ಸಿನಿಮಾ ಸುದ್ದಿ

'ದುಬಾರಿ'ಗು ಮೊದಲು ಮತ್ತೊಂದು ಕಥೆ ಹುಡುಕಾಟದಲ್ಲಿ ಧ್ರುವ ಸರ್ಜಾ!

Manjula VN

ಕಳೆದ ಫೆಬ್ರವರಿ ತಿಂಗಳಲ್ಲಿ ತೆರೆಕಂಡ ಆ್ಯಕ್ಷನ್ ಕಿಂಗ್ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಕಲೆಕ್ಷನ್​ ಮಾಡಿತ್ತು. ಬಳಿಕ ಧ್ರುವ ಸರ್ಜಾ ‘ದುಬಾರಿ’ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ಸಿನಿಮಾ ಸೆಟ್ಟೇರುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಚಿತ್ರದತ್ತ ಧ್ರುವ ಸರ್ಜಾ ಮುಖ ಮಾಡಿದ್ದಾರೆಂದು ಹೇಳಲಾಗುತ್ತಿದೆ. 

ದುಬಾರಿ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ವಿದೇಶಗಳಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಕೊರೋನಾ ಸಾಂಕ್ರಾಮಿಕ ರೋಗ ಭಾರೀ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಕಾರ್ಯಗಳನ್ನು ಬದಿಗೊತ್ತಿ ಮುಂದಿನ ಚಿತ್ರಗಳತ್ತ ಗಮನ ಹರಿಸಲು ಧ್ರುವ ಸರ್ಜಾರ ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ. 

ಚಿತ್ರದ ಚಿತ್ರೀಕರಣ ಬಿಟ್ಟು ತಂತ್ರಜ್ಞರು ಹಾಗೂ ಪಾತ್ರಗಳಿಗೆ ಕಲಾವಿದರಿಗಾಗಿ ಚಿತ್ರತಂಡ ಹುಡುಕಾಟ ನಡೆಸಿದ್ದು, ಚಿತ್ರ ಕುರಿತು ಚಿತ್ರತಂಡ ಅಧಿಕೃತ ಘೋಷಣೆಗಳನ್ನು ಇನ್ನು ಕೆಲವೇ ದಿನಗಳಲ್ಲಿ ಮಾಡಲಿದೆ ಎನ್ನಲಾಗುತ್ತಿದೆ. 

ದುಬಾರಿ ಬಳಿಕ ಧ್ರುವ ಸರ್ಜಾ ಅವರು ರಾಘವೇಂದ್ರ ಹೆಗಡೆ ನಿರ್ದೇಶನದ ಜಗ್ಗು ದಾದಾ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ನಿರ್ದೇಶಕ ಎ ಹರ್ಷ ಹಾಗೂ ಎಪಿ ಅರ್ಜುನ್ ಅವರೊಂದಿಗೂ ಚಿತ್ರವೊಂದರ ಕುರಿತು ಮಾತುಕತೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. 

SCROLL FOR NEXT