ನಟಿ ರಚಿತಾ ರಾಮ್ 
ಸಿನಿಮಾ ಸುದ್ದಿ

'ಲವ್ ಯೂ ರಚ್ಚು'' ಚಿತ್ರೀಕರಣ ವೇಳೆ ದುರಂತ: ವಿಚಾರಣೆಗೆ ನಟಿ ರಚಿತಾ ರಾಮ್ ಹಾಜರು

ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣ ವೇಳೆ ಸಂಭವಿಸಿದ್ದ ಫೈಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ಇಂದು ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು.

ರಾಮನಗರ: ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣ ವೇಳೆ ಸಂಭವಿಸಿದ್ದ ಫೈಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ಇಂದು ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು. ರಾಮನಗರ ಡಿವೈಎಸ್ಪಿ ಮೋಹನ್ ಕುಮಾರ್ ಅರ್ಧ ಗಂಟೆ ಕಾಲ ವಿಚಾರಣೆ ನಡೆಸಿ ನಟಿಯಿಂದ  ಹೇಳಿಕೆಯನ್ನು ದಾಖಲಿಸಿಕೊಂಡರು.

 ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಚಿತಾ ರಾಮ್,  ಘಟನೆ ನಡೆದಾಗ ನಾನು ಸ್ಥಳದಲ್ಲಿ ಇರಲಿಲ್ಲ. ಈ ಬಗ್ಗೆ ಮಾಧ್ಯಮ, ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ತಿಳಿಯಿತು. ಈ ಕುರಿತು ಪೊಲೀಸರಿಗೆ ವಿವರಣೆ ನೀಡಿರುವುದಾಗಿ ತಿಳಿಸಿದರು.

ಘಟನೆ ಹೇಗಾಯಿತು ಎಂಬುದರ ಬಗ್ಗೆ ಗೊತ್ತಿಲ್ಲ. ಸಾಹಸ ದೃಶ್ಯಗಳಲ್ಲಿ ನಟಿಯರಿಗೆ ಹೆಚ್ಚು ಕೆಲಸ ಇರುವುದಿಲ್ಲ. ಹೀಗಾಗಿ ಅಲ್ಲಿನ  ಸುರಕ್ಷತಾ ಕ್ರಮಗಳ ಬಗ್ಗೆ ನನ್ನಗೆ ಯಾವುದೇ  ಮಾಹಿತಿ ಇಲ್ಲ ಎಂದು ಅವರು ಹೇಳಿದರು. 

ಈ ಮಧ್ಯೆ ಪ್ರಕರಣದಲ್ಲಿ  ನಿರ್ದೇಶಕ ಶಂಕರಯ್ಯ,  ಫೈಟ್ ಮಾಸ್ಟರ್  ವಿನೋದ್ ಕುಮಾರ್  ಮತ್ತು ಕ್ರೇನ್ ಚಾಲಕ ಮಹದೇವ್  ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೌಂಟರ್; ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ; ಸ್ಪೀಕರ್ ಚುನಾವಣೆ ಬಹಿಷ್ಕಾರ

ಅಕಾಲಿ ದಳ ಮುಖ್ಯಸ್ಥ ಸುಖ ಬೀರ್ ಸಿಂಗ್ ಮೇಲೆ 'ಕಿರ್ಪಾನ್' ನಿಂದ ದಾಳಿ: ಗುರುದ್ವಾರದ ಸೇವಕನಿಂದಲೇ ಕೃತ್ಯ! ಆರೋಪಿ ವಶಕ್ಕೆ

ಕರ್ನಾಟಕ ಪುರುಷರ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ವಿನಯ್ ಕುಮಾರ್ ನೇಮಕ

ಪ್ರೀತಿ, ಕ್ರೌರ್ಯ; 2 ವರ್ಷ ನರಕ ಅನುಭವಿಸಿದೆ, ಖಿನ್ನತೆಗೆ ಒಳಗಾಗಿದ್ದೆ: ಬ್ರೇಕ್‌ಅಪ್ ಬಗ್ಗೆ ಮೌನ ಮುರಿದ 'ನಟ ಸಾರ್ವಭೌಮ' ನಟಿ ಅನುಪಮಾ!

BJP-RSS 'ಜೋಕರ್ ಗಳ ಗುಂಪು' ಎಂದ ರಾಹುಲ್ ಗಾಂಧಿ! ವಿಶ್ವ ನಾಯಕರನ್ನು 'ಅಪ್ಪಿಕೊಳ್ಳುವ' ಪ್ರಧಾನಿ ಮೋದಿಯ ವಿದೇಶಾಂಗ ನೀತಿಯ ಬಗ್ಗೆ ಲೇವಡಿ