ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಸ್ವಂತ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ 'ರಾಬರ್ಟ್' ನಿರ್ದೇಶಕ ತರುಣ್ ಕಿಶೋರ್ ಸುಧೀರ್ 

ರಾಬರ್ಟ್ ಚಿತ್ರ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ತರುಣ್ ಸುಧೀರ್ ಕ್ರಿಯೇಟಿವ್ಜ್ ಎಂಬ ಹೆಸರಿನ ಪ್ರೊಡಕ್ಷನ್ ಹೌಸ್ ನ್ನು ಘೋಷಿಸಿದ್ದಾರೆ.

ತರುಣ್ ಕಿಶೋರ್ ಸುಧೀರ್
Nagaraja AB
Updated On : 10 Oct 2020, 2:57 pm

ಬೆಂಗಳೂರು: ರಾಬರ್ಟ್ ಚಿತ್ರ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ತರುಣ್ ಸುಧೀರ್ ಕ್ರಿಯೇಟಿವ್ಜ್ ಎಂಬ ಹೆಸರಿನ ಪ್ರೊಡಕ್ಷನ್ ಹೌಸ್ ನ್ನು ಘೋಷಿಸಿದ್ದಾರೆ.

2017 ರಲ್ಲಿ ಚೊಚ್ಚಲ ಬಾರಿಗೆ ಚೌಕ ಚಿತ್ರ ನಿರ್ದೇಶಿಸಿದ ತರುಣ್, ಇದಕ್ಕೂ ಮುಂಚೆ ಅನೇಕ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಉಮಾಪತಿ ಗೌಡ ನಿರ್ಮಿಸಿ ದರ್ಶನ್ ಅಭಿನಯಿಸಿರುವ ರಾಬರ್ಟ್ ಅವರ ನಿರ್ದೇಶನದ ಎರಡನೇ ಸಿನಿಮಾವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ.

ಜಗದೀಶ್ ಕುಮಾರ್ ಹಂಪಿ ನಿರ್ದೇಶಿಸುತ್ತಿರುವ ಶರಣ್ ಅಭಿನಯದ ಮುಂದಿನ ಚಿತ್ರದಲ್ಲಿ ತರುಣ್ ಸಹ ನಿರ್ಮಾಪಕರಾಗಿದ್ದು, ನಟ ಶರಣ್  ಒಡೆತನದ ಪ್ರೊಡಕ್ಷನ್ ಹೌಸ್ ಆಗಿರುವ ಲಾಡ್ಡೂ ಸಿನೆಮಾಸ್ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿರುವ ಚಿತ್ರಗಳ ಕ್ರಿಯಾತ್ಮಕ ವಿಭಾಗದ ಮುಖ್ಯಸ್ಥರು ಕೂಡಾ ಆಗಿದ್ದಾರೆ.

Advertisement

Advertisement

ಶರಣ್ ಅವರ 100ನೇ ಚಿತ್ರ ರಾಂಬೋದಿಂದ ಅವರೊಂದಿಗೆ ಇದ್ದು, ರಾಂಬೋ 2 ಚಿತ್ರದ ಸಹ ನಿರ್ಮಾಪಕನಾಗಿದ್ದೇನೆ.ಈ ಚಿತ್ರವನ್ನು ಜಗದೀಶ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಸುನ್ನಿಯ 'ಅವತಾರ ಪುರುಷ' ಚಿತ್ರೀಕರಣ ಮುಗಿದ ಬಳಿಕ ನವೆಂಬರ್ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭಿಸಲು ತಂಡ ಯೋಜಿಸಿರುವುದಾಗಿ ತರುಣ್ ಕಿಶೋರ್ ಸುಧೀರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement