ರವೀನಾ ಟಂಡನ್ 
ಸಿನಿಮಾ ಸುದ್ದಿ

ನಾಗರಹೊಳೆ, ಕಬಿನಿಗೆ ಹೋಗುವುದೆಂದರೆ ನಂಗಿಷ್ಟ: ರವೀನಾ ಟಂಡನ್

ತಮ್ಮ ನೆಚ್ಚಿನ ನಗರಗಳ ಬಗೆಗೆ ಹೇಳುವಾಗ ಬಾಲಿವುಡ್ ನಟಿ ರವೀನಾ ಟಂಡನ್ ಗೆ ಬೆಂಗಳೂರು ಹಾಗೂ ಮೈಸೂರುಗಳ ನಡುವೆ ವ್ಯತ್ಯಾಸ ಹುಡುಕುವುದು ಕಷ್ಟವಾಗುತ್ತದೆಯಂತೆ. "ಒಂದು ಕಾಲದಲ್ಲಿ ಬೆಂಗಳೂರನ್ನು ಗಾರ್ಡನ್ ಸಿಟಿ ಎನ್ನಲಾಗುತ್ತಿತ್ತು.ನಗರದ ಕೆರೆಗಳಿಂದ ಅದು ಹೆಸರಾಗಿತ್ತು. ಆದರೆ ಇಂದು, ಬೆಂಗಳೂರು ಭಾರೀ ವಾಹನ ದಟ್ಟಣೆಗೆಹೆಸರುವಾಸಿಯಾಗಿದೆ, ” ನಟಿ ಹೇಳೀದ್ದಾರೆ.

ತಮ್ಮ ನೆಚ್ಚಿನ ನಗರಗಳ ಬಗೆಗೆ ಹೇಳುವಾಗ ಬಾಲಿವುಡ್ ನಟಿ ರವೀನಾ ಟಂಡನ್ ಗೆ ಬೆಂಗಳೂರು ಹಾಗೂ ಮೈಸೂರುಗಳ ನಡುವೆ ವ್ಯತ್ಯಾಸ ಹುಡುಕುವುದು ಕಷ್ಟವಾಗುತ್ತದೆಯಂತೆ. "ಒಂದು ಕಾಲದಲ್ಲಿ ಬೆಂಗಳೂರನ್ನು ಗಾರ್ಡನ್ ಸಿಟಿ ಎನ್ನಲಾಗುತ್ತಿತ್ತು.ನಗರದ ಕೆರೆಗಳಿಂದ ಅದು ಹೆಸರಾಗಿತ್ತು. ಆದರೆ ಇಂದು, ಬೆಂಗಳೂರು ಭಾರೀ ವಾಹನ ದಟ್ಟಣೆಗೆಹೆಸರುವಾಸಿಯಾಗಿದೆ, ” ನಟಿ ಹೇಳೀದ್ದಾರೆ.

ಕೆಜಿಎಫ್ ಚಾಪ್ಟರ್ 2ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿನಲ್ಲಿ ಶೂಟಿಂಗ್ ನಡೆಯಲಿದ್ದು ಇದಕ್ಕೆ ನಟಿ ರವೀನಾ ಬೆಂಗಳೂರಿಗೆ ಆಗಮಿಸಿದ್ದಾರೆ..."ಅವರು ಕೆಜಿಎಫ್ ಚಿತ್ರೀಕರಣದ ಬಗ್ಗೆ ಚರ್ಚಿಸುತ್ತಿದ್ದಾಗ ನಾನವರಿಗೆ ಮೈಸೂರಿನಲ್ಲಿ ಶೂಟಿಂಗ್ ನಡೆಸಲು ಒತ್ತಾಯಿಸಿದ್ದೆ," ರವೀನಾ ಹೇಳಿದರು.

"ಮೈಸೂರಿನೊಡನೆ ನಾನು ವಿಶೇಷ ಲಿಂಕ್ ಹೊಂದಿದ್ದೇನೆ. ಇದು ನನಗೆ 80-90 ರ ದಶಕದ ಹಳೆಯ ಬೆಂಗಳೂರನ್ನು ನೆನಪಿಸುತ್ತದೆ. ನನ್ನ ಕೆಲವು ಆತ್ಮೀಯ ಗೆಳೆಯರು ನಗರದಲ್ಲಿ ವಾಸಿಸುತ್ತಿರುವುದರಿಂದ ನಾನು ಅನೇಕ ಬಾರಿ ಮೈಸೂರಿಗೆ ಬರುತ್ತೇನೆ.ಈ ಸ್ಥಳದ ಬಗ್ಗೆ ನನಗೆ ತುಂಬಾ ಪರಿಚಯವಿದೆ ”ಎಂದು ಅವರು ಹೇಳಿದರು.ರವೀನಾ ನಾಗರಹೊಳೆ ಹಾಗೂ ಕಬಿನಿಗಳಿಗೆ ತೆರಳುವುದನ್ನು ಇಷ್ಟಪಡುತ್ತಾರೆ.

“ನಾನು ಕಾಡಿಗೆ ಹೋಗುವುದನ್ನು ಇಷ್ಟಪಡುತ್ತೇನೆ, ಮತ್ತು ನಾನು ಮುಂಬೈಗೆ ಹಿಂದಿರುಗುವ ಮೊದಲು ಆ ಪ್ರವಾಸ ಕೈಗೊಳ್ಳುತ್ತೇನೆ.  ಮೈಸೂರಿನ ಜನರು ನಿಜವಾಗಿಯೂ ಅದೃಷ್ಟವಂತರು ಎಂದು ನಾನು ಯಾವಾಗಲೂ ಹೇಳುತ್ತೇನೆ.ಮತ್ತು ಮುಂದಿನ ದಿನಗಳಲ್ಲಿ ಮೈಸೂರು ಕೂಡ ಬೆಂಗಳೂರಿನಂತೆ ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ, ” ನಟಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT