ಸಿನಿಮಾ ಸುದ್ದಿ

ಸಂದೇಶ ಸಾರುವ ಚಿತ್ರಕಥೆ ನನಗೆ ಸಿಕ್ಕಿರುವುದು ಸಂತೋಷ ತಂದಿದೆ: ರಾಘವೇಂದ್ರ ರಾಜ್‌ಕುಮಾರ್

Raghavendra Adiga

ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ "ರಾಜತಂತ್ರ"ದೊಡನೆ ಕನ್ನಡ ಚಿತ್ರರಂಗದ ಹೊಸ ವರ್ಷ ಪ್ರಾರಂಭವಾಗಲಿದೆ. ಈ ಚಿತ್ರ ಛಾಯಾಗ್ರಾಹಕ ಪಿ.ವಿ.ಆರ್ ಸ್ವಾಮಿಯವರ ಚೊಚ್ಚಲ ಚಿತ್ರವಾಗಿದೆ. ರಾಘವೇಂದ್ರ ರಾಜ್‌ಕುಮಾರ್ ಈ ಚಿತ್ರದಲ್ಲಿ ನಿವೃತ್ತ ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭವ್ಯ. ದೊಡ್ಡಣ್ಣ. ಶ್ರೀನಿವಾಸ ಮೂರ್ತಿ ಮತ್ತು ಶಂಕರ್ ಅಶ್ವತ್ ಪ್ರಮುಖ ಪಾತ್ರದಲ್ಲಿದ್ದಾರೆ.

"ಚಿತ್ರರಂಗಕ್ಕೆ ನನ್ನ ಈ ಪುನರಾಗಮನದ ಸಮಯ ನನಗೆ ಸಂದೇಶ ಆಧಾರಿತ ಕಥೆ  ಸಿಕ್ಕಿದೆ. ಇದು ಪ್ರಸ್ತುತ ನನ್ನ ಚಲನಚಿತ್ರ ವೃತ್ತಿಜೀವನದ ಅತ್ಯಂತ ಸಂತೋಷದಾಯಕ ಸಮಯವಾಗಿದೆ" ಎಂದು ರಾಘವೇಂದ್ರ ರಾಜ್‌ಕುಮಾರ್ ಪತ್ರಿಕೆಗೆ ತಿಳಿಸಿದರು. "ಮಿಲಿಟರಿ ಅಧಿಕಾರಿಯೊಬ್ಬನಿವೃತ್ತಿಯ ನಂತರ ದೇಶವನ್ನು ಹೇಗೆ ನೋಡುತ್ತಾರೆ ಎಂಬುದರ ಬಗ್ಗೆ ಸಿನಿಮಾ ತಯಾರಾಗಿದೆ. ಇದು ಭ್ರಷ್ಟಾಚಾರ, ಡ್ರಗ್ಸ್, ಚಿನ್ನದ ಬೆಲೆ, ಮದ್ದುಗುಂಡುಗಳು ಇತ್ಯಾದಿಗಳನ್ನೂ ಸಹ ಪರೋಕ್ಷವಾಗಿ ಒಳಗೊಂಡಿದೆ, ಮಾಜಿ ಸೇನಾಧಿಕಾರಿಯ ದೃಷ್ಟಿಕೋನದಿಂದ ದೇಶದ ಸ್ಥಿತಿಗತಿಯನ್ನು ಅರಿಯುವ ಪ್ರಯತ್ನ ಇಲ್ಲಿದೆ, ಪ್ರಸ್ತುತ ಘಟನೆಗಳನ್ನು ಅವನು ಹೇಗೆ ನೋಡುತ್ತಾನೆ ಎನ್ನುವುದನ್ನು ಸುಂದರವಾಗಿ ಚಿತ್ರಿಸಲಾಗಿದೆ"

ರಾಘವೇಂದ್ರ ರಾಜ್‌ಕುಮಾರ್ ಹೇಳಿದಂತೆ ಸಾಂಕ್ರಾಮಿಕ ಸಮಯದಲ್ಲಿ ಚಿತ್ರ ಪ್ರಾರಂಭವಾಗಿ ಅದೇ ಅವಧಿಯಲ್ಲಿ ಪೂರ್ಣವಾಗಿದೆ. ಇದು 2021 ರಲ್ಲಿ ಬಿಡುಗಡೆಯಾಗುವ ಮೊದಲ ಚಿತ್ರವಾಗಲಿದೆ. “ಅಮ್ಮನ ಮನೆ" ಚಿತ್ರದ ಡಿಒಪಿ ಆಗಿದ್ದ ಪಿವಿಆರ್ ಸ್ವಾಮಿ ಉತ್ತಮ ವಿಷಯದೊಂದಿಗೆ ಬಂದಿದ್ದಾರೆ, ಮತ್ತು ಇದರಲ್ಲಿ ನಾನುಮಿಲಿಟರಿ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಚಿತ್ರದ ಉತ್ತಮ ಭಾಗವೆಂದರೆ ಅದರ ಸಂಪೂರ್ಣ ಶೂಟಿಂಗ್ 10 ದಿನಗಳಲ್ಲಿ ಪೂರ್ಣಗೊಂಡಿದೆ, ಎಂದು ಅವರು ಹೇಳಿದರು. 

"ದೇವರು ನನ್ನನ್ನು ರಾಜ್‌ಕುಮಾರ್‌ನ ಮಗನಾಗಿ ಹುಟ್ಟಿಸಿದ್ದಾನೆ. ಅವನು ಕರುಣಾಮಯಿ, ಮತ್ತು ನನಗೆ ಎಲ್ಲವನ್ನು ಆಶೀರ್ವದಿಸಿದ್ದಾನೆ. ಈ ಚಿತ್ರವು ನಿರ್ದೇಶಕ ಮತ್ತು ನಿರ್ಮಾಪಕರಿಗೆ ಉತ್ತಮ ಹಣಗಳಿಸಿಕೊಡಬೇಕೆಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದರು.

SCROLL FOR NEXT