ಸಿನಿಮಾ ಸುದ್ದಿ

ಉತ್ತಮ ಚಿತ್ರಗಳ ಕೈಬಿಡಬೇಡಿ: ಸಂಚಾರಿ ವಿಜಯ್ ಮನವಿ

Lingaraj Badiger

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿದ್ದು, ವರ್ಷಕ್ಕೆ 200ಕ್ಕೂ ಹೆಚ್ಚಿನ ಚಿತ್ರಗಳು ಸೆನ್ಸಾರ್ ಆಗುತ್ತಿವೆ. ಇನ್ನು ಬಿಡುಗಡೆಯಾಗುತ್ತಿರುವ ಚಿತ್ರಗಳು ಒಂದೆರಡು ದಿನ ಅಥವಾ ಒಂದು ವಾರದಲ್ಲೇ ಥಿಯೇಟರ್ ಗಳಿಂದ ಎತ್ತಂಗಡಿಯಾಗುತ್ತಿವೆ. ಇದರ ಬಗ್ಗೆ ದನಿಯೆತ್ತಬೇಕಾದ ನಿರ್ಮಾಪಕರಲ್ಲಿ ಒಗ್ಗಟ್ಟಿಲ್ಲದೆ ವಾಣಿಜ್ಯ ಮಂಡಳಿಯಂತಹ ಸಂಸ್ಥೆಗಳೂ ಕೈಚೆಲ್ಲಿ ಕುಳಿತಿವೆ ಪ್ರೇಕ್ಷಕ ಕೂಡ ಯಾವ ಚಿತ್ರ ನೋಡಬೇಕು,    ಬಿಡಬೇಕು ಎಂಬ ಗೊಂದಲದಲ್ಲಿದ್ದಾನೆ.
       
ಇಂದು 13 ಚಿತ್ರಗಳು ಬಿಡುಗಡೆಯಾಗಿರುವ ನಡುವೆಯೇ ಉತ್ತಮ ಚಿತ್ರಗಳ ಕೈಬಿಡಬೇಡಿ ಎಂದು ರಾಷ್ಟ್ರಪ್ರಶಸ್ತಿ       ಪುರಸ್ಕೃತ ನಟ ಸಂಚಾರಿ ವಿಜಯ್ ಮನವಿ ಮಾಡಿದ್ದಾರೆ.
       
ಸಿನಿಮಾವನ್ನು ಉಳಿಸಿಕೊಡಿ. ''ನಾನು ಎಲ್ಲವೂ ಒಳ್ಳೆಯ ಸಿನಿಮಾ ಮಾಡಲು ಆಗಿಲ್ಲ. ಆದರೆ, ಒಳ್ಳೆಯ ಸಿನಿಮಾ ಮಾಡಿದಾಗಲೂ ಚಿತ್ರಮಂದಿರದಿಂದ ತೆಗೆದಿದ್ದಾರೆ. 'ಜಂಟಲ್ ಮ್ಯಾನ್' ಜನರಿಗೆ ತಲುಪುತ್ತಿದೆ. ಶನಿವಾರ ಮತ್ತು ಭಾನುವಾರ ಸಿನಿಮಾ ನೋಡಿ. ಹಾಗಾದರೆ, ಸೋಮವಾರದಿಂದ ಸಿನಿಮಾ ಮುಂದೆ ಹೋಗುತ್ತದೆ. ಇದೇ ಸಿನಿಮಾ ಬೇರೆ ಭಾಷೆಯಲ್ಲಿ ಬಂದಿದ್ದರೆ, ನಾವು ಕನ್ನಡಿಗರೇ ಹೆಚ್ಚು ಪ್ರೋತ್ಸಾಹ ನೀಡುತ್ತೇವೆ. ಈಗ ಈ ಚಿತ್ರವನ್ನು ಉಳಿಸಿಕೊಡಿ.''       – ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ
       
ಜಂಟಲ್ ಮ್ಯಾನ್ ನಂತಹ ಸ್ವಮೇಕ್ ಸಿನಿಮಾಗಳು ಗೆದ್ದರೆ ಕನ್ನಡದಲ್ಲಿ ಹೊಸ ಅಲೆಯ ನಿರ್ದೇಶಕ, ನಿರ್ಮಾಪಕರು ಹುಟ್ಟಿಕೊಳ್ಳುತ್ತಾರೆ. ಯಾವುದೇ ಕಳಪೆ ಸಿನಿಮಾ ಆಗಿದ್ದರೆ, ನಾನು ಮಾತನಾಡುತ್ತಿರಲಿಲ್ಲ. ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದೆ. ಆದರೆ, ಬೇರೆ ಬೇರೆ ಸಿನಿಮಾಗಳು ಬರುತ್ತಿರುವ ಕಾರಣ ಒಂದಷ್ಟು ಚಿತ್ರಮಂದಿರಗಳು ಸಿಗುತ್ತಿಲ್ಲ.'' ಎಂದು ಸಂಚಾರಿ ವಿಜಯ್ ಹೇಳಿದ್ದಾರೆ.

SCROLL FOR NEXT