ಚಿತ್ರದಲ್ಲಿ ರಾಗಿಣಿ 
ಸಿನಿಮಾ ಸುದ್ದಿ

ಸಶಕ್ತ ಮಹಿಳಾ ಪಾತ್ರಗಳಿಗೆ ಹೆಚ್ಚು ಒತ್ತು: 'ಲಾ' ನಿರ್ದೇಶಕ ರಘು ಸಮರ್ಥ್

ಸ್ಯಾಂಡಲ್ ವುಡ್ ಚಿತ್ರರಂಗದ ಮೊದಲ ಡಿಜಿಟಲ್ ಸಿನಿಮಾವಾಗಿ ಬಿಡುಗಡೆಗೊಳ್ಳಲಿರುವ ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ನಟನೆಯ 'ಲಾ' ಚಿತ್ರದ ಟ್ರೇಲರ್ ಶುಕ್ರವಾರ ಬಿಡುಗಡೆಗೊಂಡಿದೆ.

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದ ಮೊದಲ ಡಿಜಿಟಲ್ ಸಿನಿಮಾವಾಗಿ ಬಿಡುಗಡೆಗೊಳ್ಳಲಿರುವ ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ನಟನೆಯ 'ಲಾ' ಚಿತ್ರದ ಟ್ರೇಲರ್ ಶುಕ್ರವಾರ ಬಿಡುಗಡೆಗೊಂಡಿದೆ. 

ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ ಯೂಟ್ಯೂಬ್ ಖಾತೆಯಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ಬಿಡುಗಡೆಯಾಗ ಕೆಲವೇ ಗಂಟೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. 

ಚಿತ್ರ ಕುರಿತು ಮಾತನಾಡಿರುವ ನಿರ್ದೇಶಕ ರಘು ಸಮರ್ಥ್ ಅವರು, ನಾನು ಸದಾಕಾಲ ಸಶಕ್ತ ಮಹಿಳಾ ಪಾತ್ರಗಳ ಚಿತ್ರವನ್ನು ನಿರ್ದೇಶಿಸಬೇಕೆಂದು ಬಯಸಿದ್ದೆ. ನಾಯಕಿಗೆ ಪ್ರಾಮುಖ್ಯತೆ ಇಲ್ಲದ ಚಿತ್ರ ನಿರ್ದೇಶಿಸುವುದು ನನಗಿಷ್ಟವಿಲ್ಲ. ನನ್ನ ಪ್ರಕಾರ ಚಿತ್ರದಲ್ಲಿ ನಾಯಕಿ ಬಂದು ಹೋಗುವುದು ಮಾತ್ರವಲ್ಲ. ಹಾಡುಗಳಲ್ಲಿ ಕಾಣಿಸಿಕೊಳ್ಳುವುದಷ್ಟೇ ಆಗಿರಬಾರದು. ಇಂತಹ ಗುಣ ಬಹುಶಃ ನನ್ನ ಬಾಲ್ಯದಿಂದಲೋ ಅಥವಾ ನನ್ನ ಕುಟುಂಬದಲ್ಲಿನ ಮಹಿಳೆಯರ ಪ್ರಭಾವದಿಂದ ನನಗೆ ಬಂದಿರಬಹುದು. ನಾನು ಎಂದಿಗೂ ಮಹಿಳೆಯರನ್ನು ದುರ್ಬಲವೆಂದು ನೋಡಿಲ್ಲ. ಮಹಿಳೆಯಲನ್ನು ಪ್ರಬಲ ಪಾತ್ರಗಳಲ್ಲಿ ತೋರಿಸಲು ನನಗಿಷ್ಟ ಎಂದು ಹೇಳಿದ್ದಾರೆ. 

