ಚಾಂಮುಡೇಶ್ವರಿ ಸ್ಟುಡಿಯೋಸ್ ನಿಂದ ಪ್ರತಿಭಾ ಸಂಪದ 
ಸಿನಿಮಾ ಸುದ್ದಿ

ಚಾಮುಂಡೇಶ್ವರಿ ಸ್ಟುಡಿಯೋಸ್ ಸಹಕಾರದಲ್ಲಿ ನೂತನ ಪ್ರತಿಭೆಗಳಿಗೆ ವೇದಿಕೆ ಸೃಷ್ಟಿ

ಸಿನಿಮಾಕ್ಷೇತ್ರ ಪ್ರವೇಶ ಬಯಸುವವರಿಗೆ ಚಾಮುಂಡೇಶ್ವರಿ ಸ್ಟುಡಿಯೋಸ್ ಬೃಹತ್ ವೇದಿಕೆ ಕಲ್ಪಿಸುತ್ತಿದೆ.

ಬೆಂಗಳೂರು: ಸಿನಿಮಾಕ್ಷೇತ್ರ ಪ್ರವೇಶ ಬಯಸುವವರಿಗೆ ಚಾಮುಂಡೇಶ್ವರಿ ಸ್ಟುಡಿಯೋಸ್ ಬೃಹತ್ ವೇದಿಕೆ ಕಲ್ಪಿಸುತ್ತಿದೆ.

ಸಿನಿಮಾ ಸಂಸ್ಥೆ ಚಾಮುಂಡೇಶ್ವರಿ ಸ್ಟುಡಿಯೋದ ಸಂಪೂರ್ಣ ಬೆಂಬಲ ಮತ್ತು ಸಹಕಾರದೊಂದಿಗೆ ‘ಪ್ರತಿಭಾ ಸಂಪದ’ ಯೋಜನೆ ರೂಪಿಸಲಾಗಿದೆ. ಒಂದು ಚಿತ್ರ ನಿರ್ಮಾಣಕ್ಕೆ ಕಲಾವಿದರು, ತಂತ್ರಜ್ಞರು, ಸಂಸ್ಥೆಗಳು ಎಲ್ಲರೂ ಬೇಕು. ಈ ಎಲ್ಲ ವಲಯದಲ್ಲಿ ವಿನೂತನ ಪ್ರತಿಭೆಗಳನ್ನು ಗುರುತಿಸಿ ಶೋಧಿಸಿ,  ಚಿತ್ರಜಗತ್ತಿಗೆ ಅವರನ್ನು ಪರಿಪಕ್ವವಾಗಿ ಪರಿಚಯಿಸುವ ಕಾರ್ಯಕ್ರಮವಿದು. ಚಾಮುಂಡೇಶ್ವರಿ ಸಿನಿಮಾ ಸಂಸ್ಥೆಯು 100 ಕಿರುಚಿತ್ರಗಳನ್ನು ನಿರ್ಮಿಸಲು ಯೋಜಿಸಿದೆ. ಅಲ್ಲಿನ ಪ್ರತಿಭೆಗಳನ್ನು ಬಳಸಿಕೊಂಡು ಆನಂತರದ ದಿನಗಳಲ್ಲಿ 10 ಸಿನಿಮಾ ಮಾಡಲು ಯೋಜಿಸಿದೆ. ಈ ಯೋಜನೆಗೆ ಯಶಸ್ವಿ 50ನೇ  ವರ್ಷಾಚರಣೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋ ಸಕಲ ರೀತಿಯಲ್ಲಿ ನೆರವು ನೀಡಲು ಕೈ ಜೋಡಿಸಿದೆ ಎಂದು ಸಿನಿಮದ ಮುಖ್ಯಸ್ಥ ಎಂ.ಎಲ್ ಪ್ರಸನ್ನ ತಿಳಿಸಿದ್ದಾರೆ.

