ಧನ್ವೀರ್, ಶ್ರೀಲೀಲಾ 
ಸಿನಿಮಾ ಸುದ್ದಿ

'ಬೈ 2 ಲವ್' ರೊಮ್ಯಾಂಟಿಕ್  ಚಿತ್ರದಲ್ಲಿ ಧನ್ವೀರ್, ಶ್ರೀಲೀಲಾ ಜೋಡಿ!

ನಿರ್ದೇಶಕ ಹರಿ ಸಂತೋಷ್ ಅವರ ಮುಂದಿನ ಯೋಜನೆಯು ನಟ ಧನ್ವೀರ್ ಅಭಿನಯದ ಒಂದು ರೊಮ್ಯಾಂಟಿಕ್ ಡ್ರಾಮಾ ಆಗಿದ್ದು ಇದಕ್ಕಾಗಿ ನಟನ ಆಕ್ಷನ್ ಎಂಟರ್ಟೈನರ್ "ಬಂಪರ್" ಶೂಟಿಂಗ್ ಪ್ರಾರಂಭಕ್ಕೆ ಮುನ್ನವೇ ಕೆಲಸ ಪ್ರಾರಂಭವಾಗಲಿದೆ.

ನಿರ್ದೇಶಕ ಹರಿ ಸಂತೋಷ್ ಅವರ ಮುಂದಿನ ಯೋಜನೆಯು ನಟ ಧನ್ವೀರ್ ಅಭಿನಯದ ಒಂದು ರೊಮ್ಯಾಂಟಿಕ್ ಡ್ರಾಮಾ ಆಗಿದ್ದು ಇದಕ್ಕಾಗಿ ನಟನ ಆಕ್ಷನ್ ಎಂಟರ್ಟೈನರ್ "ಬಂಪರ್" ಶೂಟಿಂಗ್ ಪ್ರಾರಂಭಕ್ಕೆ ಮುನ್ನವೇ ಕೆಲಸ ಪ್ರಾರಂಭವಾಗಲಿದೆ. ಚಿತ್ರಕ್ಕೆ "ಬೈ 2 ಲವ್" ಎಂದು ಹೆಸರಿಡಲಾಗಿದ್ದು ನಿರ್ದೇಶಕರೇ ಚಿತ್ರಕ್ಕೆ ಕಥೆಯನ್ನೂ ಬರೆದಿದ್ದಾರೆ.

ರೋಮ್ಯಾಂಟಿಕ್ ಹಿನ್ನೆಲೆಯ ಈ ಚಿತ್ರದಲ್ಲಿ ಧನ್ವೀರ್ ಗೆ ಜೋಡಿಯಾಗಿ "ಕಿಸ್" ನಾಯಕಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಚಿತ್ರದ ಮೂಲಕ ಅಭಿನಯ ಕ್ಷೇತ್ರಕ್ಕೆ ಆಗಮಿಸಿದ್ದ ನಟಿಇತ್ತೀಚೆಗೆ ಧ್ರುವ ಸರ್ಜಾ ಅವರ :ದುಬಾರಿ"ಚಿತ್ರಕ್ಕೆ ಸಹಿ ಹಾಕಿದ್ದಾರೆ. 

"ಬೈ 2 ಲವ್" ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಹೊಸ ಜೋಡಿಯೊಂದನ್ನು ಪರಿಚಯಿಸಲಿದೆ. ನಿರ್ದೇಶಕ ಸುನಿಯ"ಬಜಾರ್" ಮೂಲಕ ನಾಯಕ ನಟನಾದ ಧನ್ವೀರ್ ಎರಡನೇ ಬಾರಿಗೆ ಬೆಳ್ಳಿ ಪರದೆಯಲ್ಲಿಕಾಣಿಸಿಕೊಳ್ಳಲಿದ್ದಾರೆ. "ಅಲೆಮಾರಿ", "ಕಾಲೇಜ್ ಕುಮಾರ್" ನಂತಹಾ ಚಿತ್ರಗಳ ನಿರ್ದೇಶಕ ಹರಿ ಸಂತೋಷ್  ಅವರ "ಬೈ 2 ಲವ್" ಅನ್ನು ಕೆವಿಎನ್ ಪ್ರೊಡಕ್ಷನ್ ಮತ್ತು ಸುಪ್ರೀತ್ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಇದಾಗಲೇ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿರುವ ತಂಡವು ಜನವರಿ 4 ರಂದು ಚಿತ್ರೀಕರಣ ಪ್ರಾರಂಭಿಸಲಿದೆ.

ಶ್ರೀಲೀಲಾ

ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಇದ್ದರೆ ಮಹೇಂದ್ರ ಸಿಂಹ  ಡಿಒಪಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್