ನಾನು ಯಾವಾಗಲೂ ಮಹಿಳೆಯರನ್ನು ಬಲವಾದ ಪಾತ್ರಗಳಾಗಿ ಚಿತ್ರಿಸಬೇಕೆಂದು ನೋಡಲು ಬಯಸುತ್ತೇನೆ, ಮತ್ತು ನಾಯಕಿಗೆ ಯಾವುದೇ ಪ್ರಾಮುಖ್ಯತೆ ಇಲ್ಲದ ಚಿತ್ರದೊಂದಿಗೆ ನಾನು ಸಂಬಂಧ ಹೊಂದಲು ಸಾಧ್ಯವಿಲ್ಲ. ನನ್ನ ಮಟ್ಟಿಗೆ, ಅವಳು ಬಂದು ಹೋಗುವುದು ಮಾತ್ರವಲ್ಲ, ಮತ್ತು ಕೆಲವು ಹಾಡಿನ ಸನ್ನಿವೇಶಗಳ ಭಾಗವಾಗಿರಬೇಕು ಅಥವಾ ಸರಕು ಆಗಿರಬೇಕು. ಬಹುಶಃ ಅದು ನನ್ನ ಬಾಲ್ಯ ಮತ್ತು ನನ್ನ ಕುಟುಂಬದಲ್ಲಿ ಮಹಿಳೆಯರ ಪ್ರಭಾವದಿಂದಾಗಿರಬಹುದು. ನಾನು ಅವರನ್ನು ಎಂದಿಗೂ ದುರ್ಬಲ ವಿಭಾಗವಾಗಿ ನೋಡುವುದಿಲ್ಲ, ಮತ್ತು ಯಾವಾಗಲೂ ಅವರನ್ನು ಪ್ರಬಲ ಪಾತ್ರಗಳಲ್ಲಿ ತೋರಿಸಲು ಇಷ್ಟಪಡುತ್ತೇನೆ ಎಂದು ಅವರು ಸಿಇಗೆ ಹೇಳುತ್ತಾರೆ.

ಸಂಸ್ಪೆನ್ಸ್ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಹೆಣ್ಣೊಬ್ಬಳು ವ್ಯವಸ್ಥೆಯಲ್ಲಿ ಅಡಗಿರುವ ಕಾಣದ ಕೈಗಳನ್ನು ಕೆದಕಿ ಕಾನೂನು ದಾರಿಯಲ್ಲಿ ಹೆಜ್ಜೆಯಿರುವ ರೋಚಕತೆಯನ್ನು ಹೊಂದಿದೆ. 

ಪಾತ್ರಧಾರಿ ಮತ್ತು ಸೂತ್ರಧಾರಿ ಇಬ್ಬರ ನಡುವೆ ನ್ಯಾಯ ಯಾರ ಪಾಲಿಗೆ ದಕ್ಕುತ್ತೆ ಎನ್ನುವುದನ್ನು ಚಿತ್ರದ ಟ್ರೈಲರ್ ನಲ್ಲಿ ವಿಭಿನ್ನವಾಗಿ ತೋರಿಸಲಾಗಿದೆ. 

ಚಿತ್ರವನ್ನು ರಘು ಸಮರ್ಥ್ ನಿರ್ದೇಶನ ಮಾಡಿದ್ದು, ಪುನೀತ್ ರಾಜ್ ಕುಮಾರ್ ಅವರ ಪಿಆರ್'ಕೆ ಬ್ಯಾನರ್ ಅಡಿ ಸಿನಿಮಾ ಸಿದ್ಧಗೊಂಡಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಎಂ ಗೋವಿಂದ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇದೇ ಜುಲೈ 17ರಂದು ಒಟಿಟಿ ಪ್ಲಾಟ್'ಫಾರ್ಮ್ ಅಮೆಜಾನ್ ಪ್ರೈಮ್ ನಲ್ಲಿ ಲಾ ಸಿನಿಮಾ ಬಿಡುಗಡೆಯಾಗಲಿದೆ. 

ಚಿತ್ರದಲ್ಲಿ ನ್ಯಾಯಕ್ಕಾಗಿ ಹೋರಾಡುವ ನಂದಿನಿ ಪಾತ್ರದಲ್ಲಿ ರಾಗಿಣಿ ಅವರು ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಅವಿನಾಶ್, ಮುಖ್ಯಮಂತ್ರಿ ಚಂದ್ರು, ಸುಧಾರಾಣಿ ಸೇರಿದಂತೆ ಅನೇಕ ತಾರಾಗಣವನ್ನು ಕಾಣಬಹುದಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌ ; ₹40 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದ ಮಧ್ಯವರ್ತಿ, BJP ಮುಖಂಡನ ಬಂಧನ!

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ಮರ ಬಿದ್ದು ತುಂಡಾಗಿ ವೃದ್ದನ ಮೇಲೆ ಬಿದ್ದ ಹೈಟೆನ್ಷನ್ ವೈರ್, ಅಂಗಡಿ ಮಾಲೀಕನ ಸಮಯಪ್ರಜ್ಞೆಯಿಂದ ಜೀವ ರಕ್ಷಣೆ, Video Viral

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

ನೇಪಾಳ ಪ್ರವಾಹ: ಲೈಕ್ಸ್ ಗಾಗಿ ನಕಲಿ ವಿಡಿಯೋ, ಸುಳ್ಳು ಮಾಹಿತಿ ಪ್ರಸಾರ; 72 ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಕಟ್ಟುನಿಟ್ಟಿನ ಸೂಚನೆ!