ಈ 100 ಕಿರುಚಿತ್ರಗಳಲ್ಲಿ 10 ಕಿರುಚಿತ್ರಗಳನ್ನು ಕನ್ನಡದ ಹೆಸರಾಂತ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಆ ಮೂಲಕ ಹೊಸಬರಿಗೆ ಗುಣಮಟ್ಟವನ್ನು ಉಳಿದ 90 ಕಿರುಚಿತ್ರಗಳನ್ನು ನಿರ್ಮಿಸಲು 45 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ತಂಡಕ್ಕೆ 2 ಕಿರುಚಿತ್ರದ ಜವಾಬ್ದಾರಿ ನೀಡಲಾಗುತ್ತದೆ. ಅದರಲ್ಲೊಂದು  ಮನರಂಜನೀಯವಾದರೆ, ಇನ್ನೊಂದು ಮನಮುಟ್ಟುವಂಥ ಪ್ರೀತಿ, ಸಹನೆ, ಸಾಮಾಜಿಕ ತಲ್ಲಣದಂಥ ಕತೆಯನ್ನು ಆಯ್ದುಕೊಳ್ಳಬೇಕು. 100 ಕಿರುಚಿತ್ರಗಳಲ್ಲಿ ಆಯ್ದ 60 ಕಿರುಚಿತ್ರೋತ್ಸವ ಜುಲೈ ಕೊನೇ ವಾರದಲ್ಲಿ 6 ದಿನಗಳ ಕಾಲ ಪ್ರದರ್ಶಿಸಲಾಗುವುದು. ಚಿತ್ರರಂಗದ ಗಣ್ಯರು ಇದರಲ್ಲಿ ಭಾಗವಹಿಸಲಿದ್ದಾರೆ. ಕೊನೆಯ  ಏಳನೇ ದಿನದ ಸಮಾರೋಪ ಸಮಾರಂಭದಲ್ಲಿ ಆಯ್ದ 10 ತಂಡಗಳಿಗೆ ಚಲನಚಿತ್ರವನ್ನು ನಿರ್ಮಾಣದ ಘೋಷಣೆ ಮಾಡಲಾಗುತ್ತದೆ. ಹಾಗಾಗಿ ಸಿನಿಮಾದ ಜಾಲತಾಣದಲ್ಲಿ ಈಗಲೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.

ಚಾಮುಂಡೇಶ್ವರಿ ಸ್ಟುಡಿಯೋದ ಮುಖ್ಯಸ್ಥ ಶಡಗೋಪನ್ ಮಾತನಾಡಿ ಒಂದೊಳ್ಳೆ ಕಾನ್ಸೆಪ್ಟ್ ಸಿದ್ಧಪಡಿಸುವಂತೆ ಹೇಳಿದ್ದೆ ಸಿನಿಘಮದಲ್ಲಿ ಕೇವಲ ಸಿನಿಮಾ ಅಷ್ಟೇ ಅಲ್ಲದೆ, ಉದ್ಯೋಗಾವಕಾಶ ಮತ್ತು ಸಿನಿಮಾ ಆಡಿಷನ್​ಗಳ ಬಗ್ಗೆಯೂ ಮಾಹಿತಿ ಇರಲಿದೆ. ಬೇಕಾದವರು ನೇರವಾಗಿ ಅವರನ್ನೇ ಸಂಪರ್ಕಿಸಬಹುದಾಗಿದೆ  ಎಂದರು. ಸಿನಿಮಾದ ವೆಂಕಟ್ ಗೌಡ ಮಾತನಾಡಿ, ಕೇವಲ ಕಲಾವಿದರ ಮಾಹಿತಿಯಷ್ಟೇ ಅಲ್ಲ ತಾಂತ್ರಿಕ ವರ್ಗದವರ ಮಾಹಿತಿಯನ್ನೂ ಸೇರಿಸಲಿದ್ದೇವೆ ಎಂದರು.

ನಿರ್ದೇಶಕ ಶಶಾಂಕ್ ಈ ಕಾನ್ಸೆಪ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

50ರ ಸಂಭ್ರಮದಲ್ಲಿ ಚಾಮುಂಡೇಶ್ವರಿ ಸ್ಟುಡಿಯೋ
ಚಾಮುಂಡೇಶ್ವರಿ ಸ್ಟುಡಿಯೋ ಕಳೆದ 50 ವರ್ಷಗಳಿಂದ ಕನ್ನಡ ಸಿನಿಮಾರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಇದೀಗ ಇದೇ ಸ್ಟುಡಿಯೋ 5 ದಶಕ ಪೂರೈಸಿದ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಕ್ಕೆ ಇಳಿದಿದ್ದು, ಪ್ರತಿಭಾ ಸಂಪದಕ್ಕೆ ಮುಂದಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT