ಪ್ರಾರಂಭ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಲಾಕ್ ಡೌನ್ ನಂತರ 'ಪ್ರಾರಂಭ' ಚಿತ್ರತಂಡದಿಂದ ಹೊಸ ಚಿತ್ರ: ನಾಯಕ ಯಾರು?

ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಗದೀಶ್ ಕಲ್ಯಾಡಿ ಅವರು ನಿರ್ಮಿಸಿ, ಮನು ಕಲ್ಯಾಡಿ ನಿರ್ದೇಶಿಸಿರುವ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಾಯಕರಾಗಿ‌ ನಟಿಸಿರುವ‌ ಪ್ರಾರಂಭ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಲಾಕ್ ಡೌನ್ ನಂತರ ತೆರೆ ಕಾಣಲಿದೆ. ಈಗಾಗಲೇ ‌ಚಿತ್ರ ಬಿಡುಗಡೆಗೆ ಸಿನಿರಸಿಕರು ಕಾತುರದಲಿದ್ದಾರೆ.

ಬೆಂಗಳೂರು: ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಗದೀಶ್ ಕಲ್ಯಾಡಿ ಅವರು ನಿರ್ಮಿಸಿ, ಮನು ಕಲ್ಯಾಡಿ ನಿರ್ದೇಶಿಸಿರುವ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಾಯಕರಾಗಿ‌ ನಟಿಸಿರುವ‌ ಪ್ರಾರಂಭ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಲಾಕ್ ಡೌನ್ ನಂತರ ತೆರೆ ಕಾಣಲಿದೆ. ಈಗಾಗಲೇ ‌ಚಿತ್ರ ಬಿಡುಗಡೆಗೆ ಸಿನಿರಸಿಕರು ಕಾತುರದಲಿದ್ದಾರೆ.

ಪ್ರಾರಂಭದ ಮೂಲಕ ಚಿತ್ರರಂಗದಲ್ಲಿ ಶುಭಾರಂಭ ಮಾಡಲಿರುವ ನಿರ್ಮಾಪಕ‌ ಜಗದೀಶ್ ಕಲ್ಯಾಡಿ ಹಾಗೂ ನಿರ್ದೇಶಕ ಮನು ಕಲ್ಯಾಡಿ ಅವರ ಕಾಂಬಿನೇಶನ್ ನಲ್ಲಿ ಮತ್ತೊಂದು ಅದ್ದೂರಿ ಚಿತ್ರ ನಿರ್ಮಾಣ ವಾಗಲಿದೆ.  ಈ ಚಿತ್ರದ ನಾಯಕರಾಗಿ ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರು ನಟಿಸಲಿದ್ದು‌, ತಾರಾಗಣ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುವುದಾಗಿ ನಿರ್ದೇಶಕ ಮನು ಕಲ್ಯಾಡಿ ತಿಳಿಸಿದ್ದಾರೆ. 

ಲಾಕ್ ಡೌನ್ ಮುಗಿದು, ಚಿತ್ರೀಕರಣಕ್ಕೆ ಅನುಮತಿ ದೊರಕಿದ ಕೂಡಲೆ ಈ ನೂತನ ಚಿತ್ರದ ಚಿತ್ರೀಕರಣ 'ಪ್ರಾರಂಭ'ವಾಗಲಿದೆ. ಕೊರೋನಾ ಲಾಕ್ ಡೌನ್ ನಂತರ ಚಿತ್ರ ನಿರ್ಮಾಣಕ್ಕೆ ಮುಂದಾಗುವವರರು ಕಡಿಮೆ ಎಂಬ‌ ಸುದ್ದಿ ಕೇಳಿ ಬರುತ್ತಿದೆ. ಆದರೆ ಒಂದು ಚಿತ್ರ ಬಿಡುಗಡೆ ಹಂತದಲ್ಲಿರಬೇಕಾದರೆ ಮತ್ತೊಂದು ಅದ್ದೂರಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ‌ ಸಹೋದರರಾದ ನಿರ್ಮಾಪಕ ಜಗದೀಶ್ ಕಲ್ಯಾಡಿ ಹಾಗೂ ನಿರ್ದೇಶಕ ಮನು ಕಲ್ಯಾಡಿ ಅವರ ಧೈರ್ಯ ನಿಜಕ್ಕೂ ಮೆಚ್ಚುವಂತದ್ದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಇರಾನ್ ಗ್ಯಾಸ್ ಫೀಲ್ಡ್ ಮೇಲಿನ ದಾಳಿ ‘ಸೋಲೋ ಆಪರೇಷನ್’; ಅಮೆರಿಕಾ ಪಾತ್ರವಿಲ್ಲ- ಇಸ್ರೇಲ್ ಸ್ಪಷ್ಟನೆ

ಯುಗಾದಿ ಆಯ್ತು, ಇದೀಗ ಎಲ್ಲೆಡೆ ಹೊಸ ತೊಡಕು ಸಂಭ್ರಮ: ಮಾಂಸ ಖರೀದಿಗೆ ಪಾಪಣ್ಣ ಮಟನ್‌ ಸ್ಟಾಲ್‌ ಮುಂದೆ ಜನರ ಕ್ಯೂ..!

ಗಲ್ಫ್‌ ಇಂಧನ ಕೇಂದ್ರಗಳ ಮೇಲೆ ದಾಳಿಯನ್ನು 'ಒಪ್ಪಲಾಗದು': ಅನಿಲ ಪೂರೈಕೆ ಸಮಸ್ಯೆ ಬಗ್ಗೆ ಭಾರತ ಕಳವಳ!

ಯುಗಾದಿ ಹಬ್ಬದಂದೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಬೆಂಗಳೂರಿನಲ್ಲಿ ಇಂದಿನ ದರವೆಷ್ಟು?

Indian Stock Market: ರಕ್ತಪಾತ.. ಒಂದೇ ಗಂಟೆಯಲ್ಲಿ ಹೂಡಿಕೆದಾರರಿಗೆ 7,60,00,00,00,000 ರೂ ನಷ್ಟ!

SCROLL FOR NEXT