ಲವ್ 360 ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

'ಲವ್ 360' ನವಿರಾದ ಪ್ರೇಮಕಥೆ: ನಿರ್ದೇಶಕ ಶಶಾಂಕ್

ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿಯಂತಹ ಚಲನಚಿತ್ರಗಳ ನಿರ್ದೇಶಕ ಶಶಾಂಕ್ ಅತ್ಯುತ್ತಮವಾದ ಮತ್ತೊಂದು ಸಿನಿಮಾವನ್ನು ಮಾಡಲು ಮರಳಿದ್ದಾರೆ.

ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿಯಂತಹ ಚಲನಚಿತ್ರಗಳ ನಿರ್ದೇಶಕ ಶಶಾಂಕ್ ಅತ್ಯುತ್ತಮವಾದ ಮತ್ತೊಂದು ಸಿನಿಮಾವನ್ನು ಮಾಡಲು ಮರಳಿದ್ದಾರೆ.

ಲವ್ 360 ಸಿನಿಮಾದಲ್ಲಿ ನಿರ್ದೇಶಕರು ಚಿತ್ರದಲ್ಲಿ ಪ್ರವೀಣ್ ಎಂಬ ಹೊಸ ನಟನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ.

ಲವ್ 360 ಹೆಸರಿನ ಈ ಚಿತ್ರದಲ್ಲಿ ರಚನಾ ಇಂದರ್ ನಾಯಕಿಯಾಗಿ ನಟಿಸಿದ್ದಾರೆ. ಆಗಸ್ಟ್ 27 ರಂದು ಚಿತ್ರೀಕರಣ ಆರಂಭಿಸಲು ಶಶಾಂಕ್ ಯೋಜಿಸುತ್ತಿದ್ದಾರೆ. ರೊಮ್ಯಾಂಟಿಕ್  ಕಥೆಯ ಫರ್ಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.

ಚಿತ್ರದ ಫರ್ಸ್ಟ್ ಲುಕ್ ನಲ್ಲಿ ಭಾವನೆಗಳ ಮಿಶ್ರಣವಾಗಿದೆ ಎಂಬುದನ್ನು ತೋರಿಸುತ್ತದೆ,  ಇದೊಂದು ತೀವ್ರ ತರವಾದ ಪ್ರೇಮಕಥೆಯಾಗಿದ್ದು, ಪ್ರತಿಯೊಂದು ಚೌಕಟ್ಟೂ ವಿಭಿನ್ನ ಭಾವನೆಗಳಿಂದ ತುಂಬಿರುತ್ತದೆ ಎಂದು ಶಶಾಂಕ್ ಹೇಳಿದ್ದಾರೆ. 

ಲವ್ 360 ಸಿನಿಮಾ ಹುಡುಗ ಮತ್ತು ಹುಡುಗಿಯ ನಡುವಿನ ಅಪ್ರತಿಮ ಪ್ರೀತಿಯನ್ನು ಎತ್ತಿ ತೋರಿಸುತ್ತದೆ ಮತ್ತು ಎಲ್ಲಾ ಸಂದರ್ಭಗಳಲ್ಲಿ ಅವರು ಹೇಗೆ ಪರಸ್ಪರ ಒಬ್ಬರಿಗೊಬ್ಬರು ಹೇಗೆ ಒತ್ತಾಸೆಯಾಗಿ ನಿಲ್ಲುತ್ತಾರೆ ಎಂಬುದು ಸಿನಿಮಾ ಕಥೆಯಾಗಿದೆ.

ಲವ್ 360 ಒಂದು ಕಾಲ್ಪನಿಕ ಕಥೆಯಾಗಿದ್ದರೂ ಸಹ ನೈಜವಾದ ನಿರೂಪಣೆಯಿಂದ ಕೂಡಿದೆ. ಲವ್ 360 ಅನ್ನು ನಿರ್ದೇಶಕರ ಹೋಮ್ ಬ್ಯಾನರ್ ಶಶಾಂಕ್ ಸಿನಿಮಾ ಅಡಿಯಲ್ಲಿ ತಯಾರು ಮಾಡಲಾಗುತ್ತಿದೆ.

ಸಿನಿಮಾಗೆ ಅರ್ಜುನ್ ಜನ್ಯ ಸಂಗೀತವಿದ್ದು, ಅಭಿಲಾಷ್ ಕಲಾತಿ ಛಾಯಾಗ್ರಾಹಣವಿದೆ. ಶುಕ್ರವಾರ ಚಿತ್ರೀಕರಣವನ್ನು ಆರಂಭಿಸಲು ತಂಡವು ಸಿದ್ಧವಾಗುತ್ತಿದೆ ಮತ್ತು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