ಮಿಲಿಂದ್ ಸೋಮನ್ 
ಸಿನಿಮಾ ಸುದ್ದಿ

ಹುಟ್ಟುಹಬ್ಬದಂದು ಕಡಲ ತೀರದಲ್ಲಿ ನಗ್ನವಾಗಿ ಓಡಿದ್ದ ಮಿಲಿಂದ್ ಸೋಮನ್ ವಿರುದ್ಧ ಪ್ರಕರಣ ದಾಖಲು

ಹುಟ್ಟುಹಬ್ಬದ ದಿನದಂದು ಕಡಲ ತೀರದಲ್ಲಿ ನಗ್ನವಾಗಿ ಓಡಿದ್ದ ನಟ ಹಾಗೂ ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧ ಪ್ರಕರಣ ದಾಖಲಾಗಿದೆ. 

ಪಣಜಿ: ಹುಟ್ಟುಹಬ್ಬದ ದಿನದಂದು ಕಡಲ ತೀರದಲ್ಲಿ ನಗ್ನವಾಗಿ ಓಡಿದ್ದ ನಟ ಹಾಗೂ ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧ ಪ್ರಕರಣ ದಾಖಲಾಗಿದೆ. 

ಗೋವಾದ ಬೀಚ್‌ನಲ್ಲಿ ಅರೆನಗ್ನ ಸ್ಥಿತಿಯಲ್ಲಿ ಶೂಟಿಂಗ್ ಮಾಡಿದ ನಟಿ ಪೂನಂ ಪಾಂಡೆಯವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಆದರೆ, ಬೀಚ್ ನಲ್ಲಿ ನಗ್ನವಾಗಿ ಓಡಿದ್ದ ಮಿಲಿಂದ ಸೋಮನ್ ವಿರುದ್ಧ ಯಾವುದೇ ಪ್ರಕರಣಗಳನ್ನೂ ದಾಖಲಿಸಲಾಗಿರಲಿಲ್ಲ. 

ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಲವು ಪ್ರಶ್ನೆ ಮಾಡಿದ್ದರು. ಪೂನಂ ಪಾಂಡೆ ಬಂಧನವೇನೋ ಸರಿ. ಆದರೆ ಗೋವಾ ಬೀಚ್ ನಲ್ಲಿ ತನ್ನ ಹುಟ್ಟು ಹಬ್ಬದ ದಿನ ಬೆತ್ತಲೆಯಾಗಿ ಓಡಿದ ನಟ ಹಾಗೂ ಮಾಡೆಲ್ ಮಿಲಿಂದ್ ಸೋಮನ್ ಅವರನ್ನು ಏಕೆ ಬಂಧಿಸಲಿಲ್ಲ. ಪುರುಷರಿಗೊಂದು ಕಾನೂನು, ಮಹಿಳೆಯರಿಗೊಂದು ಕಾನೂನು ಏಕೆ? ಎಂದು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮಿಲಿಂದ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. 

ರಾಜಕೀಯ ಸಂಘಟನೆಯಾದ ಗೋವಾ ಸುರಕ್ಷ ಮಂಚ್ (ಜಿಎಸ್ಎಂ) ಈ ಸಂಬಂಧ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗೋವಾ ಪೊಲೀಸರು ಹೇಳಿದ್ದಾರೆ. 

ಸೋಮನ್ ವಿರುದ್ಧ ಐಪಿಸಿ ಸೆಕ್|ನ್ 294 (ಸಾರ್ವಜನಿಕ ಪ್ರದೇಶಗಳಲ್ಲಿ ಅಶ್ಲೀಲ ವರ್ತನೆ) ಮತ್ತು ಸೆಕ್ಷನ್ 67 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಪಂಕಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!