ ಅಭಿನಯಿಸಿರುವ ಶಿವಣ್ಣ, ಭಜರಂಗಿ-2 ಸಿನಿಮಾದ ಬಾಕಿ ಉಳಿದಿದ್ದ ಭಾಗಗಳನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ವಿಜಯ್ ಮಿಲ್ಟನ್ ನ ಶಿವಪ್ಪ ಸಿನಿಮಾದಲ್ಲಿ ತೊಡಗಿದ್ದಾರೆ. 

2021 ರಲ್ಲಿ ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ ಸೆಟ್ಟೇರಲಿದ್ದು ಜನವರಿಯಿಂದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ. ಇತ್ತೀಚೆಗಷ್ಟೇ ಸರಳ ಸಮಾರಂಭದಲ್ಲಿ ಸಿನಿಮಗೆ ಮುಹೂರ್ತ ಕೂಡ ನೆರವೇರಿದ್ದು, ಜ.14-15 ರಿಂದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ.

ಈ ನಡುವೆ ಶಿವಣ್ಣ ಚಿನ್ನಾಭರಣಗಳ ಜಾಹಿರಾತನ್ನು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ವಜ್ರಕಾಯ, ಭಜರಂಗಿ, ಭಜರಂಗಿ-2 ಆದನಂತರ ಶಿವಣ್ಣ-ಹರ್ಷ ಜೊತೆಗೂಡಿ ಮಾಡುತ್ತಿರುವ 4 ನೇ ಚಿತ್ರ ಇದಾಗಿರಲಿದ್ದು ಶೀರ್ಷಿಕೆಯನ್ನು ಇನ್ನಷ್ಟೇ ನಿರ್ಧಾರ ಮಾಡಬೇಕಿದೆ.

ಹೊಸ ಸಿನಿಮಾ ವಾಸ್ತವಿಕ ಕಥಾವಸ್ತು ಮತ್ತು ವಿಷಯವನ್ನು ಹೊಂದಿರಲಿದ್ದು, ತಮ್ಮ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಇದು ಭಿನ್ನವಾಗಿರಲಿದೆ ಎನ್ನುತ್ತಾರೆ ನಿರ್ದೇಶಕ ಹರ್ಷ. ಈ ಚಿತ್ರ ಶಿವಣ್ಣ ಅವರಿಗೆ 124 ನೇ ಚಿತ್ರವಾಗಿರಲಿದ್ದು, 125 ನೇ ಸಿನಿಮಾ ಭೈರತಿ ರಣಗಲ್ ಆಗಿರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿದ್ದ ರಿಗ್ಗಿಂಗ್ ವಾತಾವರಣದಲ್ಲಿ ನಿಜವಾಗಿಯೂ ಕೆಲಸ ಮಾಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