ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ತಾಯಿಯಾಗುತ್ತಿದ್ದ ಮೇಘನಾ: ಮಗುವಿನ ಮುಖ ನೋಡದೇ ಬಾರದ ಲೋಕಕ್ಕೆ ತೆರಳಿದ ಚಿರು

ಅಕಾಲಿಕ ಮರಣಕ್ಕೆ ತುತ್ತಾದ ನಟ ಚಿರಂಜೀವಿ ಸರ್ಜಾ ಇನ್ನು ಸ್ವಲ್ಪ ಸಮಯ ಕಳೆದಿದ್ದರೇ ತಂದೆಯಾಗುತ್ತಿದ್ದರು. ನಟಿ ಹಾಗೂ ಪತ್ನಿ ಮೇಘನಾ ರಾಜ್ 4 ತಿಂಗಳ ಗರ್ಭಿಣಿ.

ಚಿರು ಮತ್ತು ಮೇಘನಾ(ಸಂಗ್ರಹ ಚಿತ್ರ)
Shilpa D
Updated On : 8 Jun 2020, 8:39 am

ಬೆಂಗಳೂರು: ಅಕಾಲಿಕ ಮರಣಕ್ಕೆ ತುತ್ತಾದ ನಟ ಚಿರಂಜೀವಿ ಸರ್ಜಾ ಇನ್ನು ಸ್ವಲ್ಪ ಸಮಯ ಕಳೆದಿದ್ದರೇ ತಂದೆಯಾಗುತ್ತಿದ್ದರು.  ನಟಿ ಹಾಗೂ ಪತ್ನಿ ಮೇಘನಾ ರಾಜ್ ಈಗ 4 ತಿಂಗಳ ಗರ್ಭಿಣಿ.

10 ವರ್ಷಗಳ ಕಾಲ ಸ್ನೇಹಿತರಾಗಿದ್ದ ಚಿರು- ಮೇಘನಾ ನಡುವೆ ಪ್ರೀತಿ ಚಿಗುರೊಡೆದಿತ್ತು. ಬೆಸ್ಟ್​ ಫ್ರೆಂಡ್ಸ್​ ಆಗಿದ್ದ ಅವರಿಬ್ಬರೂ ಒಟ್ಟಿಗೇ ಜೀವನ ನಡೆಸಬೇಕೆಂದು ನಿರ್ಧರಿಸಿ 2 ವರ್ಷಗಳ ಹಿಂದೆ ಸಪ್ತಪದಿ ತುಳಿದಿದ್ದರು.

ಇನ್ನು 5 ತಿಂಗಳಲ್ಲಿ ಮೇಘನಾ ರಾಜ್ ಕಂದಮ್ಮನಿಗೆ ಜನ್ಮ ನೀಡುವವರಿದ್ದರು ಎಂಬ ಸಂಗತಿ ಬಯಲಾಗಿದೆ. ಈ ಸಿಹಿಸುದ್ದಿಯನ್ನು ಎಲ್ಲರೆದುರು ಹೇಳುವ ಮೊದಲೇ ಚಿರಂಜೀವಿ ಸರ್ಜಾ ಕಣ್ಮುಚ್ಚಿದ್ದಾರೆ.  ಅಪ್ಪನಾಗುವ ಸಂಭ್ರಮವನ್ನು ಅನುಭವಿಸುವ ಮೊದಲೇ ಇಹಲೋಕ ತ್ಯಜಿಸಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement