ನಟಿ ಅಮೂಲ್ಯ ಪಾಲಿನ ಪವರ್ ಫುಲ್ ಪುರುಷರು ಯಾರು ಗೊತ್ತಾ? 
ಸಿನಿಮಾ ಸುದ್ದಿ

ನಟಿ ಅಮೂಲ್ಯ ಪಾಲಿನ ಪವರ್ ಫುಲ್ ಪುರುಷರು ಯಾರು ಗೊತ್ತಾ?

ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಅವರು ತಮ್ಮ ಜೀವನದ ಪವರ್‌ಫುಲ್ ಪುರುಷರು ಯಾರು ಅನ್ನೋದನ್ನ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ.

ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಅವರು ತಮ್ಮ ಜೀವನದ ಪವರ್‌ಫುಲ್ ಪುರುಷರು ಯಾರು ಅನ್ನೋದನ್ನ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ.

ಅಮೂಲ್ಯ ಮದುವೆಯಾದ ಬಳಿಕ ನಟನೆಯಿಂದ ಕೊಂಚ ದೂರ ಉಳಿದಿದ್ದರೂ, ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಅಣ್ಣಂದಿರ ಮತ್ತು ಪತಿಯ ಫೋಟೋ ಹಾಕಿ ಇವರೆಲ್ಲರೂ ನನ್ನ ಜೀವನದ ಪವರ್‍ಫುಲ್ ಪುರುಷರು ಎಂದು ಬರೆದುಕೊಂಡಿದ್ದಾರೆ.

ತಮ್ಮ ಸೋದರರು ಹಾಗೂ ಪತಿಯ ಜತೆ ನಿಂತಿರುವ ಫೋಟೋ ಹಂಚಿಕೊಂಡಿರುವ ಅಮೂಲ್ಯ ಇವೆರೆಲ್ಲರು ನನ್ನ ಜೀವನದ ಪವರ್‌ಫುಲ್ ಪುರುಷರು. ಇವರು ನನ್ನ ಕಠಿಣ ಸಮಯದಲ್ಲೂ ನನ್ನನ್ನು ನಂಬಿದ್ದರು.ನನ್ನ ಪುಟ್ಟ ಜಗತ್ತು ಶಾಂತಿ, ಖುಷಿಯಿಂದಿರಲು ಇವರೇ ಕಾರಣ ಎಂದು ಬರೆದಿದ್ದಾರೆ.

ನಟಿ ಅಮೂಲ್ಯ ಪಾಲಿಕೆ ಸದಸ್ಯ ರಾಮಚಂದ್ರೇಗೌಡರ ಮಗ ಉದ್ಯಮಿ ಜಗದೀಶ್ ಆರ್ ಚಂದ್ರ ಅವರನ್ನು ವಿವಾಹವಾಗಿದ್ದು ಮದುವೆ ಬಳಿಕ ಅವರು ಯಾವ ಚಿತ್ರದಲ್ಲಿ ಸಹ ಅಭಿನಯಿಸಿರಲಿಲ್ಲ.

2017 ರ "ಮಾಸ್ತಿಗುಡಿ" ಅಮೂಲ್ಯ ಕಡೇ ಬಾರಿಗೆ ಕಾಣಿಸಿಕೊಂಡಿದ್ದರು. ಅದು ಬಿಟ್ಟರೆ ಕಳೆದ ವರ್ಷ ತೆರೆಗೆ ಬಂದಿದ್ದ ನವರಸನಾಯಕ ಜಗ್ಗೇಶ್ ಅಭಿನಯದ "ಕಾಳಿದಾಸ ಕನ್ನಡ ಮೇಷ್ಟ್ರು" ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅವರು ಅಭಿನಯಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BMC Exit poll results: ಮತಗಟ್ಟೆ ಸಮೀಕ್ಷೆ ಪ್ರಕಟ! ಯಾರಿಗೆ ಎಷ್ಟು ಸ್ಥಾನ?

ತಪ್ಪಿದ ಮಹಾ ದುರಂತ: ಲಗೇಜ್ ಸಿಲುಕಿ ಏರ್ ಇಂಡಿಯಾ ವಿಮಾನದ ಇಂಜಿನ್ ಗೆ ಹಾನಿ, ಪ್ರಯಾಣಿಕರು ಬಚಾವ್! Video

ಸಾಯಿ ಲೇಔಟ್ ಪ್ರವಾಹ ಮರುಕಳಿಸುವುದಿಲ್ಲ, ಏಪ್ರಿಲ್ ಅಂತ್ಯದೊಳಗೆ ರೈಲ್ವೆ ವೆಂಟ್ ಕೆಲಸ ಮುಗಿಸಿ: ಜಿಬಿಎ ಮುಖ್ಯಸ್ಥ ಮಹೇಶ್ವರ ರಾವ್

Video: ದೇಗುಲ ಉತ್ಸವಕ್ಕೆ ಬಂದಿದ್ದ ಗಜೇಂದ್ರನ್ ಆನೆ ಕುಸಿದು ಸಾವು!

ರಾಹುಲ್ ಭೇಟಿ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಬೇಡಿ ಎನ್ನುತ್ತಾ ಮತ್ತೆ 'ಗೂಡಾರ್ಥದ ಪೋಸ್ಟ್', ಸ್ಪಷ್ಟನೆ ಕೊಟ್ಟ DKS!

SCROLL FOR NEXT